ಸಾಹಿತಿಗಳು ಬಣ್ಣದ ಲಕ್ಷ್ಮಣರೇಖೆ ಬಿಟ್ಟು ಹೊರಬನ್ನಿ: ಮಾಜಿ ಕುಲಪತಿ ಡಾ.ಟಿಎಂ ಭಾಸ್ಕರ ಹೇಳಿಕೆ

ಸಾಹಿತಿಗಳು ಬಣ್ಣದ ಲಕ್ಷ್ಮಣರೇಖೆ ಬಿಟ್ಟು ಹೊರಬನ್ನಿ

ರಾಜ್ಯಮಟ್ಟದ ಸಿರಿಗನ್ನಡ ಸಾಹಿತ್ಯ ಪ್ರಶಸ್ತಿ ಪ್ರದಾನ : ಮಾಜಿ ಕುಲಪತಿ ಡಾ.ಟಿಎಂ ಭಾಸ್ಕರ ಹೇಳಿಕೆ 

       ಕಲಬುರಗಿ : ಸಾಹಿತಿಗಳು ಬಣ್ಣದ ಮಾನಸಿಕತೆಯಿಂದ ಹೊರಬಂದು ಉತ್ತಮ ಸಾಹಿತ್ಯ ಸೃಷ್ಟಿಯತ್ತ ಮನಸ್ಸು ಮಾಡಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ , ಡಾ. ಟಿ. ಎಂ. ಭಾಸ್ಕರ ಅಭಿಪ್ರಾಯಪಟ್ಟರು.

     ಕಲಬುರಗಿಯ ಸಿರಿಗನ್ನಡ ವೇದಿಕೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೆ. 27ರಂದು ರಂಗಾಯಣದಲ್ಲಿ ನಡೆದ ವಿಶೇಷ ಉಪನ್ಯಾಸ ಹಾಗೂ ರಾಜ್ಯಮಟ್ಟದ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ ಪ್ರಕೃತಿಯಲ್ಲಿ ಅರಳುವ ಹೂವುಗಳಿಗೆ ಹಲವು ರೀತಿಯ ಬಣ್ಣಗಳಿವೆ. ಆದರೆ ಅದರಲ್ಲಿರುವ ಪರಾಗಕ್ಕೆ ಬಣ್ಣವಿಲ್ಲ. ಅದುಕೇವಲ ಸುವಾಸನೆ ಮಾತ್ರ ಬೀರುತ್ತದೆ ಹಾಗೆ ಸಾಹಿತ್ಯಕ್ಕೆ ಬಣ್ಣ ಇಲ್ಲ.

 ಕನ್ನಡ, ತೆಲುಗು ಮರಾಠಿ,ಪಾಲಿ, ಹಿಂದಿ, ಇಂಗ್ಲಿಷ್ ಭಾಷೆಗಳು ಬೇರೆ ಬೇರೆದಾಗಿದ್ದರೂ ಅದರ ಅಂತಿಮ ಗುರಿ ಮಾನವೀಯ ಮೌಲ್ಯಗಳ ಪ್ರತಿಪಾದನೆ. ಸಾಹಿತ್ಯಕ್ಕೆ ಬಣ್ಣ ಲೇಪಿತ ಮಾಡಿ ನೋಡುತ್ತಿರುವುದರಿಂದ ಸಾಮಾಜಿಕ ಸಾಂಸ್ಕೃತಿಕ ಲೋಕ ಬಡವಾಗುತ್ತಿದೆ. ಸಾಹಿತ್ಯ ಕ್ಷೇತ್ರವು ಜಾತಿ, ಕುಲ,ಗೋತ್ರ, ಧರ್ಮ, ಪಂಗಡ ಮುಂತಾದ ಬಣ್ಣಗಳಿಂದ ಲೇಪಿತವಾಗಿ ನೈಜ ಸಾಹಿತ್ಯ ಕುಂಠಿತವಾಗುತ್ತಿದೆ ದೇಶವು ಹಲವು ಬಣ್ಣಗಳನ್ನು ಹೊಂದಿದ್ದರೂ ಎಲ್ಲ ಬಣ್ಣಗಳು ಒಂದಾಗಿ ವೈವಿಧ್ಯತೆಯಲ್ಲಿ ಬಿಳಿ ಬಣ್ಣ, ಶಾಂತಿಯ ಬಣ್ಣ ರಾರಾಜಿಸಬೇಕು. ಸಾಹಿತ್ಯಕ್ಕೆ ಸೌಂದರ್ಯ, ರೂಪ, ಛಂದಸ್ಸಿನ ವರ್ಗೀಕರಣ ಇರಬೇಕೇ ವಿನಃ ಜಾತಿ, ಲಿಂಗ, ಧರ್ಮದ ವರ್ಗೀಕರಣ ಸಲ್ಲದು ಎಂದು ಹೇಳಿದರು.

*ಜೀವಪ್ರೀತಿಯ ಸಾಹಿತ್ಯ ರಚನೆ ಅಗತ್ಯ* 

  ವಿಶೇಷ ಉಪನ್ಯಾಸ ನೀಡಿದ ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಮಾತನಾಡಿ ಸಿದ್ದಯ್ಯ ಪುರಾಣಿಕ, ಶಾಂತರಸ, ಡಾ ಜಯದೇವಿತಾಯಿ ಲಿಗಾಡೆ,ಡಾ ಚೆನ್ನಣ್ಣ ವಾಲೀಕಾರ, ಬಿ ಶಾಮಸುಂದರ, ಡಾ ಶೈಲಜಾ ಉಡಚಣ, ಗೀತಾ ನಾಗಭೂಷಣ ಮುಂತಾದ ಪ್ರಾತಃಸ್ಮರಣೀಯ ಸಾಹಿತಿಗಳ ಹೆಸರಿನಲ್ಲಿ ನೀಡುತ್ತಿರುವ ಸಾಹಿತ್ಯ ಸಿರಿ ಪ್ರಶಸ್ತಿಯು ಸಾಹಿತಿಗಳಲ್ಲಿ ಮತ್ತು ಬರಹಗಾರರಲ್ಲಿ ಆ ಮಹನೀಯರು ಬಿತ್ತಿದ ಮಾನವೀಯ ಮೌಲ್ಯ, ಕನ್ನಡದ ಅಸ್ಮಿತೆ, ಮನುಷ್ಯ ಪ್ರೀತಿ ಜೀವಂತವಾಗಿರಿಸಲು ಪ್ರೇರಣೆ ನೀಡುತ್ತದೆ. ಸಾಹಿತ್ಯ ಹೋರಾಟ ಮತ್ತು ಬದುಕನ್ನು ಆದರ್ಶವಾಗುವ ಹಾಗೆ ಲೇಖಕರು ತಮ್ಮ ಬರಹಗಳ ಮೂಲಕ ಜಾಗೃತಪ್ರಜ್ಞೆಯನ್ನು ಮೂಡಿಸಿದರೆ ಸಾಹಿತ್ಯದ ಮೌಲ್ಯ ಮತ್ತು ಬದುಕಿನ ಆದರ್ಶ ಸದಾ ಹಸಿರಾಗಿರುತ್ತದೆ. ಲೇಖಕರ ತುಡಿತ ಜನಪ್ರಿಯತೆ ಪ್ರಚಾರ ಹಾಗೂ ಪ್ರಶಸ್ತಿಯತ್ತ ಮಾತ್ರ ಇರದೆ ಮನುಷ್ಯ ಪ್ರೀತಿ ವಿಶ್ವಾಸ, ನಂಬಿಕೆ, ಹಾಗೂ ಜೀವ ಪ್ರೀತಿಯ ಕಡೆಗೆ ಇರಬೇಕು ಎಂದು ಅವರು ಹೇಳಿದರು.

    ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿಂಗರಾಜ್ ಅರಸ್ ಅವರ ಬಗ್ಗೆ ವಿಶೇಷ ಸನ್ಮಾನ ನೆರವೇರಿತು. ಅಧ್ಯಕ್ಷತೆ ವಹಿಸಿದ ಸಿರಿಗನ್ನಡ ವೇದಿಕೆಯ ಅಧ್ಯಕ್ಷರಾದ ಗವಿಸಿದ್ದಪ್ಪ ಪಾಟೀಲ್ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸದಸ್ಯ ಡಾ ಜಯದೇವಿ ಗಾಯಕವಾಡ, ಪ್ರಕಾಶಕರಾದ ಬಸವರಾಜ ಕೊನೇಕ್ ದಲಿತ ಸಾಹಿತ್ಯ ಪರಿಷತ್ತಿನ ಚಿದಾನಂದ ಕುಡ್ಡನ್ನ, ಪತ್ರಿಕಾ ಸಂಪಾದಕ ಶರಣಬಸವ ಸೂಗೂರು,*ಸಾಹಿತಿಗಳು ಬಣ್ಣದ ಲಕ್ಷ್ಮಣರೇಖೆ ಬಿಟ್ಟು ಹೊರಬನ್ನಿ

