ಚಿಂಚೋಳಿಯಲ್ಲಿ ಸಂಭ್ರಮದ ಕಲ್ಯಾಣ ಕರ್ನಾಟಕ ಉತ್ಸವ ಜರುಗಿತು. ದಿ.ವೈಜಿನಾಥ ಪಾಟೀಲರ ಹೋರಾಟ, ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮ ಮರೆಯುವಂತಿಲ್ಲ : ತಹಸೀಲ್ದಾರ ಜಮಖಂಡಿ

ಚಿಂಚೋಳಿಯಲ್ಲಿ ಸಂಭ್ರಮದ ಕಲ್ಯಾಣ ಕರ್ನಾಟಕ ಉತ್ಸವ ಜರುಗಿತು. ದಿ.ವೈಜಿನಾಥ ಪಾಟೀಲರ ಹೋರಾಟ, ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮ ಮರೆಯುವಂತಿಲ್ಲ : ತಹಸೀಲ್ದಾರ ಜಮಖಂಡಿ

ಚಿಂಚೋಳಿಯಲ್ಲಿ ಸಂಭ್ರಮದ ಕಲ್ಯಾಣ ಕರ್ನಾಟಕ ಉತ್ಸವ ಜರುಗಿತು.

ದಿ.ವೈಜಿನಾಥ ಪಾಟೀಲರ ಹೋರಾಟ, ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮ ಮರೆಯುವಂತಿಲ್ಲ : ತಹಸೀಲ್ದಾರ ಜಮಖಂಡಿ 

ಚಿಂಚೋಳಿ : ನಿಜಾಮರ ಆಳ್ವಿಕೆಯಲ್ಲಿದ್ದ ಹೈದ್ರಾಬಾದ ಕರ್ನಾಟಕದ (ಕಲ್ಯಾಣ ಕರ್ನಾಟಕ) ಜಿಲ್ಲೆಗಳು ಭಾರತದ ಒಕ್ಕೂಟದ ವ್ಯವಸ್ಥೆಯಿಂದ ಹೋರಗೆ ಉಳಿಯುವಂತಾಗಿದವು. ಸರದಾರ ವಲ್ಲಾಭಾಯಿ ಪಟೇಲರ ದಿಟ್ಟ ನಿರ್ಧಾರದ ಹೆಜ್ಜೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಅವರ ಸಲಹೆಯೊಂದಿಗೆ ಪೊಲೀಸ್ ಕಾರ್ಯಚರಣೆ ನಡೆಸಿದರ ಫಲವಾಗಿ ನಿಜಾಮರ ಆಳ್ವಿಕೆ ಅಂತ್ಯಗೊಂಡು ಹೈದ್ರಾಬಾದ ಕರ್ನಾಟಕ ಭಾರತ ಒಕ್ಕೂಟದಲ್ಲಿ ಸೇರ್ಪಡೆ ಗೊಂಡಿತ್ತು. ಅದರಂತೆ ದಿ. ವೈಜಿನಾಥ ಪಾಟೀಲರ ಹೋರಾಟ ಮತ್ತು ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮ ಮರಿಯುವಂತಿಲ್ಲ ಎಂದು ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ತಿಳಿಸಿದರು. 

ಅವರು ತಾಲೂಕ ಆಡಳಿತಸೌಧ ತಹಸೀಲ ಕಾರ್ಯಾಲಯ ಆವರಣದಲ್ಲಿ 79ನೇ ಹೈದ್ರಾಬಾದ ಕರ್ನಾಟಕ ವಿಮೋಚನೆ ದಿನಾಚರಣೆಯ ಅಂಗವಾಗಿ ನಡೆದ ಧ್ವಜರೋಹಣ ಕಾರ್ಯಕ್ರಮ ನೆರವೆರಿಸಿ ಮಾತನಾಡಿದರು. 

