ಸಹಸ್ರ ದೀಪೋತ್ಸವದಿಂದ ಸಂಸ್ಕೃತಿ, ಪರಂಪರೆಗೆ ಮೆರಗು

ಸಹಸ್ರ ದೀಪೋತ್ಸವದಿಂದ ಸಂಸ್ಕೃತಿ, ಪರಂಪರೆಗೆ ಮೆರಗು

 ಸಹಸ್ರ ದೀಪೋತ್ಸವದಿಂದ ಸಂಸ್ಕೃತಿ, ಪರಂಪರೆಗೆ ಮೆರಗು

ಕುರಿಕೋಟ: ಗಣೇಶ ಉತ್ಸವ ಕೇವಲ ಆಡಂಬರದ ಆಚರಣೆಯಲ್ಲ; ಅದು ನಮ್ಮ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ ಎಂಬುದಕ್ಕೆ ಕುರಿಕೋಟ ಗ್ರಾಮದಲ್ಲಿ ನಡೆದ ಸಹಸ್ರ ದೀಪೋತ್ಸವವೇ ಸಾಕ್ಷಿಯಾಯಿತು.

ಶ್ರೀ ಸಿದ್ದಿವಿನಾಯಕ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಸಹಸ್ರ ದೀಪಗಳನ್ನು ಬೆಳಗಿಸುವ ಮೂಲಕ ಗಣೇಶ ಉತ್ಸವ ಆಚರಿಸಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸಂದೇಶ ಸಾರಲಾಯಿತು.

ಇಂತಹ ಕಾರ್ಯಕ್ರಮಗಳು ಗ್ರಾಮದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಜನರಲ್ಲಿ ಒಗ್ಗಟ್ಟು ಮತ್ತು ಸಹಬಾಳ್ವೆ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಗ್ರಾಮದ ಹಿರಿಯರಾದ ಬಸವರಾಜ ಕಲ್ಯಾಣ, ಅರುಣ್ ಸ್ವಾಮಿ, ಅಂಬರಾಯ ಮಡ್ಡೆ, ಅಜರ್ ಪಟೇಲ್, ಅಣವೀರ ಜಾಂತಿ, ಗಣೇಶ ಮಲಖೇಡ, ಬಸವರಾಜ ಗೌಡನೂರ ಸೇರಿದಂತೆ ಹಲವರು ಸಹಸ್ರ ದೀಪೋತ್ಸವಕ್ಕೆ ಸಾಕ್ಷಿಯಾದರು.