ಮುನೀಶ್ವರ ಭಾಗದ ಪವಿತ್ರ ಆಶ್ರಮದಲ್ಲಿ ಆಧ್ಯಾತ್ಮಿಕ ಅನುಭವ
ಮುನೀಶ್ವರ ಭಾಗದ ಪವಿತ್ರ ಆಶ್ರಮದಲ್ಲಿ ಆಧ್ಯಾತ್ಮಿಕ ಅನುಭವ
ಹುಮನಾಬಾದ್: ನಗರದ ಪ್ರವೇಶಕ್ಕೂ ಮುನ್ನ ಬಲಭಾಗದಲ್ಲಿರುವ ಸುಮಾರು 7 ಎಕರೆ ವಿಸ್ತೀರ್ಣದ ಪವಿತ್ರ ತೋಟದೊಳಗಿನ ‘ಮುನೀಶ್ವರ ಭಾಗ’ಕ್ಕೆ ಭಾನುವಾರ ಭೇಟಿ ನೀಡಿ, ಸದ್ಗುರು ಶ್ರೀ ಗುರುಪಾದೇಶ್ವರ ಹಾಗೂ ಶ್ರೀ ಘಟ್ಟಾಕರ್ಣ ಶಿವಾಚಾರ್ಯರ ದರ್ಶನ ಪಡೆಯಲಾಯಿತು.
ಆಶ್ರಮದ ಪ್ರಶಾಂತ ವಾತಾವರಣದಲ್ಲಿ ಭಕ್ತರ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಭಾವನೆ ಮೂಡಿಸುತ್ತದೆ .ಆಶ್ರಮ ಪ್ರವೇಶದ್ವಾರದಲ್ಲೇ ಸೇವಕರು ಭಕ್ತರನ್ನು ಆತ್ಮೀಯವಾಗಿ ಸ್ವಾಗತಿಸುವುದು ವಿಶೇಷವಾಗಿದ್ದು, ಒಳ ಪ್ರವೇಶಿಸಿದ ಕೂಡಲೇ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
ಆಶ್ರಮದ ಉತ್ತರ ಭಾಗದಲ್ಲಿರುವ ಶ್ರೀ ಗುರುಪಾದೇಶ್ವರರ ಪವಿತ್ರ ಪ್ರವಚನ ಸ್ಥಳ, ಭಾವಚಿತ್ರ ಹಾಗೂ ಶ್ರೀ ಗುರು ಘಂಟೇಶ್ವರರ ಕೋಣೆ ಭಕ್ತರನ್ನು ಆಕರ್ಷಿಸುತ್ತವೆ. ಪ್ರಾರ್ಥನೆ ಮತ್ತು ಭಜನೆಗೆ ಪ್ರತ್ಯೇಕ ಪ್ರಶಾಂತ ಆವರಣವಿದ್ದು, ಸತ್ಸಂಗದ ಬಳಿಕ ಭಕ್ತರು ಭಾವಚಿತ್ರಗಳಿಗೆ ನಮನ ಸಲ್ಲಿಸಿ ಆಶೀರ್ವಾದ ಪಡೆಯುತ್ತಾರೆ.
ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಕಲ್ಲುಸಕ್ಕರೆ ಪ್ರಸಾದ ಹಾಗೂ ಬಾಳೆಹಣ್ಣು ವಿತರಿಸಲಾಗುತ್ತಿದ್ದು, ಮಹಾಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿದೆ. ಭಕ್ತರು ಭಕ್ತಿಭಾವದಿಂದ ಸೇವೆ ಸಲ್ಲಿಸುತ್ತಿರುವುದು ಗಮನ ಸೆಳೆಯಿತು.
ಶ್ರೀ ಗುರುಪಾದೇಶ್ವರರ ಆಶ್ರಮಕ್ಕೆ ಪ್ರತಿಯೊಬ್ಬರೂ ಒಮ್ಮೆಯಾದರೂ ಭೇಟಿ ನೀಡಿ, ಶ್ರೀ ಘಂಟೇಶ್ವರರ ನುಡಿ, ದರ್ಶನ ಹಾಗೂ ಸತ್ಸಂಗದ ಅನುಭವ ಪಡೆಯಬೇಕು.
ಹಿರಿಯ ವಕೀಲ ಮೇಘನಾಥ ಶಿವಾಚಾರ್ಯ, ಗುತ್ತಿಗೆದಾರರು ಹಾಗೂ ಮೊಮ್ಮಗ ಗೋಲಯ್ಯ ಹಿರೇಮಠ, ನೆಲೋಗಿಯ ಭಕ್ತರು ಹಾಗೂ ರಾಜಕೀಯ ಮುಖಂಡ ಭೀಮಾಶಂಕರ ವಿಭೂತಿ, ಕಲಬುರಗಿಯ ಬಸವೇಶ್ವರ ಕಾಲೋನಿಯ ವಕೀಲ ಬಸವರಾಜ ಶಿರವಾಳ, ಬ್ರಹ್ಮಪುರದ ನ್ಯಾಯವಾದಿ ವಿನೋದಕುಮಾರ ಜೆನವೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆಶ್ರಮದ ಸೇವಕರಾದ ಶಿವಶಂಕರ ತರನಳ್ಳಿ ಅವರ ಸಹಕಾರ ಗಮನಾರ್ಹವಾಗಿತ್ತು. ಅವರು ಮುಂಬರುವ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎಂಬುದು ತಿಳಿದು ಸಂತೋಷವಾಯಿತು.

