ಅರ್ಹ ಮತದಾರನ ಸ್ವತಂತ್ರ ಮತವೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ : ಪಿ ಎಸ್ ವಸ್ತ್ರದ
ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಕೇವಲ ಚುನಾವಣೆ ನಡೆಸುವದರಲ್ಲಿ ಇಲ್ಲ ಅರ್ಹ ಮತದಾರ ಸ್ವತಂತ್ರವಾಗಿ ಮತ್ತು ಜವಾಬ್ದಾರಿಯಿಂದ ಮತ ಚಲಾಯಿಸುವದರಲ್ಲಿದೆ ಪಿ ಎಸ್ ವಸ್ತ್ರದ
ಕಲಬುರ್ಗಿ:ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಕೇವಲ ಚುನಾವಣೆ ನಡೆಸುವುದರಲ್ಲಿ ಇಲ್ಲ. ಪ್ರತಿಯೊಬ್ಬ ಅರ್ಹ ನಾಗರಿಕನು ತಿಳುವಳಿಕೆಯಿಂದ, ಸ್ವತಂತ್ರವಾಗಿ ಮತ್ತು ಜವಾಬ್ದಾರಿಯಿಂದ ಮತ ಚಲಾಯಿಸುವುದರಲ್ಲಿದೆ ಎಂದು ನಿವೃತ್ತ ಐ ಎ ಎಸ್ ಅಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯೋಗದ ನಿವೃತ್ತ ನೋಡಲ್ ಅಧಿಕಾರಿ ಪಿ ಎಸ್ ವಸ್ತ್ರದ ಹೇಳಿದರು
ಅವರು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಂಸ್ಥೆಯ ಎಲ್ಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳಿಗೆ ಸ್ವೀಪ್ (SVEEP) ಮಾಹಿತಿ ಕಾರ್ಯಗಾರದಲ್ಲಿ ಮಾತನಾಡುತ್ತಿದ್ದರು.
ನಮ್ಮ ದೇಶದಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ನೀಡಲಾಗಿದೆ. ಆದರೆ ಮತದಾನದ ಹಕ್ಕು ದೊರೆತಿದೆ ಎನ್ನುವುದಷ್ಟೇ ಸಾಕಾಗುವುದಿಲ್ಲ. ಆ ಹಕ್ಕಿನ ಮಹತ್ವವನ್ನು ಅರ್ಥಮಾಡಿಕೊಂಡು ಮತದಾನದಲ್ಲಿ ಭಾಗವಹಿಸುವುದು ಮುಖ್ಯ.ಆ ಕಾರಣಕ್ಕಾಗಿಯೇ ಸ್ವೀಪ್ SVEEP ಕಾರ್ಯಕ್ರಮ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ನಾವು ಮತಗಟ್ಟೆಗೆ ಹೋಗಿ ಮತ ಚಲಾಯಿಸುವಾಗ ನಮ್ಮ ಒಂದು ಮತದ ಮೂಲಕ ಮುಂದಿನ ಐದು ವರ್ಷಗಳ ಆಡಳಿತದ ದಿಕ್ಕನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತೇವೆ.
ಆದ್ದರಿಂದ ಮತದಾನ ಮಾಡುವಾಗ ಯಾವುದೇ ಆಮಿಷ, ಒತ್ತಡ ಅಥವಾ ತಪ್ಪು ಮಾಹಿತಿಗೆ ಒಳಗಾಗದೆ, ಅಭ್ಯರ್ಥಿಗಳ ವಿಚಾರಧಾರೆ, ಕಾರ್ಯಕ್ಷಮತೆ ಮತ್ತು ಸಾರ್ವಜನಿಕ ಸೇವೆಯ ಬಗ್ಗೆ ತಿಳಿದು ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
Enumeration ಮೂಲಕ ಮತದಾರರ ಪಟ್ಟಿಯಲ್ಲಿರುವ ಮಾಹಿತಿಯನ್ನು ಪರಿಶೀಲಿಸುವುದು, ಅರ್ಹ ಹೊಸ ಮತದಾರರನ್ನು ಗುರುತಿಸುವುದು ಹಾಗೂ ಬದಲಾವಣೆ ಅಗತ್ಯವಿರುವ ವಿವರಗಳನ್ನು ಪತ್ತೆಹಚ್ಚುವುದು ಸಾಧ್ಯವಾಗುತ್ತದೆ.
18 ವರ್ಷ ಪೂರ್ಣಗೊಳಿಸಿದ ಅರ್ಹ ಯುವಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು.
ಅದೇ ರೀತಿ ಸ್ಥಳಾಂತರಗೊಂಡವರು, ಮರಣ ಹೊಂದಿದವರು ಅಥವಾ ಮತದಾರರ ಪಟ್ಟಿಯಲ್ಲಿ ಬದಲಾವಣೆ ಅಗತ್ಯವಿರುವವರ ಮಾಹಿತಿಯನ್ನೂ ನಿಯಮಾನುಸಾರ ಪರಿಶೀಲಿಸುವುದು ಮುಖ್ಯ ಎಂದು ಹೇಳಿದರು.
Enumeration ಮೂಲಕ ಮತದಾರರ ಪಟ್ಟಿಯನ್ನು ಹೆಚ್ಚು ನಿಖರ ಮತ್ತು ಸಮಗ್ರಗೊಳಿಸುವುದರಿಂದ, ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಗತ್ಯವಾದ ಮೂಲಭೂತ ವ್ಯವಸ್ಥೆ ಬಲಪಡುತ್ತದೆ. SVEEPನ ಮತದಾರರ ಜಾಗೃತಿ ಚಟುವಟಿಕೆಗಳೊಂದಿಗೆ ಇದು ಪರಿಣಾಮಕಾರಿಯಾಗಿ ಜಾರಿಯಾದಾಗ ಮತದಾನದ ಪ್ರಮಾಣ ಹೆಚ್ಚಲು ಸಹಕಾರಿಯಾಗುತ್ತದೆ. ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ ಎಸ್ ಎಲ್ ಹೀರೆಮಠ ವಹಿಸಿದ್ದರು.
ಸಂಭಂದಿಸಿದ ಚುನಾವಣಾಧಿಕಾರಿಗಳು, ಬಿ ಎಲ್ ಓ ಹಾಗೂ ಸಂಸ್ಥೆಯ ಎಲ್ಲಾ ಕಾಲೇಜುಗಳ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು. ಡಾ ನಾಗೇಶ್ ಸಾಲಿಮಠ ಕಾರ್ಯಕ್ರಮ ನಿರೂಪಿಸಿದರು, ಸಂಸ್ಥೆಯ ವಿಶೇಷಾದಿಕಾರಿ ಡಾ ಪರಮೇಶ್ ವಂದಿಸಿದರು