----------------------

*ರಾಜ್ಯಮಟ್ಟದ ಸಿರಿಗನ್ನಡ ಸಾಹಿತ್ಯ ಪ್ರಶಸ್ತಿ ಪ್ರದಾನ : ಮಾಜಿ ಕುಲಪತಿ ಡಾ.ಟಿಎಂ ಭಾಸ್ಕರ ಹೇಳಿಕೆ*

------------------------------

       ಕಲಬುರಗಿ : ಸಾಹಿತಿಗಳು ಬಣ್ಣದ ಮಾನಸಿಕತೆಯಿಂದ ಹೊರಬಂದು ಉತ್ತಮ ಸಾಹಿತ್ಯ ಸೃಷ್ಟಿಯತ್ತ ಮನಸ್ಸು ಮಾಡಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ , ಡಾ. ಟಿ. ಎಂ. ಭಾಸ್ಕರ ಅಭಿಪ್ರಾಯಪಟ್ಟರು.

     ಕಲಬುರಗಿಯ ಸಿರಿಗನ್ನಡ ವೇದಿಕೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೆ. 27ರಂದು ರಂಗಾಯಣದಲ್ಲಿ ನಡೆದ ವಿಶೇಷ ಉಪನ್ಯಾಸ ಹಾಗೂ ರಾಜ್ಯಮಟ್ಟದ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ ಪ್ರಕೃತಿಯಲ್ಲಿ ಅರಳುವ ಹೂವುಗಳಿಗೆ ಹಲವು ರೀತಿಯ ಬಣ್ಣಗಳಿವೆ. ಆದರೆ ಅದರಲ್ಲಿರುವ ಪರಾಗಕ್ಕೆ ಬಣ್ಣವಿಲ್ಲ. ಅದುಕೇವಲ ಸುವಾಸನೆ ಮಾತ್ರ ಬೀರುತ್ತದೆ ಹಾಗೆ ಸಾಹಿತ್ಯಕ್ಕೆ ಬಣ್ಣ ಇಲ್ಲ.

 ಕನ್ನಡ, ತೆಲುಗು ಮರಾಠಿ,ಪಾಲಿ, ಹಿಂದಿ, ಇಂಗ್ಲಿಷ್ ಭಾಷೆಗಳು ಬೇರೆ ಬೇರೆದಾಗಿದ್ದರೂ ಅದರ ಅಂತಿಮ ಗುರಿ ಮಾನವೀಯ ಮೌಲ್ಯಗಳ ಪ್ರತಿಪಾದನೆ. ಸಾಹಿತ್ಯಕ್ಕೆ ಬಣ್ಣ ಲೇಪಿತ ಮಾಡಿ ನೋಡುತ್ತಿರುವುದರಿಂದ ಸಾಮಾಜಿಕ ಸಾಂಸ್ಕೃತಿಕ ಲೋಕ ಬಡವಾಗುತ್ತಿದೆ. ಸಾಹಿತ್ಯ ಕ್ಷೇತ್ರವು ಜಾತಿ, ಕುಲ,ಗೋತ್ರ, ಧರ್ಮ, ಪಂಗಡ ಮುಂತಾದ ಬಣ್ಣಗಳಿಂದ ಲೇಪಿತವಾಗಿ ನೈಜ ಸಾಹಿತ್ಯ ಕುಂಠಿತವಾಗುತ್ತಿದೆ ದೇಶವು ಹಲವು ಬಣ್ಣಗಳನ್ನು ಹೊಂದಿದ್ದರೂ ಎಲ್ಲ ಬಣ್ಣಗಳು ಒಂದಾಗಿ ವೈವಿಧ್ಯತೆಯಲ್ಲಿ ಬಿಳಿ ಬಣ್ಣ, ಶಾಂತಿಯ ಬಣ್ಣ ರಾರಾಜಿಸಬೇಕು. ಸಾಹಿತ್ಯಕ್ಕೆ ಸೌಂದರ್ಯ, ರೂಪ, ಛಂದಸ್ಸಿನ ವರ್ಗೀಕರಣ ಇರಬೇಕೇ ವಿನಃ ಜಾತಿ, ಲಿಂಗ, ಧರ್ಮದ ವರ್ಗೀಕರಣ ಸಲ್ಲದು ಎಂದು ಹೇಳಿದರು.

