ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಅತ್ಯಗತ್ಯ : ಶಶಿಧರ ಬಿರಾದಾರ್.
ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಅತ್ಯಗತ್ಯ : ಶಶಿಧರ ಬಿರಾದಾರ್.
ಕ್ರೀಡೆಗಳಿಂದ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ್ ಹೇಳಿದರು.
ಅವರು ರಾವೂರ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ ಕಲಬುರ್ಗಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಚಿತ್ತಾಪುರ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ಕ್ರೀಡಾಕೂಟದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಕ್ರೀಡೆಗಳು ಕೇವಲ ಸೋಲು ಗೆಲುವಿಗೆ ಸೀಮಿತವಾಗಿರದೇ ಮಕ್ಕಳಲ್ಲಿ ಶಿಸ್ತು, ಸಹೋದರತ್ವ, ಹಾಗೂ ಕ್ರೀಡಾ ಸ್ಫೂರ್ತಿಯನ್ನು ಬೆಳೆಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಸ್ಪರ್ಧಾತ್ಮಕ ಮನೋಭಾವದಿಂದ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಓದಿನ ಜೊತೆಗೆ ಆಟಗಳಲ್ಲಿಯೂ ಮುಂದೆ ಬರಬೇಕು ಎಂದು ಹೇಳಿದರು.
ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂoಡಗಿ ಮಾತನಾಡಿ ಇತ್ತೀಚಿಗೆ ಶಿಕ್ಷಣ ಸಂಸ್ಥೆಗಳು ಕೇವಲ ಮಕ್ಕಳ ಓದು. ಫಲಿತಾಂಶದ ಕಡೆಗೆ ಹೆಚ್ಚಿನ ಗಮನ ನೀಡುತ್ತಿವೆ. ಕ್ರೀಡೆಗಳು ಮಾತ್ರ ಮಕ್ಕಳನ್ನು ಸರ್ವಾoಗಿಣವಿಕಾಸಗೊಳಿಸಲು ಸಾಧ್ಯವೆಂದರು.
ಟಿಪಿಓ ಶಿವಶರಣಪ್ಪ ಮಂಠಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಸಾನಿದ್ಯವನ್ನು ಸಂಸ್ಥೆ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ವಹಿಸಿದ್ದರು. ವೇದಿಕೆಯ ಮೇಲೆ ಅಕ್ಷರ ದಾಸೋಹ ಎಡಿ ಶಂಕರ ಡಾoಗೆ, ಬಿಆರ್ ಸಿ ಆದಪ್ಪ ಸಜ್ಜನ್ ಭೋಜನಗೌಡ ಪಾಟೀಲ್, ದೇವಿoದ್ರರೆಡ್ಡಿ ದುಗನೂರ್, ಹುಸೇನ್ ಪಾಷಾ, ಶರಣಪ್ಪ ಐಕುರ, ಹಣಮಂತ ಬಿರಾದಾರ್, ದೇವಿoದ್ರ ಹುಣಚಿಕರ್, ಮಣಿಸಿಂಗ್ ಚವ್ಹಾಣ, ವೀರಭದ್ರಪ್ಪ ಗುರುಮಿಠಕಲ್, ಸಂಗನಗೌಡ ಪಾಟೀಲ್,ಶರಣಪ್ಪ ಕಟ್ಟಿ,ಸೇರಿದಂತೆ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ನಿವೃತ್ತಿ ದೈಹಿಕ ಶಿಕ್ಷಕರಿಗೆ, ಸಾಧಕ ದೈಹಿಕ ಶಿಕ್ಷಕರಿಗೆ ವಿಶೇಷವಾಗಿ ಸತ್ಕಾರಿಸಲಾಯಿತು.
ಪ್ರಾಥಮಿಕ ವಿಭಾಗದ 7 ವಲಯಗಳಿಂದ, ಪ್ರೌಢ ವಿಭಾಗದ 5 ವಲಯಗಳಿಂದ ಹಾಗೂ ಕಾಲೇಜುಗಳಿಂದ ಬಂದ ವಿದ್ಯಾರ್ಥಿ ಗಳು ಕ್ರೀಡಾಸ್ಫೂರ್ತಿಯಿಂದ ಆಟವಾಡಿದರು.
ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.