ನಿಜಾಮರ ಆಳ್ವಿಕೆಯಲ್ಲಿದ್ದ ಹೈದ್ರಾಬಾದ ಕರ್ನಾಟಕವನ್ನು ಪ್ರತೇಕಗೊಳಿಸಲು ಡಾ.ಬಿ.ಅಂಬೇಡ್ಕರ್ ಅವರ ಸಲಹೆ ಸರದಾರ ವಲ್ಲಭಾಯಿ ಪಟೇಲರು ಪಡೆದಿದರು. ಅವರ ಸಲಹೆಯಂತೆ ಪಟೇಲರು ಪೊಲೀಸ್ ಕಾರ್ಯಾಚರಣೆ ನಡೆಸಿ ಹೈದ್ರಾಬಾದ ಕರ್ನಾಟಕ ಪ್ರದೇಶವನ್ನು ನಿಜಾಮರ ಹಿಡಿತದಿಂದ ಬಿಡುಗಡೆಗೊಂಡು ಭಾರತ ಒಕ್ಕೂಟದಲ್ಲಿ ಸೇರಲು ಸಾಧ್ಯವಾಗಿದೆ. ಈ ಹಿನ್ನಲೆಯಲ್ಲಿ ಸೆ.17 ರ ದಿನವನ್ನು ಹೈದ್ರಾಬಾದ ಕರ್ನಾಟಕ ವಿಮೋಚನೆ ದಿನಾಚರಣೆಯನ್ನಾಗಿ ಆಚರಿಸಿ ಸಂಭ್ರಮಿಸಲಾಗುತ್ತಿದೆ. ಈ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಬೇಕೆಂಬ ಉದ್ದೇಶದಿಂದ ದಿ. ಮಾಜಿ ಸಚಿವ ವೈಜಿನಾಥ ಪಾಟೀಲರ ದಿಟ್ಟ ಹೋರಾಟ 371 ಜೆ ಕಲಂ ಪರಿಚಯ ಗೊಂಡಿದೆ. ವೈಜಿನಾಥ ಪಾಟೀಲರ ಹೋರಾಟ ನಡೆಸದೇ ಇದ್ದಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿಯಿಂದ ವಂಚಿತಗೊಳುವ ಪರಿಸ್ಥಿ ನಿರ್ಮಾಣವಿತ್ತು. ಅದನ್ನು ಹೊಗಲಾಡಿಸಲು ದಿ. ವೈಜಿನಾಥ ಪಾಟೀಲರ ನಿರಂತರ ಹೋರಾಟ ನಡೆಸಿದರ ಫಲವಾಗಿ ಹಾಗೂ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮದ ಫಲವಾಗಿ ವಿದ್ಯಾರ್ಥಿಗಳು 371 ಜೆ ಕಲಂ ಅಡಿಯಲ್ಲಿ ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿ ಪಡೆಯಲು ಅನುಕೂಲವಾಗಿದ್ದರ ಹಿನ್ನಲೆಯಲ್ಲಿ ಸರದಾರ ಪಟೇಲರ ಹಾಗೂ ವೈಜಿನಾಥ ಪಾಟೀಲರ ಹೊರಾಟದ ಚಾಪುಗಳು ಮರೆಯುವಂತಿಲ್ಲ. ಆದರೆ ಜನರು ಸಂವಿಧಾನವನ್ನು ಸದುಪಯೋಗ ಪಡೆದುಕೊಳ್ಳುವಲಿ ವಿಫಲರಾಗುತ್ತಿರುವ ಹಿನ್ನಲೆಯಲ್ಲಿ 371ಜೆ ಕಲಂನ ಲಾಭ ನೆರೆಯ ವಿಜಯಪೂರ ಜಿಲ್ಲೆಯ ಪಾಲಾಗುತ್ತಿವೆ ಎಂದರು. 

ಶಿಕ್ಷಣ ಸಂಯೋಜಕ ಅಶೋಕ ಹೂವಿನಭಾವಿ ಅವರು ವಿಶೇಷ ಉಪನ್ಯಾಸ ನೀಡಿದರು. ಇದೇ ವೇಳೆ ವಿಶ್ವಕರ್ಮ ಜಯಂತಿ ಆಚರಣೆ ಮಾಡಲಾಯಿತು. ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಮನರಣಜನೆ ಕಾರ್ಯಕ್ರಮ ಜರುಗಿದವು. 

ಈ ಸಂದರ್ಭದಲ್ಲಿ ತಾಲೂಕ ಮಟ್ಟದ ಅಧಿಕಾರಿಗಳು, ರಾಜಕೀಯ ಮುಖಂಡರು, ವಿವಿಧ ಹೋರಾಟದ ಸಂಘಟಕರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದರು.