ಭಾಲ್ಕಿ ತಾಲೂಕಿನ ಹಲಬರ್ಗಾ ಹೊಬಳಿಯ ಕೆ ಪಿ ಎಸ್ ಪ್ರೌಢಶಾಲೆಯಲ್ಲಿ "ಭಾರತದ ಹಬ್ಬಗಳ ವೈಚಾರಿಕ ನೆಲೆಗಳು" ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ:

ಭಾಲ್ಕಿ ತಾಲೂಕಿನ ಹಲಬರ್ಗಾ ಹೊಬಳಿಯ ಕೆ ಪಿ ಎಸ್ ಪ್ರೌಢಶಾಲೆಯಲ್ಲಿ "ಭಾರತದ ಹಬ್ಬಗಳ ವೈಚಾರಿಕ ನೆಲೆಗಳು" ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ:

ಭಾಲ್ಕಿ ತಾಲೂಕಿನ ಹಲಬರ್ಗಾ ಹೊಬಳಿಯ ಕೆ ಪಿ ಎಸ್ ಪ್ರೌಢಶಾಲೆಯಲ್ಲಿ "ಭಾರತದ ಹಬ್ಬಗಳ ವೈಚಾರಿಕ ನೆಲೆಗಳು" ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ:

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ ಹಾಗೂ ಕೆ ಪಿ ಎಸ್ ಪ್ರೌಢಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ " ಭಾರತದ ಹಬ್ಬಗಳ ವೈಚಾರಿಕ ನೆಲೆಗಳು " ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮವನ್ನು ಸಾಹಿತಿ ಪುಷ್ಪವತಿ ಚಿರ್ಕುತೆ ಅವರು ಉದ್ಘಾಟಿಸಿದರು. "ಭಾರತದ ಹಬ್ಬಗಳು ಹೊಸ ಪರಂಪರೆಯನ್ನು ಕಟ್ಟಿಕೊಡುತ್ತವೆ. ಹಬ್ಬಗಳ ಆಚರಣೆಯ ಮಹತ್ವವನ್ನು ಮಕ್ಕಳಿಗೂ ತಿಳಿಸಬೇಕು. ಇಂದಿನ ಯುವ ಪೀಳಿಗೆಗೆ ನಮ್ಮ ಸಂಪ್ರದಾಯ ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿ ಶ್ರೀಮತಿ ಧನಲಕ್ಷ್ಮಿ ಪಾಟೀಲ್ ಅವರು ವಿಶೇಷ ಉಪನ್ಯಾಸ ನೀಡಿದರು. ನಮ್ಮ ದೇಶದಲ್ಲಿ ರಾಷ್ಟ್ರೀಯ ಹಬ್ಬಗಳು, ಸಾರ್ವಜನಿಕ ಹಬ್ಬಗಳು ಇವೆ. ಎಲ್ಲರೂ ಒಟ್ಟಾಗಿ ಆಚರಣೆ ಮಾಡಬೇಕು. ದಸರಾ, ದೀಪಾವಳಿ ಇತ್ಯಾದಿ ಹಬ್ಬಗಳನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಆಶಯ ನುಡಿಯನ್ನು ಮಾತನಾಡಿದ ದೈಹಿಕ ಶಿಕ್ಷಕರಾದ ಅಕ್ಕನಾಗಮ್ಮ ಹಾಲಳ್ಳಿ ಅವರು ಹಬ್ಬಗಳ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಪ್ರಿಯದರ್ಶಿನಿ ಮದನಗಾಂವಕರ ಅವರು ಮಾತನಾಡಿ, "ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮವನ್ನು ಬೆಳೆಸಲು ಇಂತಹ ಉಪನ್ಯಾಸಗಳು ಪ್ರೇರಣಾದಾಯಿಯಾಗಿವೆ ಹಬ್ಬಗಳನ್ನು ಆಚರಣೆ ಮಾಡುವ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು " ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ , ಶ್ರೀಮತಿ ಗಂಗಮ್ಮ ಶೀಲವಂತ್, ಅನುರಾಧ ಪಾಟೀಲ್ ಅವರು ಮಾತನಾಡಿದರು. ಗೌರವ ಉಪಸ್ಥಿತರಾಗಿ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕರಾದ ಡಾ. ಮಕ್ತುಂಬಿ ಎಂ. ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರೌಢಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.