ರಾಯಲ್ ಓಕ್ ಫರ್ನಿಚರ್,ಮಳಿಗೆ ಉದ್ಘಾಟಿಸಿದ ಸಚಿವ ಪ್ರಿಯಾಂಕ ಖರ್ಗೆ
ಕಲಬುರಗಿ, 16 ಸೆಪ್ಟೆಂಬರ್ 2026: ಭಾರತದ ನಂ. 1 ಪೀಠೋಪಕರಣ ಬ್ರಾಂಡ್ ಆಗಿರುವ ರಾಯಲ್ ಓಕ್ ಫರ್ನಿಚರ್, ಕರ್ನಾಟಕದ ಕಲಬುರಗಿಯಲ್ಲಿ ತನ್ನ ಎರಡನೇ ಮಳಿಗೆ ಪ್ರಾರಂಭಿಸಿದೆ. ಕರ್ನಾಟಕ ಸರ್ಕಾರದ ಗೃಹ ವ್ಯವಹಾರಗಳು ಮತ್ತು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಇಲಾಖೆ ಸಚಿವ ಪ್ರಿಯಾಂಕ್ ಎಂ. ಖರ್ಗೆ ಇಲ್ಲಿನ ಸೇಡಂ ರಸ್ತೆಯಲ್ಲಿರುವ ನೂತನ ಮಳಿಗೆಗೆ ಚಾಲನೆ ನೀಡಿದರು.
ಶರಣ ಸಂಸ್ಥಾನ ಕಲಬುರಗಿಯ 9ನೇ ಪೀಠಾಧಿಪತಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪ ಶರಣಬಸವಪ್ಪ ಅಪ್ಪ, ಖ್ವಾಜಾ ಬಂದೇನವಾಜ್ ದರ್ಗಾದ ಹಫೀಜ್ ಸೈಯದ್ ಮುಹಮ್ಮದ್ ಅಲಿ ಅಲ್-ಹುಸೇನಿ ಸಾಹಬ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ದರಮ್ ಸಿಂಗ್, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಈ ಸಂದರ್ಭದಲ್ಲಿ ಹಾಜರಿದ್ದರು. ರಾಯಲ್ ಓಕ್ ಇನ್ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರಾದ ವಿಜಯ್ ಸುಬ್ರಮಣಿಯಂ, ರಾಯಲ್ ಓಕ್ ಇನ್ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಮಥನ್ ಸುಬ್ರಮಣಿಯಂ ಸೇರಿದಂತೆ ಅನೇಕ ಗಣ್ಯರು, ಶಾಸಕರು, ಸಂಸದರು, ಸ್ಥಳೀಯ ರಾಜಕೀಯ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುಮಾರು 14,000 ಚದರ ಅಡಿಯಷ್ಟು ವಿಶಾಲವಾದ ಜಾಗದಲ್ಲಿರುವ ಈ ಮಳಿಗೆಯು, ಲಿವಿಂಗ್ ರೂಮ್, ಮಲಗುವ ಕೋಣೆ, ಊಟದ ಕೋಣೆ, ಅಧ್ಯಯನ ಮತ್ತು ಕಚೇರಿ, ಹೊರಾಂಗಣ, ಗೃಹಾಲಂಕಾರ, ಹಾಸಿಗೆಗಳು ಮತ್ತು ಇನ್ನಿತರ ವಿಭಾಗಗಳಿಗೆ ಸಂಬಂಧಿಸಿದ ವ್ಯಾಪಕ ಶ್ರೇಣಿಯ ಪೀಠೋಪಕರಣಗಳನ್ನು ಒಳಗೊಂಡಿದೆ. ಕಲಬುರಗಿ ನಿವಾಸಿಗಳು ಈಗ ಆಕರ್ಷಕ, ಸ್ಮಾರ್ಟ್ ಮತ್ತು ಉಪಯುಕ್ತ ಪೀಠೋಪಕರಣಗಳ ವೈವಿಧ್ಯಮಯ ಆಯ್ಕೆಗಳನ್ನು ಕೈಗೆಟಕುವ ದರದಲ್ಲಿ ಪಡೆಯಬಹುದಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಯಲ್ ಓಕ್ ಫರ್ನಿಚರ್‌ನ ಅಧ್ಯಕ್ಷರಾದ ವಿಜಯ್ ಸುಬ್ರಮಣಿಯಂ, ‘ಭಾರತ ಮತ್ತು ಯುಎಇ (UAE) ವ್ಯಾಪ್ತಿಯಲ್ಲಿ ಈಗಾಗಲೇ 250ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿರುವ ನಾವು, ಇದೀಗ ಕಲಬುರಗಿಯಲ್ಲಿ ನಮ್ಮ ಎರಡನೇ ಪ್ರಮುಖ ಮಳಿಗೆಯನ್ನು (flagship store) ಪ್ರಾರಂಭಿಸುತ್ತಿರುವುದಕ್ಕೆ ಹೆಮ್ಮೆಪಡುತ್ತೇವೆ. ಈ ಹೊಸ ಮಳಿಗೆಯ ಆರಂಭವು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಮ್ಮ ಬದ್ಧತೆಯನ್ನು ಹಾಗೂ ಈ ಮಾರುಕಟ್ಟೆಯಲ್ಲಿನ ಬೆಳವಣಿಗೆಯ ಸಾಮರ್ಥ್ಯದ ಕುರಿತಾಗಿ ನಮ್ಮ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಇಲ್ಲಿನ ನಮ್ಮ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳು ಮತ್ತು ಅತ್ಯುತ್ತಮ ಸೇವೆಯನ್ನು ನಿರಂತರವಾಗಿ ಒದಗಿಸಲು ನಾವು ಎದುರು ನೋಡುತ್ತಿದ್ದೇವೆ. ನಮ್ಮ ಫ್ರಾಂಚೈಸಿ ಪಾಲುದಾರರಿಗೆ ಶುಭ ಹಾರೈಸುತ್ತೇನೆ’ ಎಂದು ಹೇಳಿದರು.
