ಮಾತೃದೇವೋಭವ ಪಿತೃ ದೇವೋಭವ - ದೊಡ್ಡಪ್ಪ ಅಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಪಾದಪೂಜೆ

ಮಾತೃದೇವೋಭವ ಪಿತೃ ದೇವೋಭವ - ದೊಡ್ಡಪ್ಪ ಅಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಪಾದಪೂಜೆ

ಮಾತೃದೇವೋಭವ ಪಿತೃ ದೇವೋಭವ - ದೊಡ್ಡಪ್ಪ ಅಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಪಾದಪೂಜೆ 

ಸಂಸ್ಕಾರವಂತ ವಿದ್ಯಾರ್ಥಿಗಳಿಂದ ಮಾತ್ರ ಸಂಸ್ಕಾರವಂತ ನಾಗರಿಕ ಸಮಾಜ ಕಟ್ಟಲು ಸಾಧ್ಯ ಎಂದು ದೊಡ್ಡಪ್ಪ ಅಪ್ಪ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿನೋದ್ ಕುಮಾರ್ ಎಲ್ ಪತಂಗೆಯವರು ಹೇಳಿದರು . ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ತಂತ್ರಜ್ಞಾನ ವಿಜ್ಞಾನಗಳನ್ನು ಕಲಿಸಿದರೆ ಸಾಲದು, ಅದರೊಂದಿಗೆ ಬದುಕಿನ ಮೌಲ್ಯಗಳನ್ನು, ಗುರುಹಿರಿಯರಿಗೆ ಗೌರವ ನೀಡುವ ಆದರ್ಶ ಗುಣಗಳನ್ನು ಕಲಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ತಿಳಿಸಿದರು . 

ಮೈಸೂರಿನವರಾದ ವ್ಯಕ್ತಿತ್ವ ವಿಕಸನ ತರಬೇತಿದಾರ ಸತೀಶ್ ಅವರು ಮಾತನಾಡಿ ದುರಹಂಕಾರಿಯಾದ ಮನುಷ್ಯ ಏನನ್ನು ಸಾಧಿಸಲಾರ ವಿದ್ಯಾರ್ಥಿಗಳು ತಮ್ಮಲ್ಲಿರುವ ಅಹಂಕಾರವನ್ನು ಶಮನಗೊಳಿಸಬೇಕು . ವಿದ್ಯೆಗೆ ವಿನಯವೇ ಭೂಷಣ . ವೃದ್ಧಾಶ್ರಮಗಳು ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು ತಂದೆ ತಾಯಿಗಳಿಗೆ ಗೌರವ ನೀಡಬೇಕು . ಮಕ್ಕಳನ್ನು ಹೊತ್ತು ಹೆತ್ತು ಪೋಷಿಸುವಲ್ಲಿ ತಂದೆ ತಾಯಿಗಳು ತಮ್ಮ ಇಡೀ ಜೀವಮಾನವನ್ನು ಸವೆಸುತ್ತಾರೆ . ಮುಪ್ಪಿನ ಕಾಲದಲ್ಲಿ ಅವರನ್ನು ಗೌರವಯುತವಾಗಿ ನೋಡಿಕೊಳ್ಳಬೇಕು ಎಂದರು 

ಸಂತೋಷ ಬೋರೋಟಿಯವರು ಮಾತನಾಡಿ ತಂದೆ ತಾಯಿಗಳಿಗೆ ಕೇವಲ ಹೊಟ್ಟೆಗೆ ಅನ್ನ ಹಾಕಿದರೆ ಸಾಲದು . ಎದೆಗೆ ಪ್ರೀತಿಯನ್ನು ಕೂಡ ಹಾಕಬೇಕು ಎಂದು ಮಾರ್ಮಿಕವಾಗಿ ನುಡಿದರು 

ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕಿಂತ ಹೆಚ್ಚು ಪಾಲಕರು ಭಾಗವಹಿಸಿದರು 

ವಿದ್ಯಾರ್ಥಿಗಳು ಅವರವರ ತಂದೆ ತಾಯಿಯ ಪಾದಪೂಜೆ ಮಾಡಿದರು 

ಉಪನ್ಯಾಸಕಿಯರಾದ ಪಂಕಜ ಪೂಜಾರಿಯವರು ವಂದನಾರ್ಪಣೆ ಮಾಡಿದರು ಸಿಬ್ಬಂದಿಗಳು ಹಾಜರಿದ್ದರು