ಮಾದಕ ದ್ರವ್ಯ ಡ್ರಗ್ಸ್ ವಿರೋಧಿ ಜಾಗೃತಿ ಜಾಥಕ್ಕೆ ಚಾಲನೆ ಡ್ರಗ್ಸ್ ಸೇವೆನೆ ದೇಶದ ಸಂವಿಧಾನದ ಕಾನೂನು ಕಾಯ್ದೆಗಳಿಗೆ ವಿರುದ್ಧವಾಗಿವೆ : ಶಶಿಕಾಂತ ಆಡಕಿ
ಮಾದಕ ದ್ರವ್ಯ ಡ್ರಗ್ಸ್ ವಿರೋಧಿ ಜಾಗೃತಿ ಜಾಥಕ್ಕೆ ಚಾಲನೆ
ಡ್ರಗ್ಸ್ ಸೇವೆನೆ ದೇಶದ ಸಂವಿಧಾನದ ಕಾನೂನು ಕಾಯ್ದೆಗಳಿಗೆ ವಿರುದ್ಧವಾಗಿವೆ : ಶಶಿಕಾಂತ ಆಡಕಿ
ಚಿಂಚೋಳಿ : 2025- ಎನ್.ಎ.ಎಲ್.ಎಸ್.ಎ (ಡ್ರಗ್ಸ್) ಯೋಜನೆ ಅಡಿಯಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾ ಹಾಗೂ ವಿಷೇಶ ಕಾನೂನು ಅರಿವು ಅಭಿಯಾನ ಕಾರ್ಯಕ್ರಮ ಮತ್ತು ಮಕ್ಕಳ ದಿನಾಚರಣೆ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮವನ್ನು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆಯಿತು.
ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಚಿಂಚೋಳಿ ತಾಲೂಕ ಕಾನೂನು ಸೇವೆಗಳ ಸಮಿತಿ, ತಾಲೂಕ ವಕೀಲರ ಸಂಘ ಹಾಗೂ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಹಾಯಕ ಸರಕಾರಿ ಅಭಿಯೋಜಕ ಶಾಂತಕುಮಾರ ಜಿ ಪಾಟೀಲ್ ಡ್ರಗ್ಸ್ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು.
ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಆಡಕಿ ಅವರು ಮಾತನಾಡಿ, ಮಾದಕ ದ್ರವ್ಯ ಡ್ರಗ್ಸ್ ಸೇವೆನೆ ದೇಶದ ಸಂವಿಧಾನದ ಕಾನೂನು ಕಾಯ್ದೆಗಳಿಗೆ ವಿರುದ್ಧವಾಗಿವೆ. ಡ್ರಗ್ಸ್ ಆರೋಗ್ಯ ನಾಶಪಡಿಸುವಂತಹ ವಿಷಕಾರಿ ಅಂಶ ಹೊಂದಿದೆ. ಮಾದಕ ದ್ರವ್ಯ (ಡ್ರಗ್ಸ್) ಸೇವಿಸುವುದರಿಂದ ಪರಿಶುದ್ಧ ಆರೋಗ್ಯ ನಾಶಪಡಿಸುವುದಲ್ಲದೆ, ಮಾನಸಿಕ ಖಿನ್ನತೆಗೆ ಮತ್ತು ಅಪರಾಧ ಚಟುವಟಿಕೆಗಳಿಗೆ ಪ್ರಚೋದನೆಗೆ ಒಳಪಡಿಸುವ ಗುಣ ಡ್ರಗ್ಸ್ ಹೊಂದಿದೆ. ಹಾಗಾಗಿ ಯುವ ತರುಣರು ಮತ್ತು ವಿದ್ಯಾರ್ಥಿಗಳು ಮಾದಕ ದ್ರವ್ಯ ಡ್ರಗ್ಸ್ ಗೆ ಒಳಗಾಗದೇ ಅದರಿಂದ ದೂರ ಉಳಿಯಬೇಕು. ಡ್ರಗ್ಸ್ ವಿಷಕಾರಿ ಅಂಶ ಹೊಂದಿದೆ. ಅದನ್ನು ಸೇವನೆ ಮಾಡುವುದರಿಂದ ಮಾನವನ ಸುಖಕರ ಆರೋಗ್ಯ ಮತ್ತು ನೆಮದಿ ಹಾಳು ಮಾಡುವ ಅಂಶ ಡ್ರಗ್ಸ್ ನಲ್ಲಿ ಅಡಗಿದೆ. ಈ ಕಾರಣಕ್ಕಾಗಿ ವಿಷಕಾರಿ ಮಾದಕ ದ್ರವ್ಯಗಳಿಗೆ ದಾಸರಾಗದೆ ಅಂತರ ಕಾಪಾಡಿಕೊಂಡು ಉಜ್ವಲ ಭವಿಷ್ಯದ ಜೀವನ ನಿರ್ಮಾಣದಕಡೆಗೆ ತರುಣ ಯುವಕರು ಗಮನಹರಿಸಬೇಕು ಎಂದರು.
ಅಪರ ಸರಕಾರಿ ಎಜಿಪಿ ಸೋಮನಾಥರೆಡ್ಡಿ ವಂಗಾ ಅವರು ಅತಿಥಿಗಳಾಗಿ ಆಗಿಮಿಸಿದರು. ತಾಲೂಕ ಕಾನೂನು ಸೇವಾ ಸಮಿತಿಯ ಪ್ಯಾನಲ್ ವಕೀಲ ಸೂರ್ಯಕಾಂತ ಗಾರಂಪಳ್ಳಿ ಅವರು ಮಾದಕ ದ್ರವ್ಯ ವಿರೋಧಿ ಕುರಿತು ಮತ್ತು ಕಾನೂನು ಅರಿವು ಅಭಿಯಾನದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಚಿಂಚೋಳಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಗಂಗಮ್ಮ ಜಿನಿಕೇರಿ, ವಕೀಲ ಹಣಮಂತ ಹೀರೆಮನಿ, ಜಗನ್ನಾಥ ಗಂಜಗಿರಿ, ಸುನೀಲ, ಶಾಮರಾವ ಮೋಘ, ಪರಿಮಳ, ಶಿಕ್ಷಕಿ ಘಾಳಮ್ಮ ಹಾಗೂ ಕಸ್ತೂರಿಬಾಯಿ ಗಾಂಧಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಸರಕಾರಿ ಕನ್ಯಾ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಇದ್ದರು.