ಸಮಾರಂಭದಲ್ಲಿದ್ದ ಗಣ್ಯರು: ಬಸವರಾಜ ಮಟ್ಟಿಮಡ್, ಶಾಸಕರು, ಕಲಬುರಗಿ ಗ್ರಾಮೀಣ. ಅಲ್ಲಮಪ್ರಭು ಪಾಟೀಲ, ಶಾಸಕರು, ಕಲಬುರಗಿ ದಕ್ಷಿಣ. ಎಂ.ವೈ.ಪಾಟೀಲ, ಶಾಸಕರು, ಅಫಜಲಪುರ. ರಾಧಾಕೃಷ್ಣ ದೊಡ್ಡಮನಿ, ಸಂಸದ ಕಲಬುರಗಿ. ಶ್ರೀಮತಿ. ಕನೀಜ್ ಫಾತಿಮಾ, ಅಧ್ಯಕ್ಷೆ, ಕೆಎಸ್‌ಐಸಿ. ಲಿಮಿಟೆಡ್ & ಶಾಸಕ ಕಲಬುರ್ಗಿ ಉತ್ತರ. ಮಾಲೀಕಯ್ಯ ವಿ. ಗುತ್ತೇದಾರ್, ಮಾಜಿ ಸಚಿವರು. ಶೇಖ್ ಅಬ್ದುಲ್ ಗೋಳ, ಮೇಯರ್, ಮಹಾನಗರ ಪಾಲಿಕೆ, ಕಲಬುರಗಿ. ಬಿ.ಆರ್.ಪಾಟೀಲ, ಶಾಸಕ ಆಳಂದ. ಡಾ.ಅವಿನಾಶ ಉಮೇಶ ಜಾಧವ, ಶಾಸಕರು, ಚಿಂಚೋಳಿ. ಶಶಿಲ್ ಜಿ. ನಮೋಶಿ, ಎಂಎಲ್ಸಿ & ಅಧ್ಯಕ್ಷರು HKE ಸೊಸೈಟಿ, ಕಲಬುರಗಿ. ಡಾ.ಬಿ.ಜಿ.ಪಾಟೀಲ, ಎಂಎಲ್ಸಿ. ತಿಪ್ಪನಪ್ಪ ಕಾಮಕನೂರ, ಎಂಎಲ್ಸಿ. ಜಗದೇವ್ ಗುತ್ತೇದಾರ್, ಎಂಎಲ್ಸಿ. ಡಾ.ಚಂದ್ರಶೇಖರ ಪಾಟೀಲ, ಹುಮನಾಬಾದ್, ಎಂಎಲ್ಸಿ. ದತ್ತಾತ್ರೇಯ ಸಿ.ಪಾಟೀಲ್, ಮಾಜಿ ಶಾಸಕರು, ಕಲಬುರಗಿ ದಕ್ಷಿಣ. ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್, ಮಾಜಿ ಶಾಸಕರು, ಜೇವರ್ಗಿ. ಚಂದ್ರಕಾಂತ ಬಿ.ಪಾಟೀಲ, ಬಿಜೆಪಿ ಅಧ್ಯಕ್ಷರು, ಕಲಬುರಗಿ ನಗರ. ಅರುಣಕುಮಾರ ಎಂ. ಪಾಟೀಲ್, ಅಧ್ಯಕ್ಷರು, ಕೆಕೆಆರ್ಟಿಸಿ, ಕಲಬುರಗಿ. ಪ್ರವೀಣಕುಮಾರ ಪಾಟೀಲ್ ಹರವಾಲ್, ಅಧ್ಯಕ್ಷರು, ಜೆಸ್ಕಾಂ, ಕಲಬುರಗಿ. ಮಜರ್ ಆಲಂಖಾನ್, ಅಧ್ಯಕ್ಷರು, ಕುಡಾ, ಕಲಬುರಗಿ. ಫ್ರಾಂಚೈಸಿ ಪಾಲುದಾರ ಗುಡುಲಾಲ್ ಎಂ. ಶೇಖ್ - ಕಲಬುರಗಿಯ M/S S.G. ಎಂಟರ್‌ಪ್ರೈಸಸ್‌ನ ಅಫ್ಫಾನ್ ಉಬೇದ್ ಜಿ. ಶೇಖ್
ಮಳಿಗೆ ವಿಳಾಸ: ಎಸ್.ಜಿ. ಎಂಟರ್‌ಪ್ರೈಸಸ್, ಎಂಆರ್‌ಎಂಸಿ (MRMC) ಎದುರು, ಸೇಡಂ ರಸ್ತೆ, ಕಲಬುರಗಿ – 585105, ದೂರವಾಣಿ: 63649 25003

