ಸ್ನಾತಕೋತ್ತರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ಅಭಿಮುಖೀಕರಣ ಕಾರ್ಯಕ್ರಮ
ಸ್ನಾತಕೋತ್ತರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ಅಭಿಮುಖೀಕರಣ ಕಾರ್ಯಕ್ರಮ
ಕಲಬುರಗಿ: ನಗರದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ 2026-27ನೇ ಸಾಲಿನ ಎಂ.ಎ., ಎಂ.ಕಾಂ. ಹಾಗೂ ಎಂ.ಎಸ್ಸಿ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಸ್ವಾಗತ ಮತ್ತು ಅಭಿಮುಖೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಶ್ರೀಮತಿ ಅಶ್ವಿನಿಯವರು ಉದ್ಘಾಟಿಸಿ,ಇಂದಿನ ವಿದ್ಯಾರ್ಥಿಗಳು ಸತತ ಅಧ್ಯಯನ ಶೀಲರಾಗಿ ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಬರಬೇಕೆಂದು ಹೇಳಿದರು. ಪ್ರಾಂಶುಪಾಲರಾದ ಡಾ. ಇಂದುಮತಿ ಪಿ. ಪಾಟೀಲ ಅಧ್ಯಕ್ಷತೆ ವಹಿಸಿದ್ರು.
ಈಸಂದರ್ಭದಲ್ಲಿ ಸ್ನಾತಕೋತ್ತರ ವಿಭಾಗದ ಡೀನರಾದ ಡಾ. ಮಲ್ಲೇಶಪ್ಪ ಕುಂಬಾರ, ಯು.ಜಿ. ಕಲಾ ವಿಭಾಗದ ಡೀನರಾದ ಡಾ. ವಿಜಯಕುಮಾರ ಸಾಲಿಮನಿ, ಯು.ಜಿ. ವಾಣಿಜ್ಯ ವಿಭಾಗದ ಡೀನರಾದ ಡಾ. ರಾಜಕುಮಾರ ಸಲಗರ, ವಿಜ್ಞಾನ ವಿಭಾಗದ ಡೀನರಾದ ಡಾ. ದವಲಪ್ಪ ಬಿ.ಎಚ್. ಡಾ. ರವೀಂದ್ರಕುಮಾರ ಭಂಡಾರಿ,ಡಾ. ಬಲಭೀಮ ಸಾಂಗ್ಲಿ,ಡಾ. ಬೆಣ್ಣೂರ ವಿಶ್ವನಾಥ, ಐಕ್ಯೂಎಸಿ ಸಂಯೋಜಕರಾದ ಮಹೇಶ, ಪತ್ರಾಂಕಿತ ವ್ಯವಸ್ಥಾಪಕರಾದ ಅಜಯಸಿಂಗ ತಿವಾರಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಮೊದಲ ಅಧಿವೇಶನದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕೌಶಲ್ಯಗಳ ಕುರಿತು ಉಪನ್ಯಾಸ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಅಪ್ಪ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರಾದ ಶಂಕರಗೌಡ ಹೊಸಮನಿ ಮಾತನಾಡಿದರು. ಗಣಕ ವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕ ರಾದ ಡಾ. ಶಶಿಕಿರಣ ಹಂಚನಾಳ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಲಕ್ಷ್ಮೀಕಾಂತ ಪಂಚಾಳ ನಿರ್ವಹಣೆ ಮಾಡಿದರು.
ನಂತರ ಸಂಶೋಧನಾ ವಿಧಾನಶಾಸ್ತ್ರ ಹಾಗೂ ಎನ್ಇಟಿ, ಎಸ್ಎಲ್ಇಟಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಉಪನ್ಯಾಸ ನಡೆಯಿತು. ಮಹಾಗಾಂವ ಕ್ರಾಸ್ನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಶ್ವರಾಜ ಮಠಪತಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಯು.ಜಿ. ವಾಣಿಜ್ಯ ವಿಭಾಗದ ಡೀನ್ ಹಾಗೂ ಪ್ರಾಧ್ಯಾಪಕರಾದ ಡಾ. ರಾಜಕುಮಾರ ಸಲಗರ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾದ ಡಾ. ಭಾಗ್ಯಲಕ್ಷ್ಮೀ ನಿರ್ವಹಣೆ ಮಾಡಿದರು.ನಂತರ ಸಮಾರೋಪ ಸಮಾರಂಭದಲ್ಲಿ ಪಿ.ಜಿ.ವಿಭಾಗದ ಡೀನರಾದ ಡಾ.ಮಲ್ಲೇಶಪ್ಪ ಕುಂಬಾರವಾರು ಮುಖ್ಯ ಅಥಿತಿಗಳಾಗಿ ಆಗಮಿಸಿ ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು
ಪ್ಲೇಸ್ಮೆಂಟ್ ಸೆಲ್ ಘಟಕದ ಸಂಯೋಜಕರಾದ ಡಾ. ಮಹಾಂತೇಶ ಸ್ವಾಮಿ, ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಅನುಸೂಯಾ ಗಾಯಕವಾಡ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ. ಮೇರಿ ಮ್ಯಾಥ್ಯೂಸ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುಜಾತಾ ದೊಡ್ಡಮನಿ, ಗಣಿತ ವಿಭಾಗದ ಮುಖ್ಯಸ್ಥರಾದ ಡಾ. ಮಹಾಂತೇಶ ಎನ್. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ ಕಲಬುರಗಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಾಗಪ್ಪ ಗೋಗಿ, ಸೂಕ್ಷ್ಮಜೀವವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ರಾಮಕೃಷ್ಣ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಮಿನಾಕ್ಷಿ ಕೆ.ಸಿ.ರವರು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.
ಡಾ. ಅನುಸೂಯಾ ಗಾಯಕವಾಡ ಪ್ರಾರ್ಥನಾ ಗೀತೆ ಹಾಡಿದರು.ಡಾ. ಭಾಗ್ಯಲಕ್ಷ್ಮೀರವರು ಅಥಿತಿ ಗಣ್ಯರನ್ನು ಸ್ವಾಗತಿಸಿದರು.ಡಾ. ರಾಜಕುಮಾರ ಸಲಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಲ್ಲಿಕಾರ್ಜುನ ಶೆಟ್ಟಿ ಅವರು ವಂದಿಸಿದರು.ಡಾ. ಬಲಭೀಮ ಸಾಂಗ್ಲಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಡೀನರು, ಪಿ.ಜಿ ವಿವಿಧ ಘಟಕದ ಅಧಿಕಾರಿಗಳು ಮತ್ತು ಮುಖ್ಯಸ್ಥರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

