ಮನಸ್ಸಿನ ಕಲ್ಪನೆಯನ್ನು ನನಸಾಗಿಸುವವನೇ ಇಂಜಿನಿಯರ್: ಶಿವರಾಜ ಅಂಡಗಿ
ಗಣೇಶೋತ್ಸವದಲ್ಲಿ ಇಂಜಿನಿಯರ್ಸ್ ದಿನಾಚರಣೆ
ಮನಸ್ಸಿನ ಕಲ್ಪನೆಯನ್ನು ನನಸಾಗಿಸುವವನೇ ಇಂಜಿನಿಯರ್: ಶಿವರಾಜ ಅಂಡಗಿ
ಕಲಬುರಗಿ: ಇಂಜಿನಿಯರ್ ಎಂದರೆ ಕೇವಲ ಮನೆ ಕಟ್ಟುವವರು ಅಥವಾ ಯಂತ್ರಗಳ ದುರಸ್ತಿ ಮಾಡುವವರಲ್ಲ. ಸಮಸ್ಯೆಗಳನ್ನು ಗುರುತಿಸಿ ವಿಜ್ಞಾನ ಮತ್ತು ಗಣಿತದ ನೆರವಿನಿಂದ ಸಮಾಜಕ್ಕೆ ಉಪಯುಕ್ತವಾದ ಪರಿಹಾರಗಳನ್ನು ಕಂಡುಹಿಡಿದು, ಮನಸ್ಸಿನಲ್ಲಿರುವ ಕಲ್ಪನೆಗಳನ್ನು ನನಸಾಗಿಸುವವನೇ ಇಂಜಿನಿಯರ್ ಎಂದು ಶಿವರಾಜ ಅಂಡಗಿ ಹೇಳಿದರು.
ನಗರದ ವಿದ್ಯಾನಗರದ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ಹಮ್ಮಿಕೊಂಡಿರುವ ಗಣೇಶೋತ್ಸವ ಹಾಗೂ ಸಂಘದ 29ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕ್ರೀಡಾ ಚಟುವಟಿಕೆಗಳ ಸಂದರ್ಭದಲ್ಲಿ ಇಂಜಿನಿಯರ್ಸ್ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಂಘದ ಇಂಜಿನಿಯರ್‌ಗಳನ್ನು ಸನ್ಮಾನಿಸಿ ಶಿವರಾಜ ಅಂಡಗಿ ಮಾತನಾಡಿದರು.
ಸಂಘದ ಸದಸ್ಯರು ವಕೀಲರು, ಇಂಜಿನಿಯರ್‌ಗಳು, ವೈದ್ಯರು, ಉದ್ಯಮಿಗಳು ಹಾಗೂ ಪ್ರಾಧ್ಯಾಪಕರಾಗಿ ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ. ವೃತ್ತಿಜೀವನದ ಜೊತೆಗೆ ಸಂಘದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.
ಇಂಜಿನಿಯರ್‌ಗಳಾದ ಲಿಂಗರಾಜ ಕಾಳೆ, ಸಂತೋಷ ನಿಂಬೂರ, ಸಂಗಮೇಶ ಹೆಬ್ಬಾಳ, ಧನರಾಜ ಹೆಬ್ಬಾಳ, ಪ್ರಿಯಾ ನಾಗಶೆಟ್ಟಿ, ಕೃತಿಕಾ ಹೆಬ್ಬಾಳ ಹಾಗೂ ರಶ್ಮಿ ನಿಂಬೂರ ಅವರನ್ನು ಕಾಲೋನಿಯ ಹಿರಿಯ ಮಹಿಳೆಯರು ಸನ್ಮಾನಿಸಿ ಗೌರವಿಸಿದರು.
ಸಂಘದ ಪದಾಧಿಕಾರಿಗಳಾದ ಕರಣಕುಮಾರ ಆಂದೋಲಾ, ಶಶಿಧರ ಪ್ಯಾಟಿ, ಸಂಜು ತಂಬಾಕೆ, ಶಿವರಾಜ ಕೋಳಕೂರ, ಡಾ. ಗುರುರಾಜ ಮುಗಳಿ, ಶ್ರೀವತ್ಸ ಸಂಗೋಳಗಿ, ಮಹಾದೇವ ತಂಬಾಕೆ, ಸುನೀಲ ಮುತ್ತಾ, ಅಮೀತ್ ಸಿಕೇದ, ವಿಶ್ವನಾಥ ಮಠಪತಿ, ಧರ್ಮರಾಜ ಹೆಬ್ಬಾಳ, ಅನೀಲಕುಮಾರ ನಾಗೂರ, ಶಿವರಾಜ ಪಾಟೀಲ ಮಾಡ್ಯಾಳ, ಅರುಣಕುಮಾರ ಪಾಟೀಲ, ನಿಖಿತ್ ಮುಗಳಿ, ಹರ್ಷಾ ಸಂಗಶೆಟ್ಟಿ ಸೇರಿದಂತೆ ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

