ನ.15ರಂದು ಕಲಬುರಗಿಯಲ್ಲಿ ರಾಜ್ಯಮಟ್ಟದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬೃಹತ್ ಪ್ರತಿಭಟನೆ
ನ.15ರಂದು ಕಲಬುರಗಿಯಲ್ಲಿ ರಾಜ್ಯಮಟ್ಟದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬೃಹತ್ ಪ್ರತಿಭಟನೆ
3,827 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು 'ಬಿ' ಗ್ರೇಡ್‌ಗೆ ಉನ್ನತೀಕರಿಸಲು ರಮೇಶ ಸಿಡಿಗೇರ ಆಗ್ರಹ
ಕಲಬುರಗಿ: ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (PDO) ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘದ ಅಧ್ಯಕ್ಷ ರಮೇಶ ಸಿಡಿಗೇರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು ಸಂಘದ ವತಿಯಿಂದ ನವೆಂಬರ್ 15ರಂದು ಕಲಬುರಗಿಯಲ್ಲಿ ರಾಜ್ಯಮಟ್ಟದ ಬೃಹತ್ ಸಭೆ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಲವು ವರ್ಷಗಳಿಂದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಧಿಕಾರಿಗಳ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ನ್ಯಾಯ ಒದಗಿಸುವ ಉದ್ದೇಶದಿಂದ ಈ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಹೇಳಿದರು.
ಸಂಘದ ಪ್ರಮುಖ ಬೇಡಿಕೆಗಳು:
- 3,827 ಹುದ್ದೆಗಳ ಉನ್ನತೀಕರಣ: ರಾಜ್ಯದಲ್ಲಿ ಮಂಜೂರಾದ 6,021 ಹುದ್ದೆಗಳ ಪೈಕಿ 1,500 ಹುದ್ದೆಗಳಿಗೆ ಮಾತ್ರ 'ಬಿ-ಗ್ರೇಡ್' ಆದೇಶ ನೀಡಲಾಗಿದೆ. 694 ಹುದ್ದೆಗಳಿಗೆ ಮಾನಸಿಕ ಸಿದ್ಧತೆ ಹಾಗೂ ಪ್ರಸ್ತಾವನೆ ಮಾಡಲಾಗಿದೆ. ಉಳಿದ 3,827 ಹುದ್ದೆಗಳನ್ನು 'ಬಿ-ಗ್ರೇಡ್' ವೃಂದಕ್ಕೆ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಬೇಕು.
- ಕಡತಗಳ ತಕ್ಷಣ ವಿಲೇವಾರಿ: 2017ರಿಂದ ಅತಿಥಿ ಹಂತಕತೆ ತಲುಪಿದ್ದರೂ ಬಡ್ತಿ, ವರ್ಗಾವಣೆ ನೀತಿ ಸೇರಿದಂತೆ ಹಲವು ಆಡಳಿತಾತ್ಮಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು.
- ದೇಶದಾದ್ಯಂತ ಇರುವ ಪದ್ಧತಿಯಂತೆ ಸಮಾನ ಅವಕಾಶ: ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಹಾಗೂ ಅಧಿಕಾರ ಕಲ್ಪಿಸಬೇಕು.
- 15 ವರ್ಷಗಳಿಂದ ಬಡ್ತಿ ವಂಚಿತ ಅಧಿಕಾರಿಗಳಿಗೆ ನ್ಯಾಯ: ಜೇಷ್ಠತಾ ಪಟ್ಟಿಯ ನಿಯಮಾನುಸಾರ ಬಡ್ತಿ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು.
- 19ಕ್ಕೂ ಹೆಚ್ಚು ಹಕ್ಕುಗಳ ಜಾರಿಗಾಗಿ ಒತ್ತಾಯ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA), ಕೆಟಿಪಿಪಿ ಕಾಯ್ದೆ, ಆಡಳಿತ ಮತ್ತು ಖಜಾನೆ ಸಂಬಂಧಿತ ಸಮಸ್ಯೆಗಳು, ಜನಮರಣ ಹಾಗೂ ಇತರ ಆಡಳಿತಾತ್ಮಕ ವಿಚಾರಗಳನ್ನು ಸರಿಪಡಿಸಬೇಕು.
ಅಲ್ಲದೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸೇವಾ ಭದ್ರತೆ, ಬಡ್ತಿ, ವೇತನ ಮತ್ತು ಇತರ ಸೌಲಭ್ಯಗಳ ಕುರಿತು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಧಿಕಾರಿಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಂಘ ಆಗ್ರಹಿಸಿದೆ ಎಂದು ಹೇಳಿದರು
ಕಾರ್ಯಕ್ರಮದ ವಿವರ:
* ದಿನಾಂಕ: 15-11-2026, ಭಾನುವಾರ
* ಸಮಯ: ಬೆಳಗ್ಗೆ 11 ಗಂಟೆಗೆ
* ಸ್ಥಳ: ಎಸ್.ಬಿ. ಕನ್ವೆನ್ಷನ್ ಹಾಲ್, ಕಲಬುರಗಿ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮನವಿ ಮಾಡಿದರು. ಗೋಷ್ಠಿಯಲ್ಲಿ ರಾಜೇಶ್ವರಿ ಸಾಹು, ವಿಶ್ವನಾಥ್ ಹೆಚ್, ದೇಸಾಯಿ ಉಪಸ್ಥಿತರಿದ್ದರು.

