ಕನ್ನಡ ಸಾಹಿತ್ಯ ಶ್ರೀಮಂತವಾದದ್ದು - ಮುಡಬಿ ಗುಂಡೆರಾವ್.

ಕನ್ನಡ ಸಾಹಿತ್ಯ ಶ್ರೀಮಂತವಾದದ್ದು - ಮುಡಬಿ ಗುಂಡೆರಾವ್.

ಕನ್ನಡ ಸಾಹಿತ್ಯ ಶ್ರೀಮಂತವಾದದ್ದು - ಮುಡಬಿ

ಗುಂಡೆರಾವ್.

ಸೇಡಂ : ಕವಿರಾಜಮಾರ್ಗದಿಂದ ಆರಂಭವಾದ ಈ ಯುಗವು ಪಂಪ,ರನ್ನ,ಪೊನ್ನರಂತಹ ಮಹಾಕವಿಗಳ ಚಂಪೂ ಕಾವ್ಯಗಳಿಂದ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ಸಂಶೋಧಕ ಮುಡುಬಿ ಗುಂಡೇರಾವ್ ಹೇಳಿದರು.

ಪಟ್ಟಣದ ಓಂ ಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಶ್ರೀವಿಜಯ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ನುಡಿ ಹಬ್ಬ ಹಾಗೂ ಕನ್ನಡ ಸಾಹಿತ್ಯದಲ್ಲಿ ಸಾಂಸ್ಕೃತಿಕ ಅಸ್ಮಿತೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಕನ್ನಡ ಸಾಹಿತ್ಯಕ್ಕೆ ಮೊಟ್ಟಮೊದಲ ಉಪಲಬ್ಧ ಗ್ರಂಥ ಕೊಟ್ಟಿದ್ದು ಈ ನಾಡಿನ ನೆಲವೇ,ಇಂತಹ ನಾಡಿನಲ್ಲಿ ಜನಿಸಿದ ನಾವು ನೀವುಗಳೇ ಪುಣ್ಯವಂತರು ಎಂದು ಬಣ್ಣಿಸಿದರು.

ಶ್ರೀ ಕೊತ್ತಲ ಬಸವೇಶ್ವರ ಐಟಿಐ ಕಾಲೇಜಿನ ಆಡಳಿತ ಅಧಿಕಾರಿಗಳಾದ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೂರ್ಯಕಾಂತ ಲಿಂಗದಾಳ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದು,

ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿರುವದು ಕನ್ನಡ ಸಾಹಿತ್ಯಕ್ಕೆ ಎಂದು ಹರ್ಷ ವ್ಯಕ್ತಪಡಿಸಿದರು 

ಓಂ ಸಾಯಿ ಪದವಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಮಹೇಶ್ ಧರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿಗಳಾದ ಉಮಾಕಾಂತ್,ಓಂ ಸಾಯಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಿಜಯಕುಮಾರ,ಸೇರಿದಂತೆ ಇತರರು ಉಪಸ್ಥಿತರಿದ್ದರು, ತಿರುಪತಿ ನಿರೂಪಿಸಿದರು,

ಬಸವರಾಜ ಸ್ವಾಗತಿಸಿದರು,ಸಂತೋಷ್ ವಂದಿಸಿಸದರು.