ಗುಲಬರ್ಗಾ ವಿಶ್ವವಿದ್ಯಾಲಯದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಯಲ್ಲಿ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಸಲಹೆ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಯಲ್ಲಿ ಉತ್ಸಾಹವಿರಲಿ
ಗುಲಬರ್ಗಾ ವಿಶ್ವವಿದ್ಯಾಲಯದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಯಲ್ಲಿ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಸಲಹೆ
ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಯಲ್ಲಿ ಉತ್ಸಾಹವಿರಲಿ
ಕಲಬುರಗಿ: ಕಲ್ಯಾಣ ಕರ್ನಾಟಕದ ಉತ್ಸವ ಆಚರಣೆಯಲ್ಲಿ ಉತ್ಸಾಹವಿರಲಿ. ಈ ಭಾಗದ ವಿಮೋಚನಾ ಹೋರಾಟದಲ್ಲಿ ಅನೇಕ ಮಹನೀಯರ ಪರಿಶ್ರಮವಿದೆ. ಹಿರಿಯರು ಅನುಭವಿಸಿದ ನೋವು, ಯಾತನೆ ಮತ್ತು ಹೋರಾಟದ ಇತಿಹಾಸವನ್ನು ಮರೆತರೆ ಅದಕ್ಕೆ ಕ್ಷಮೆಯಿಲ್ಲ. ಹಿರಿಯರ ಹೋರಾಟ ಮತ್ತು ಇತಿಹಾಸವನ್ನು ಪ್ರತಿಯೊಬ್ಬರು ಸ್ಮರಿಸಿಕೊಂಡು ಕಲ್ಯಾಣ ಕರ್ನಾಟಕ ಉತ್ಸವವನ್ನು ನಾವೆಲ್ಲರೂ ಉತ್ಸವದಿಂದ ಆಚರಿಸಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂಭಾಗದಲ್ಲಿ ಆಯೋಜಿಸಿದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಭಾವಚಿತ್ರಗಳಿಗೆ ಪುಷ್ಪ ಸಮರ್ಪಿಸಿ ಮಾತನಾಡಿ ಈ ಭಾಗದ ಹಿರಿಯ ಹೋರಾಟಗಾರರು ಬ್ರಿಟೀಷರ ದಾಸ್ಯ ಮತ್ತು ಸಂಕೊಲೆ, ಹೈದ್ರಾಬಾದ ನಿಜಾಂನ ದುರಾಡಳಿತ ಮತ್ತು ಶೋಷಣೆಗಳಿಂದ ನೋವು ಅನುಭವಿಸಿದ್ದಾರೆ. ಹಿರಿಯರ ದಿಟ್ಟ ನಿಲುವು ಮತ್ತು ರಾಷ್ಟç ನಾಯಕರ ಕಾರ್ಯಾಚರಣೆಯಿಂದ ಸ್ವಾತಂತ್ರö್ಯ ಪಡೆಯಲಾಗಿದೆ. ಇಂದಿನ ತಲೆಮಾರಿನ ಯುವಕರು ಮತ್ತು ವಿದ್ಯಾರ್ಥಿಗಳು ಸ್ವಂತ ವಿವೇಚನೆ ಸ್ವಾತಂತ್ರö್ಯ ಹೋರಾಟದ ಸಮಗ್ರ ಅಧ್ಯಯನದೊಂದಿಗೆ ೩೭೧ಜೆ ವಿಶೇಷ ಸ್ಥಾನಮಾನ, ಅವಕಾಶ ಮತ್ತು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸುಸ್ಥಿರ ಭವಿಷ್ಯ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲಬುರಗಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಅಶೋಕ ಮಣುರೆ ಮುಖ್ಯ ಅತಿಥಿಯಾಗಿ ಮಾತನಾಡಿ ಭಾರತ ದೇಶವನ್ನು ಸುಮಾರು ೨೦೦ ವರ್ಷಗಳ ಕಾಲ ಬ್ರಿಟೀಷರು ದುರಾಡಳಿತ ವಿರುದ್ಧ ಮಹಾತ್ಮ ಗಾಂಧಿ, ನೆಹರು, ಚಂದ್ರಶೇಖರ್ ಅಜಾದ್, ಡಾ. ಬಿ. ಆರ್. ಅಂಬೇಡ್ಕರ್ ಅವರು ಚಳುವಳಿಗೆ ಅಮೂಲ್ಯ ಸಂದೇಶ ನೀಡಿ ೧೯೫೭ರಲ್ಲಿ ನಡೆದ ಪ್ರಥಮ ಸ್ವಾತಂತ್ರö್ಯ ಸಂಗ್ರಾಮದಿAದ ಹೋರಾಟದ ಮೂಲಕ ಆಗಸ್ಟ್ ೧೫, ೧೯೪೭ ರಂದು ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟರು. ಕಲ್ಯಾಣ ಕರ್ನಾಟಕ ಪ್ರದೇಶಗಳು ಹೈದ್ರಾಬಾದ್ ನಿಜಾಂ ಮತ್ತು ರಜಕಾರರ ದಬ್ಬಾಳಿಕೆ ಮತ್ತು ದೌರ್ಜನ್ಯಗಳಿಂದ ನಲುಗಿದ್ದವು. ನಿಜಾಂ ನೇತೃತ್ವದಲ್ಲಿ ರಜಕಾರರ ಕೊಲೆ, ಸುಲಿಗೆ, ಅತ್ಯಾಚಾರ ಮುಂತಾದ ಅಮಾನುಷ ಕೃತ್ಯಗಳನ್ನು ದಿಕ್ಕರಿಸಿದ ಕಲ್ಯಾಣ ಕರ್ನಾಟಕದ ಭಾಗದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ನಾಯಕರುಗಳಾದ ಶರಣುಗೌಡ ಇನಾಂದಾರ, ಚನ್ನಬಸಪ್ಪ ಕುಳಗೇರಿ, ಈರಪ್ಪ ಯತ್ನಾಳ, ಕೊಲ್ಲೂರು ಮಲ್ಲಪ್ಪ, ಚಂದ್ರಶೇಖರ್ ಪಾಟೀಲ ಮಾಗಾಂವ, ಡಿ.ಆರ್. ಅವರಾದಿ, ವಿಶ್ವನಾಥ ರೆಡ್ಡಿ ಮುದ್ನಾಳ, ಜಿ.ಕೆ. ಪ್ರಾಣೇಶಾಚಾರ್, ಚಿಟಗುಪ್ಪದ ಹಕೀಕತರಾವ್ ಮುಂತಾದವರು ತ್ಯಾಗ ಮತ್ತು ಬಲಿದಾನದಿಂದ ಕಲ್ಯಾಣ ಕರ್ನಾಟಕ ಸೆಪ್ಟಂಬರ್ ೧೭, ೧೯೪೮ ರಂದು ವಿಮೋಚನೆಗೊಂಡಿತು ಎಂದು ವಿವರಿಸಿದರು.
ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ರಮೇಶ ಲಂಡನಕರ್, ಮೌಲ್ಯಮಾಪನ ಕುಲಸಚಿವೆ ಪ್ರೊ. ಅಶ್ವಿನಿ, ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕ ಹಾಗೂ ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ ಸೇರಿದಂತೆ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ಪ್ರೊ. ಎಚ್. ಟಿ. ಪೋತೆ, ಪ್ರೊ. ಹೂವಿನಬಾವಿ ಬಾಬಣ್ಣ, ಪ್ರೊ. ಆನಂದ ಸವಧಾನಿ, ಪ್ರೊ. ಟಿ. ಶಂಕರಪ್ಪ, ಪ್ರೊ. ಬಸವರಾಜ ಸಣ್ಣಕ್ಕಿ, ಪ್ರೊ. ದೇವಿದಾಸ ಮಾಲೆ ಸೇರಿದಂತೆ ಇನ್ನಿತರರಿದ್ದರು. ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಂಗೀತ ವಿಭಾಗದ ಅತಿಥಿ ಉಪನ್ಯಾಸಕಿ ಡಾ. ಲಕ್ಷಿö್ಮಶಂಕರ ಜೋಷಿ ಹಾಗೂ ಸಂಗಡಿಗರು ರಾಷ್ಟçಗೀತೆ ಮತ್ತು ರಾಷ್ಟಿçÃಯ ಗೀತೆ ಹಾಡಿದರು. ದೈಹಿಕ ಶಿಕ್ಷಣ ವಿಭಾಗದ ಪ್ರಾಂಶುಪಾಲ ಡಾ. ಹನುಮಂತ ಜಂಗೆ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಡಾ. ಎಂ.ಬಿ. ಕಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಬಾಕ್ಸ್ : ಕೆಕೆಆರ್‌ಡಿಬಿಗೆ ಸರ್ಕಾರ ಪ್ರತಿವರ್ಷ ಐದು ಸಾವಿರ ಕೋಟಿ ಬಜೆಟ್ ನೀಡುತ್ತಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಮತ್ತು ಪಾರದರ್ಶಕ ಅನುಷ್ಠಾನ ಆಗಬೇಕು. ನಂಜುAಡಪ್ಪ ವರದಿಯಂತೆ ಪ್ರಾದೇಶಿಕ ಅಸಮತೋಲನ ನಿವಾರಣೆ ಆಗಬೇಕು. ಇಲ್ಲಿನ ಕೃಷಿ, ನೀರಾವರಿ, ಶಿಕ್ಷಣ, ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಕೈಗೊಳ್ಳಬೇಕು. ಹಲವು ದಶಕಗಳಿಂದ ವಿಶೇಷ ಸ್ಥಾನಮಾನಕ್ಕಾಗಿ ನಡೆದ ಹೋರಾಟ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮುತುವರ್ಜಿಯಿಂದ ಕೇಂದ್ರದ ಯುಪಿಎ ಸರ್ಕಾರದ ಅವಧಿಯಲ್ಲಿ ೩೭೧ಜೆ ತಿದ್ದುಪಡಿಯಿಂದ ಅನುಕೂಲವಾಗಿದೆ. ಈ ಭಾಗದ ಹಿಂದುಳಿದ ಮಕ್ಕಳಿಗೆ ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಮೀಸಲಾತಿ ದೊರೆತಿದೆ. ಉದ್ಯೋಗ ಅವಕಾಶಗಳು ಸಿಗುತ್ತಿವೆ. ಮೂಲ ಸೌಕರ್ಯ ಮತ್ತಷ್ಟು ಪ್ರಗತಿ ಆಗಬೇಕು. ಪ್ರತಿಭೆಯುಳ್ಳ ವಿದ್ಯಾರ್ಥಿಗಳು ಶಿಕ್ಷಣ, ಸಂಘಟನೆ ಒಗ್ಗೂಡಿ ಕೆಲಸ ಮಾಡಬೇಕಿದೆ. ಹಿಂದುಳಿದ ಹಣೆಪಟ್ಟಿ ಅಳಿಸಲು ಯುವಕರು ಉನ್ನತ ಹುದ್ದೆಗಳನ್ನು ಪಡೆದು ಬದಲಾವಣೆಗೆ ಪ್ರಯತ್ನಿಸಬೇಕು. ಕಲ್ಯಾಣ ಭಾಗಗಳ ನಿಜವಾದ ಕಲ್ಯಾಣಕ್ಕಾಗಿ ನ್ಯಾಯಸಮ್ಮತ ಹೋರಾಟ ಮಾಡಬೇಕು. - ಅಶೋಕ ಮಣೂರ
ನ್ಯಾಯವಾದಿಗಳು, ಕಲಬುರಗಿ ಉಚ್ಚ ನ್ಯಾಯಾಲಯ

