ಕನ್ನಡ ನುಡಿ ಹಬ್ಬಕ್ಕೆ ರೈತರ ಮತ್ತು ಸೈನಿಕರ ಪಾದಪೂಜೆ: ಮಲ್ಲಿಕಾರ್ಜುನ ಸಾರವಾಡ

ಕನ್ನಡ ನುಡಿ ಹಬ್ಬಕ್ಕೆ ರೈತರ ಮತ್ತು ಸೈನಿಕರ ಪಾದಪೂಜೆ: ಮಲ್ಲಿಕಾರ್ಜುನ ಸಾರವಾಡ

ಕನ್ನಡ ನುಡಿ ಹಬ್ಬಕ್ಕೆ ರೈತರ ಮತ್ತು ಸೈನಿಕರ ಪಾದಪೂಜೆ: ಮಲ್ಲಿಕಾರ್ಜುನ ಸಾರವಾಡ

ಕಲಬುರಗಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಲಬುರಗಿ ನಗರದಲ್ಲಿ ಜಯ ಕರ್ನಾಟಕ ಸಂಘದ ವತಿಯಿಂದ ಕನ್ನಡ ನುಡಿ ಹಬ್ಬವನ್ನು ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಸಾರವಾಡ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಭಾಷೆಯ ಸಂರಕ್ಷಣೆಗಾಗಿ ಸಂಘವು ನಿರಂತರವಾಗಿ ಹೋರಾಟ ನಡೆಸುತ್ತಿದೆ. ಕನ್ನಡದ ಅಸ್ಮಿತೆ ಸಾರುವ ಈ ಕಾರ್ಯಕ್ರಮದಲ್ಲಿ ದೇಶದ ಬೆನ್ನೆಲುಬಾದ ರೈತರು ಹಾಗೂ ದೇಶದ ಗಡಿಗಳನ್ನು ಕಾಯುವ ಸೈನಿಕರಿಗೆ ಪಾದಪೂಜೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಗುವುದು. ಈ ಮೂಲಕ ಸಮಾನತೆ, ಮಾನವೀಯತೆ ಮತ್ತು ದೇಶಪ್ರೇಮದ ಸಂದೇಶ ಸಾರಲಾಗುವುದು ಎಂದು ಹೇಳಿದರು.

 ನವಂಬರ್ 16ರಂದು ಹೃದಯ ಭಾಗವಾದ ಸೂಪರ್ ಮಾರ್ಕೆಟ್ ದಲ್ಲಿ ಸಾಯಂಕಾಲ 5:00 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

 ಶರಣಬಸವೇಶ್ವರ ಸಂಸ್ಥಾನದ ದೊಡ್ಡಪ್ಪ ಅಪ್ಪ, ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯದ ಕುಲಪತಿ ಸೈಯದ್ ಮಹಮ್ಮದ್ ಅಲಿ ಹುಸೇನಿ, ಬುದ್ಧ ವಿಹಾರದ ಸುನಂದೂ ಬಂತೋಜಿ ಹಾಗೂ ಸೆಂಟ್ ಮೇರಿಸ್‌ನ ಜೋಸೆಫ್ ಪ್ರವೀಣ್ ಸಾನಿಧ್ಯ ವಹಿಸಲಿದ್ದಾರೆ. ಸಚಿವ ಅಜಯ್ ಧರ್ಮಸಿಂಗ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಸವರಾಜ್ ಮತ್ತಿಮೂಡ ಜ್ಯೋತಿ ಬೆಳಗಿಸಲಿದ್ದಾರೆ. ಚಂದು ಪಾಟೀಲ್, ನೀಲಕಂಠ ಮೂಲಗೆ ಅವರು ಕನ್ನಡಾಂಬೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಿದ್ದು, ನಿತಿನ್ ಗುತ್ತೇದಾರ್ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ.

ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಘನ ಉಪಸ್ಥಿತಿ ವಹಿಸಲಿದ್ದು, ಸಂಘದ ರಾಜ್ಯಾಧ್ಯಕ್ಷ ಬಿ.ಎಂ. ಜಗದೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಸಾರವಾಡ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಿರಣ್ ದೇಶಮುಖ್, ಬಾಲಾಜಿ ಗುತ್ತೇದಾರ್, ಮಜರ್ ಅಲಂಖಾನ್, ಪ್ರವೀಣ್ ಪಾಟೀಲ್ ಹರವಾಳ, ಆಲಂದಾರ ಜೈದಿ, ಹರ್ಷಾನಂದ ಗುತ್ತೇದಾರ್, ಸಂತೋಷ್ ಬಿಲಗುಂದಿ, ಸಂಜೀವ ಪಾಟೀಲ್ ಹಾಗೂ ಡಾ. ಫಾರೂಕ್ ಮನ್ನೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

 ದಿವ್ಯಾ ಹಾದರಗಿ, ಆರ್. ರುದ್ರಯ್ಯ, ಸಿದ್ದರಾಮಯ್ಯ ಹಿರೇಮಠ, ಜಸ್ವೀರ್ ಸಿಂಗ್, ರಾಕೇಶ್ ವಾಡೇಕರ್, ರೋಹಿತ್ ಮೈಲಾಪುರ, ಶ್ಯಾಮ್ ಖಂಡೇಲಾಲ್, ಶಾಂತವೀರ ಬಡಿಗೇರ್, ಸಂಪತ್ ಕುಮಾರ್ ವಳಕೇರಿ, ಸಮೀರ್ ಭಗವಾನ್ ಹಾಗೂ ಶರಣಗೌಡ ಪಾಟೀಲ್ ಅತಿಥಿಗಳಾಗಿಷಆಗಮಿಸಲಿದ್ದಾರೆ.

 ಆರ್. ಮುನಿಸ್ವಾಮಿ, ರಜತ್ ಗಗನ್ ರಾಜ್, ವಿಜಯಕುಮಾರ್ ಮಗಧಂಪುರ, ಶಿವಕುಮಾರ್ ಯಾದವ್, ವಿಶ್ವನಾಥ್ ನಾಯಕ್, ಸಂಗಮೇಶ ದಾಸ, ವಿಜಯಕುಮಾರ್ ತೇಗಲತಿಪ್ಪಿ, ಬಸವರಾಜ್ ಇಮ್ದಾಪುರ ಹಾಗೂ ಸುನಿಲ್ ಕುಮಾರ್ ಫುಟ್ಬಾಲ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನವಂಬರ್ 16ರಂದು ಮಧ್ಯಾಹ್ನ 3 ಗಂಟೆಗೆ ನಗರದೇಶ್ವರ ಶಾಲೆಯ ಆವರಣದಿಂದ ಸೂಪರ್ ಮಾರ್ಕೆಟ್‌ವರೆಗೆ ಕನ್ನಡಾಂಬೆಯ ಭಾವಚಿತ್ರ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಹನೀಯರ ಭಾವಚಿತ್ರಗಳ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆರ್ಯ ಸಿಂಘೆ, ಕೃಷ್ಣ ಕಮಸಿಕರ್, ಇಬ್ರಾಹಿಂ ಜಮಾದಾರ್, ಸೋಮರೆಡ್ಡಿ ಮಲ್ಲಾಬಾದ್, ಲಕ್ಷ್ಮಿಕಾಂತ್ ಪಾಟೀಲ್, ಸಂಜನಾ ಪಾಟೀಲ್ ಹಾಗೂ ಸಿದ್ದಲಿಂಗ ರಾಠೋಡ್ ಉಪಸ್ಥಿತರಿದ್ದರು.