ಧರ್ಮಸ್ಥಳ ಸಂಘದಿಂದ ಉಚಿತ ಟ್ಯೂಷನ್ ಪ್ರಾರಂಭ.
ಧರ್ಮಸ್ಥಳ ಸಂಘದಿಂದ ಉಚಿತ ಟ್ಯೂಷನ್ ಪ್ರಾರಂಭ.
ಶಹಾಪುರ: ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಅನುಕೂಲತೆಯ ಹಿತದೃಷ್ಟಿಯಿಂದ ಉಚಿತ ಟ್ಯೂಷನ್ ಕ್ಲಾಸ್ ಆರಂಭಿಸಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜ್ಞಾನವಿಕಾಸ ಕೇಂದ್ರದ ಮೇಲ್ವಿಚಾರಕ ಹೊಲಿ ಹೇಳಿದರು.
ನಗರದ ಫಕೀರೇಶ್ವರ ಮಠದಲ್ಲಿರುವ ಜ್ಞಾನ ಗಂಗಾ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀಮಾಭಿವೃದ್ಧಿ ಬಿಸಿ ಟ್ರಸ್ಟ್ ಹಾಗೂ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟ್ಯೂಷನ್ ಕ್ಲಾಸ್ ಪ್ರಾರಂಭಿಸಲಾಯಿತು.
ಶಾಲೆಯ ಮುಖ್ಯ ಗುರುಗಳಾದ ಸುಧಾಕರ ಕುಲಕರ್ಣಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ಧಾರ್ಮಿಕವಾಗಿ, ಶೈಕ್ಷಣಿಕವಾಗಿ,ಸಮಾಜಮುಖಿ
ಪ್ರತಿಯೊಂದು ಕ್ಷೇತ್ರಗಳಲ್ಲೂ ತೊಡಗಿಕೊಂಡು ನಿರಂತರ ಸೇವೆ ಮಾಡುತ್ತಿದೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕರಾದ ಪ್ರತಿಭಾ,
ಮೇಲ್ವಿಚಾರಕರಾದ ಪೂಜಾ ಸೇವಾ ಪ್ರತಿನಿಧಿ ನೇತ್ರಾವತಿ ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರರಿದ್ದರು.

