ಗಣೇಶೋತ್ಸವಕ್ಕೆ ಗಣಪತಿ ಸ್ವಾಗತ
ಗಣೇಶೋತ್ಸವಕ್ಕೆ ಗಣಪತಿ ಸ್ವಾಗತ
ಕಲಬುರಗಿ: ಗಣೇಶೋತ್ಸವ–2026ರ ಅಂಗವಾಗಿ ನಗರದ ವಿದ್ಯಾನಗರ, ಸೇಡಂ ರಸ್ತೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ಗಣಪತಿ ಮೂರ್ತಿಯನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು.
ಗಣೇಶೋತ್ಸವದ ಅಂಗವಾಗಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸಿ, ಸಡಗರದಿಂದ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ, ಕಾರ್ಯದರ್ಶಿ ಕರಣ ಆಂದೋಲ, ಪದಾಧಿಕಾರಿಗಳಾದ ಸಂಜು ತಂಬಾಕೆ, ಗುರುರಾಜ ಮುಗಳಿ, ಶಶಿಧರ ಪ್ಯಾಟಿ, ಸುನಿಲ್ ಮುತ್ತಾ, ಸಂಗಮೇಶ ಹೆಬ್ಬಾಳ, ಶ್ರೀವಾಸ್ತ ಸಂಗೊಳಗಿ, ಅಮಿತ ಸೀಕೆದ, ಲಿಂಗರಾಜ ಕಾಳೆ, ಅನಿಲಕುಮಾರ ನಾಗೂರ, ಹರ್ಷಾ ಸಂಗಶೆಟ್ಟಿ, ಧರ್ಮರಾಜ ಹೆಬ್ಬಾಳ, ನಿಖಿತ ಮುಗುಳಿ, ಮಹಾದೇವ ತಂಬಾಕೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

