ಚಿಮ್ಮಾಇದ್ಲಾಯಿ ಗ್ರಾಮ : ಕುಡಿಯುವ ನೀರಿನ ಸಮಸ್ಯೆಗೆ ಶಾಸಕ ಡಾ. ಅವಿನಾಶ ಜಾಧವ್ ಸ್ಪಂದನೆ

ಚಿಮ್ಮಾಇದ್ಲಾಯಿ ಗ್ರಾಮ : ಕುಡಿಯುವ ನೀರಿನ ಸಮಸ್ಯೆಗೆ  ಶಾಸಕ ಡಾ. ಅವಿನಾಶ ಜಾಧವ್ ಸ್ಪಂದನೆ

ಚಿಮ್ಮಾಇದ್ಲಾಯಿ ಗ್ರಾಮ : ಕುಡಿಯುವ ನೀರಿನ ಸಮಸ್ಯೆಗೆ ಶಾಸಕ ಡಾ. ಅವಿನಾಶ ಜಾಧವ್ ಸ್ಪಂದನೆ 

ಟ್ಯಾಂಕರ್ ಗಳಿಂದ ನೀರು ಸರಬರಾಜಿಗೆ ಕ್ರಮವಹಿಸಿದ ಆರ್ ಡಿಪಿಆರ್ ಇಲಾಖೆಯ ಅಧಿಕಾರಿಗಳು 

ಚಿಂಚೋಳಿ : ಟ್ಯಾಂಕರ್ ಮೂಲಕ ನೀರು ಸರಬರಾಜು

 ತಾಲೂಕಿನ ಚಿಮ್ಮಾಇದ್ಲಾಯಿ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ತಿವ್ರ ನೀರಿನ ಸಮಸ್ಯೆ ಎದುರಾಗಿತ್ತು. ಸಮಸ್ಯೆ ಶಾಸಕ ಡಾ. ಅವಿನಾಶ ಜಾಧವ ಅವರ ಗಮನಕ್ಕೆ ಬಂದ ಕೂಡಲೇ ನೀರಿನ ಸಮಸ್ಯೆ ನಿಗಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದರಂತೆ ಆರ್ ಡಿಪಿಆರ್ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಶಾಸಕರ ಆದೇಶ ತಕ್ಷಣಕ್ಕೆ ಸ್ಪಂದಿಸಿ ಗ್ರಾಮಕ್ಕೆ ಖಾಸಗಿ ಟ್ಯಾಂಕರ ರ್ ಮೂಲಕ ಗ್ರಾಮಸ್ಥರ ಮನೆಗಳಿಗೆ ನೀರು ಹರಿಸಲಾಗಿದೆ ಎಂದು ಗ್ರಾಮದ ಮುಖಂಡ ಶ್ರೀನಿವಾಸ್ ಚಿಂಚೋಳಿಕರ್ ತಿಳಿಸಿದರು.

ಶಾಸಕರ ಸೂಕ್ತ ಸಮಯದಲ್ಲಿ ಸ್ಪಂದನೆ ಮಾಡಿದ್ದ ಪರಿಣಾಮ ಗ್ರಾಮದ ಪ್ರತಿಯೊಂದು ಓಣಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.  

ನೀರಿನ ಸಂಕಷ್ಟ ಎದುರಾಗಿರುವ ಸಂದರ್ಭದಲ್ಲಿ ದೊರೆತ ನೀರನ್ನು ಪೋಲು ಮಾಡದೇ ಅವಶ್ಯಕತೆ ಅನುಗುಣವಾಗಿ ನೀರು ಖರ್ಚು ಮಾಡಿ ಎಂದು ಶಾಸಕರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ನೀರಿನ ತೊದರೆ ನಿಗಿಸಿದ ಶಾಸಕ ಡಾ. ಅವಿನಾಶ ಜಾಧವ್ ಅವರ ಕಾರ್ಯದ ಬಗ್ಗೆ ಚಿಮ್ಮಾಇದ್ಲಾಯಿ ಗ್ರಾಮಸ್ಥರು ಮೆಚ್ಚುಗೆಯ ಹರ್ಷ ವ್ಯಕ್ತಪಡಿಸಿದ್ದಾರೆ.