ಮುತ್ತೈದೆಯರು ದೇವರ ಸ್ವರೂಪಿಗಳು :.. ಚಂದ್ರಗುಂಡ ಶ್ರೀಗಳು

ಮುತ್ತೈದೆಯರು ದೇವರ ಸ್ವರೂಪಿಗಳು :.. ಚಂದ್ರಗುಂಡ ಶ್ರೀಗಳು

| ರಾಯಚೋಟಿ ಆಶ್ರಮದಲ್ಲಿ ಉಡಿ ತುಂಬುವ, ಪಲ್ಲಕ್ಕಿ ಉತ್ಸವ ಹಾಗೂ ಧರ್ಮ ಸಭೆ |

ಮುತ್ತೈದೆಯರು ದೇವರ ಸ್ವರೂಪಿಗಳು :.. ಚಂದ್ರಗುಂಡ ಶ್ರೀಗಳು 

ಶಹಾಬಾದ : - ಹೆಣ್ಣು ಮಕ್ಕಳಿಗೆ ಗೌರವದಿಂದ ಕಾಣೋದು ಹಾಗೂ ಮುತ್ತೈದೆಯರು ದೇವರ ಸ್ವರೂಪಿಗಳು ಎಂದು ಪೂಜಿಸಿ ವಿಶೇಷ ಸ್ಥಾನಮಾನ ನೀಡಿದ್ದು ಭಾರತದಲ್ಲಿ ಮಾತ್ರ, ಇದು ನಮ್ಮ ಸಂಸ್ಕೃತಿಯಾಗಿದೆ ಎಂದು ಹೋನ್ನಕಿರಣಗಿಯ ರಾಯಚೋಟೇಶ್ವರ ಸಂಸ್ಥಾನ ಮಠದ ಪೂಜ್ಯರಾದ ಚಂದ್ರಗುಂಡ ಶಿವಾಚಾರ್ಯರು ಹೇಳಿದರು.

ಅವರು ಹಳೆ ಶಹಾಬಾದ ನಗರದಲ್ಲಿರುವ ರಾಯಚೋಟಿ ವೀರಭದ್ರೇಶ್ವರ ಆಶ್ರಮದಲ್ಲಿ ಹಮ್ಮಿಕೊಂಡ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಪಲ್ಲಕ್ಕಿ ಉತ್ಸವ ಹಾಗೂ ಧರ್ಮ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗಂಡು ಮಕ್ಕಳು ಹೊರಗಡೆ ದುಡಿದರೆ ಹೆಣ್ಣು ಮಗಳು ಇಪ್ಪತ್ತು ನಾಲ್ಕೂ ಗಂಟೆ ಮನೆಯಲ್ಲಿ ಅಭಿಮಾನದಿಂದ ದುಡಿಯುತ್ತಾಳೆ ಮನೆ ಸುಂದರವಾಗಿ ಇಡುತ್ತಾಳೆ, ಮಕ್ಕಳನ್ನು ಪೋಷಿಸಿ ಬೆಳೆಸುತ್ತಾರೆ ಅಂತಹ ತಂದೆ ತಾಯಿ ಮತ್ತು ಗುರುಗಳನ್ನು ಯಾವತ್ತೂ ಮರೆಯಬಾರದು, ಅವರು ನಮಗೆ ಈ ಪ್ರಪಂಚವನ್ನು ಪರಿಚಯಿಸಿ ಜೀವ ಮತ್ತು ಜೀವನವನ್ನು ನೀಡಿದವರು ಹಾಗೂ ಅನ್ನ ನೀಡುವ ರೈತನನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಚಿತ್ತಾಪುರದ ಕಂಬಳೇಶ್ವರ ಮಠದ ಪೂಜ್ಯರಾದ ಸೋಮಶೇಖರ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿ, ಮಹಾಸ್ವಾಮಿಗಳು ಹಾಗೂ ಸ್ವಂತರ ಶಕ್ತಿಗಿಂತಲೂ ಮುತ್ತೈದೆಯರ ಶಕ್ತಿ ದೊಡ್ಡದು, ಸರ್ವ ಸಮಸ್ಯೆಗೂ ಮುತ್ತೈದೆಯರ ಪವಿತ್ರತೆಯಿಂದ ನಿವಾರಿಸಲು ಸಾಧ್ಯವಾಗುತ್ತದೆ. ಅಂತಹ ದೈವಶಕ್ತಿ ಅವರು ಹೊಂದಿರುತ್ತಾರೆ ಎಂದು ಸತ್ಯದ ಘಟನೆಗಳು ಹೇಳಿದರು.

ಮಠ ಅಥವಾ ಆಶ್ರಮಗಳಿಂದ ಘಟ ಬೆಳೆಯುವುದಿಲ್ಲ ಬದಲಾಗಿ ಘಟಕದಿಂದ ಮಠ ಬೆಳೆದು ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆಶ್ರಮದ ಪೀಠಾಧಿಪತಿ ಶಂಕರಯ್ಯ ಸ್ವಾಮಿ ಭಕ್ತರ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ, ಇನ್ನು ಎತ್ತರಕ್ಕೆ ಬೆಳೆಯಲಿ ಮುಂಬರುವ ದಿನಗಳಲ್ಲಿ ದೊಡ್ಡ ಜಾತ್ರೆಯನ್ನಾಗಿ ಪರಿವರ್ತನೆ ಗೊಳ್ಳಲಿ ಎಂದು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶ್ರಮದ ಪೀಠಾಧಿಪತಿಗಳಾದ ವೇದಮೂರ್ತಿ ಶಂಕ್ರಯ್ಯ ಸ್ವಾಮಿ ವಹಿಸಿದ್ದರು. 

ವೇದಿಕೆ ಮೇಲೆ ಶರಣಬಸಪ್ಪ ಕೋಬಾಳ, ಎಎಸ್ಐ ಶ್ರೀಕಾಂತ ನಾಯಕ, ಮೃತ್ಯುಂಜಯ ಹಿರೇಮಠ, ಶರಣು ವಸ್ತ್ರದ, ಶಿವಕುಮಾರ ನಾಟೇಕರ, ಕನಕಪ್ಪ ದಂಡಗುಲ್ಕರ, ಬಸವರಾಜ ದಂಡಗುಲ್ಕರ, ಕಿಶನ ನಾಯಕ ಉಪಸ್ಥಿತರಿದ್ದರು. 

ಕಲಾವಿದರಾದ ದತ್ತರಾಜ ಕಲಶೆಟ್ಟಿ ಹಾಗೂ ಅಂಬರೀಶ ಸ್ವಾಮಿ ಪ್ರಾರ್ಥನೆ ಗೀತೆ ಹಾಡಿದರು, ದೇವೇಂದ್ರ ಅಂಗಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಸಿದ್ದೇಶ್ವರ ವಸ್ತ್ರದ ಶಾಸ್ತ್ರಿ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಕ್ತರು ಭಾಗವಹಿಸಿದ್ದರು. ಪಲ್ಲಕ್ಕಿ ಮೆರವಣಿಗೆ ಹಾಗೂ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ಮತ್ತು ಅನ್ನದಾಸೋಹ ಮಾಡಲಾಯಿತು.