24 ರಂದು ಸಿದ್ರಾಮೇಶ್ವರ ಗದ್ದುಗೆಗೆ ಮಹಾರುದ್ರಾಭಿಷೇಕ
24 ರಂದು ಸಿದ್ರಾಮೇಶ್ವರ ಗದ್ದುಗೆಗೆ ಮಹಾರುದ್ರಾಭಿಷೇಕ.
ಶಹಪುರ : ತಾಲೂಕಿನ ಸಗರ ಗ್ರಾಮದ ದೇಸಾಯಿ ಮಠದಲ್ಲಿ ಇದೇ 24 ರಂದು ಬೆಳಗ್ಗೆ 8:30 ಕ್ಕೆ ಶ್ರಾವಣ ಮಾಸದ ನಿಮಿತ್ಯ ಶ್ರೀ ಮಹಾತ್ಮ ಸಿದ್ರಾಮೇಶ್ವರ ಸ್ವಾಮಿ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪಂಚಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಮುಖ್ಯಸ್ಥರಾದ ಈಶ್ವರಾಜ ಸ್ವಾಮಿ ದೇಸಾಯಿ ಮಠ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸದ ಎರಡನೇ ಶ್ರಾವಣ ಸೋಮವಾರದಂದು ಸಿದ್ರಾಮೇಶ್ವರ ಸ್ವಾಮಿ ಕರ್ತೃ ಗದ್ದುಗೆಗೆ ವಿಶೇಷವಾಗಿ ಪೂಜೆ ಪುನಸ್ಕಾರಗಳು ನೆರವೇರಲಿವೆ ಎಂದು ಮಠದ ಮೂಲಗಳು ತಿಳಿಸಿವೆ.ಬಹಳ ಹೆಸರುವಾಸಿಯಾದ ಈ ಮಠ ಭಕ್ತರ ಪಾಲಿನ ಬೆಳಕಾಗಿ ನಿರಂತರ ಕಾಯಕದಲ್ಲಿ ತೊಡಗಿದೆ.
ಈ ಒಂದು ಪೂಜಾ ಕಾರ್ಯಕ್ರಮದಲ್ಲಿ ಸಗರ ನಾಡಿನ ಹರ ಗುರು ಚರಮೂರ್ತಿಗಳು ಭಾಗವಹಿಸುವುದರಿಂದ ಸಗರ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳ ಭಕ್ತಾದಿಗಳು ಭಾಗವಹಿಸಿ ಸಿದ್ರಾಮೇಶ್ವರ ಸ್ವಾಮೀಜಿಯವರ ಆಶೀರ್ವಾದ ಪಡೆದು ಪುನೀತರಾಗಬೇಕೆಂದು ವಿನಂತಿಸಿಕೊಂಡರು, ತದನಂತರದಲ್ಲಿ ಪ್ರಸಾದ ಸೇವೆಯು ಕಲ್ಪಿಸಲಾಗಿದೆ ಎಂದು ತಿಳಿಸಿದರು.