*ಜೀವಪ್ರೀತಿಯ ಸಾಹಿತ್ಯ ರಚನೆ ಅಗತ್ಯ* 

  ವಿಶೇಷ ಉಪನ್ಯಾಸ ನೀಡಿದ ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಮಾತನಾಡಿ ಸಿದ್ದಯ್ಯ ಪುರಾಣಿಕ, ಶಾಂತರಸ, ಡಾ ಜಯದೇವಿತಾಯಿ ಲಿಗಾಡೆ,ಡಾ ಚೆನ್ನಣ್ಣ ವಾಲೀಕಾರ, ಬಿ ಶಾಮಸುಂದರ, ಡಾ ಶೈಲಜಾ ಉಡಚಣ, ಗೀತಾ ನಾಗಭೂಷಣ ಮುಂತಾದ ಪ್ರಾತಃಸ್ಮರಣೀಯ ಸಾಹಿತಿಗಳ ಹೆಸರಿನಲ್ಲಿ ನೀಡುತ್ತಿರುವ ಸಾಹಿತ್ಯ ಸಿರಿ ಪ್ರಶಸ್ತಿಯು ಸಾಹಿತಿಗಳಲ್ಲಿ ಮತ್ತು ಬರಹಗಾರರಲ್ಲಿ ಆ ಮಹನೀಯರು ಬಿತ್ತಿದ ಮಾನವೀಯ ಮೌಲ್ಯ, ಕನ್ನಡದ ಅಸ್ಮಿತೆ, ಮನುಷ್ಯ ಪ್ರೀತಿ ಜೀವಂತವಾಗಿರಿಸಲು ಪ್ರೇರಣೆ ನೀಡುತ್ತದೆ. ಸಾಹಿತ್ಯ ಹೋರಾಟ ಮತ್ತು ಬದುಕನ್ನು ಆದರ್ಶವಾಗುವ ಹಾಗೆ ಲೇಖಕರು ತಮ್ಮ ಬರಹಗಳ ಮೂಲಕ ಜಾಗೃತಪ್ರಜ್ಞೆಯನ್ನು ಮೂಡಿಸಿದರೆ ಸಾಹಿತ್ಯದ ಮೌಲ್ಯ ಮತ್ತು ಬದುಕಿನ ಆದರ್ಶ ಸದಾ ಹಸಿರಾಗಿರುತ್ತದೆ. ಲೇಖಕರ ತುಡಿತ ಜನಪ್ರಿಯತೆ ಪ್ರಚಾರ ಹಾಗೂ ಪ್ರಶಸ್ತಿಯತ್ತ ಮಾತ್ರ ಇರದೆ ಮನುಷ್ಯ ಪ್ರೀತಿ ವಿಶ್ವಾಸ, ನಂಬಿಕೆ, ಹಾಗೂ ಜೀವ ಪ್ರೀತಿಯ ಕಡೆಗೆ ಇರಬೇಕು ಎಂದು ಅವರು ಹೇಳಿದರು.

    ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿಂಗರಾಜ್ ಅರಸ್ ಅವರ ಬಗ್ಗೆ ವಿಶೇಷ ಸನ್ಮಾನ ನೆರವೇರಿತು. ಅಧ್ಯಕ್ಷತೆ ವಹಿಸಿದ ಸಿರಿಗನ್ನಡ ವೇದಿಕೆಯ ಅಧ್ಯಕ್ಷರಾದ ಗವಿಸಿದ್ದಪ್ಪ ಪಾಟೀಲ್ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸದಸ್ಯ ಡಾ ಜಯದೇವಿ ಗಾಯಕವಾಡ, ಪ್ರಕಾಶಕರಾದ ಬಸವರಾಜ ಕೊನೇಕ್,

ದಲಿತ ಸಾಹಿತ್ಯ ಪರಿಷತ್ತಿನ ಚಿದಾನಂದ ಕುಡ್ಡನ್ನ, ಪತ್ರಿಕಾ ಸಂಪಾದಕ ಶರಣಬಸವ ಸೂಗೂರು, ಡಾ ಪೀರಪ್ಪ ಸಜ್ಜನ್ ಉಪಸ್ಥಿತರಿದ್ದರು. ಏಳು ಜನ ಸಾಹಿತಿಗಳ ಹೆಸರಿನಲ್ಲಿ ಒಟ್ಟು 42 ಸಾಹಿತಿಗಳು ಹಾಗೂ ಸಾಧಕರಿಗೆ ಶಾಲು ಹಾರ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಡಾ.ಶೀಲಾದೇವಿ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ರಾಜಕುಮಾರ ಮಾಳಗೆ ಧನ್ಯವಾದವಿತ್ತರು.