ಶಶೀಲ್ ಜಿ. ನಮೋಶಿಯವರ ನಿರಂತರ ಪ್ರಯತ್ನಕ್ಕೆ ಫಲ: ಪ್ರೌಢಶಾಲಾ ಸಹಶಿಕ್ಷಕರ ಮುಖ್ಯಶಿಕ್ಷಕರ ಹುದ್ದೆ ಬಡ್ತಿ ಪ್ರಕ್ರಿಯೆಗೆ ನವೆಂಬರ್ 23ರಂದು ದಿನಾಂಕ ನಿಗದಿ

ಶಶೀಲ್ ಜಿ. ನಮೋಶಿಯವರ ನಿರಂತರ ಪ್ರಯತ್ನಕ್ಕೆ ಫಲ: ಪ್ರೌಢಶಾಲಾ ಸಹಶಿಕ್ಷಕರ ಮುಖ್ಯಶಿಕ್ಷಕರ ಹುದ್ದೆ ಬಡ್ತಿ ಪ್ರಕ್ರಿಯೆಗೆ ನವೆಂಬರ್ 23ರಂದು ದಿನಾಂಕ ನಿಗದಿ

ಶಶೀಲ್ ಜಿ. ನಮೋಶಿಯವರ ನಿರಂತರ ಪ್ರಯತ್ನಕ್ಕೆ ಫಲ: ಪ್ರೌಢಶಾಲಾ ಸಹಶಿಕ್ಷಕರ ಮುಖ್ಯಶಿಕ್ಷಕರ ಹುದ್ದೆ ಬಡ್ತಿ ಪ್ರಕ್ರಿಯೆಗೆ ನವೆಂಬರ್ 23ರಂದು ದಿನಾಂಕ ನಿಗದಿ

ಕಲಬುರಗಿ: ಪ್ರೌಢಶಾಲಾ ಸಹಶಿಕ್ಷಕರಿಂದ ಮುಖ್ಯಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂಬ ಶಿಕ್ಷಕ ಬಂಧುಗಳ ಬಹುದಿನಗಳ ಬೇಡಿಕೆಗೆ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿಯವರು ನಡೆಸಿದ ನಿರಂತರ ಪ್ರಯತ್ನದ ಫಲವಾಗಿ ಈಗ ಮಹತ್ವದ ಸ್ಪಂದನೆ ದೊರೆತಿದೆ.

ಕಳೆದ ಹಲವು ವರ್ಷಗಳಿಂದ ಮುಖ್ಯಶಿಕ್ಷಕರ ಹುದ್ದೆಯ ಬಡ್ತಿಗಾಗಿ ಅರ್ಹ ಶಿಕ್ಷಕರು ಕಾಯುತ್ತಿದ್ದರು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಶಶೀಲ್ ಜಿ. ನಮೋಶಿಯವರು ಶಿಕ್ಷಕರ ಪರವಾಗಿ ನಿರಂತರವಾಗಿ ಧ್ವನಿ ಎತ್ತಿ, ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಬಡ್ತಿ ಪ್ರಕ್ರಿಯೆ ಶೀಘ್ರವಾಗಿ ಪೂರ್ಣಗೊಳಿಸುವಂತೆ ವೈಯಕ್ತಿಕ ಮುತುವರ್ಜಿ ವಹಿಸಿ ಒತ್ತಾಯಿಸುತ್ತಿದ್ದರು.

ಶಿಕ್ಷಕರ ಈ ಬಹುದಿನಗಳ ಬೇಡಿಕೆ ಕೇವಲ ಮನವಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬರಬೇಕು ಎಂಬ ಉದ್ದೇಶದಿಂದ ಇಲಾಖೆಯ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ಮೂಲಕ ಬಡ್ತಿ ಪ್ರಕ್ರಿಯೆಗೆ ವೇಗ ನೀಡಲು ಶಶೀಲ್ ಜಿ. ನಮೋಶಿಯವರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.

ಇವರ ನಿರಂತರ ಪ್ರಯತ್ನಗಳ ಫಲವಾಗಿ ಕಲಬುರಗಿ ವಿಭಾಗದ ಅಪರ ಆಯುಕ್ತರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯವರು ದಿನಾಂಕ 17-11-2026ರಂದು ಆದೇಶ ಹೊರಡಿಸಿದ್ದು, ಅದರಂತೆ ದಿನಾಂಕ 23-11-2026ರಂದು ಬೆಳಿಗ್ಗೆ 11:30 ಗಂಟೆಗೆ ಕಲಬುರಗಿಯ ಕ್ಷೇತ್ರ ಆಯುಕ್ತರ ಕಚೇರಿಯಲ್ಲಿ ಬಡ್ತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸ್ಥಳ ಆಯ್ಕೆ ಕೌನ್ಸೆಲಿಂಗ್ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.

ಶಿಕ್ಷಕರ ಸಮಸ್ಯೆಗಳನ್ನು ಕೇವಲ ಆಲಿಸುವುದಷ್ಟೇ ಅಲ್ಲದೆ, ಅವುಗಳ ಪರಿಹಾರಕ್ಕಾಗಿ ನಿರಂತರವಾಗಿ ಪ್ರಯತ್ನಿಸಿದಾಗ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಶಿಕ್ಷಕರ ಹಿತಾಸಕ್ತಿಯೇ ತಮ್ಮ ಆದ್ಯತೆಯಾಗಿದ್ದು, ಶಿಕ್ಷಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸದಾ ಬದ್ಧನಾಗಿದ್ದೇನೆ ಎಂದು ಶಶೀಲ್ ಜಿ. ನಮೋಶಿಯವರು ತಿಳಿಸಿದ್ದಾರೆ.

ತಮ್ಮ ಪ್ರಯತ್ನಕ್ಕೆ ಸ್ಪಂದಿಸಿ ಬಡ್ತಿ ಪ್ರಕ್ರಿಯೆಗೆ ದಿನಾಂಕ ನಿಗದಿಪಡಿಸಿದ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಬಹುದಿನಗಳಿಂದ ಬಡ್ತಿಗಾಗಿ ಕಾಯುತ್ತಿದ್ದ ಅರ್ಹ ಶಿಕ್ಷಕ ಬಂಧುಗಳಿಗೆ ಈ ಬೆಳವಣಿಗೆ ಹೊಸ ಭರವಸೆ ಮೂಡಿಸಿದೆ. ಬಡ್ತಿ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ಸಮಸ್ತ ಶಿಕ್ಷಕ ಬಂಧುಗಳಿಗೆ ಶಶೀಲ್ ಜಿ. ನಮೋಶಿಯವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ವೃತ್ತಿಜೀವನಕ್ಕೆ ಶುಭ ಹಾರೈಸಿದ್ದಾರೆ.