ಸಂಸದ ಸಾಗರ ಖಂಡ್ರೆ ಅವರಿಂದ ಉದ್ದೇಶಿಸಿದ ಚಂದ್ರಂಪಳ್ಳಿಯಲ್ಲಿ ಅರಣ್ಯ ಮಹಾವಿದ್ಯಾಲಯ ಸ್ಥಾಪನೆಗೆ ಸ್ಥಳ ಪರಿಶೀಲನೆ
ಸಂಸದ ಸಾಗರ ಖಂಡ್ರೆ ಅವರಿಂದ ಉದ್ದೇಶಿಸಿದ ಚಂದ್ರಂಪಳ್ಳಿಯಲ್ಲಿ ಅರಣ್ಯ ಮಹಾವಿದ್ಯಾಲಯ ಸ್ಥಾಪನೆಗೆ ಸ್ಥಳ ಪರಿಶೀಲನೆ
ಚಿಂಚೋಳಿ ಆರ್ಥಿಕವಾಗಿ ಅಭಿವೃದ್ಧಿಗೊಳಲು ಚಂದ್ರಂಪಳ್ಳಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಪಡಿಸಲು ಕಾಂಗ್ರೇಸ್ ಸರಕಾರ ಬದ್ಧವಾಗಿದೆ : ಸಂಸದ
ಚಿಂಚೋಳಿ : ಕಲ್ಯಾಣ ಕರ್ನಾಟ ಭಾಗದಲ್ಲಿ ಉತ್ತಮ ಅರಣ್ಯ ಪರಿಸರವಿದ್ದರೂ, ಅರಣ್ಯ ಮಹಾವಿದ್ಯಾಲಯಗಳು ಸ್ಥಾಪನೆಗೆ ಕ್ರಮಕೈಗೊಂಡಿರಲಿಲ್ಲ. ಈ ಹಿನ್ನಲೆಯಲ್ಲಿ ಈ ಭಾಗದಲ್ಲಿ ಒಂದು ಅರಣ್ಯ ಮಹಾವಿದ್ಯಾಲಯ ಸ್ಥಾಪನೆ ಆಗಬೇಕೆಂಬ ಬೇಡಿಕೆಗೆ ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಈಶ್ವರ ಖಂಡ್ರೆ ಅವರು ಸ್ಪಂದಿಸಿ, ಚಂದ್ರಂಪಳ್ಳಿಯಲ್ಲಿ ಅರಣ್ಯ ಮಹಾವಿದ್ಯಾಲಯ ಕಾಲೇಜು ಸ್ಥಾಪನೆಗೆ ಕ್ರಮಕೈಗೊಳಲಾಗಿದೆ ಎಂದು ಬೀದರ ಸಂಸದ ಸಾಗರ ಈಶ್ವರ ಖಂಡ್ರೆ ಅವರು ತಿಳಿಸಿದರು.
ತಾಲೂಕಿನ ಚಂದ್ರಂಪಳ್ಳಿಯಲ್ಲಿ ಸ್ಥಾಪಿಸಲ್ಪಡುತ್ತಿರುವ ಅರಣ್ಯ ಮಹಾವಿದ್ಯಾಲಯ ಕಾಲೇಜಿನ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಿಂಚೋಳಿ ಆರ್ಥಿಕವಾಗಿ ಹಿಂದುಳಿದ ತಾಲೂಕು ಆಗಿದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ದೃಷ್ಠಿಯಿಂದ ತಾಲೂಕಿನ ಚಂದ್ರಂಪಳ್ಳಿ ಜಲಾಶಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶ ಸರಕಾರ ಹೊಂದಿದೆ. ಇದರ ಭಾಗವಾಗಿ ಚಂದ್ರಂಪಳ್ಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತೋಟಗಾರಿಕೆ ಇಲಾಖೆಯ 150 ಎಕರೆಯ ಖಾಲಿ ಜಾಗದಲ್ಲಿ ಅರಣ್ಯ ಮಹಾವಿದ್ಯಾಲಯ ಕಾಲೇಜು ಸ್ಥಾಪನೆಗೆ ಕ್ರಮಕೈಗೊಳಲಾಗಿದೆ. ಇದ್ದರಿಂದ ಚಿಂಚೋಳಿ ತಾಲೂಕು ಆರ್ಥಿಕವಾಗಿ ಅಭಿವೃದ್ಧಿಗೊಳುವ ಗುರಿ ಹೊಂದಿದೆ. ಈಗಾಗಲೇ ಜಿಲ್ಲೆಯ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಈಶ್ವರ ಖಂಡ್ರೆ ಅವರು ಚಂದ್ರಂಪಳ್ಳಿ ಜಲಾಶಾಯ ಪ್ರವಾಸೋದ್ಯಮಕ್ಕೆ ಅಭಿವೃದ್ಧಿಗೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳು ಹಂತ ಹಂತವಾಗಿ ಒದಗಿಸಲು ಕ್ರಮವಹಿಸಲಾಗುತ್ತಿದೆ. ಜಿಲ್ಲೆಯ ಸಚಿವರುಗಳು ಚಿಂಚೋಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ನೀಲಿ ನಕ್ಷೆ ಕೂಡ ತಯಾರಿಸಲಾಗಿದ್ದು, ಅಭಿವೃದ್ಧಿಗೆ ಕಾಂಗ್ರೇಸ್ ಸರಕಾರ ಬದ್ಧವಾಗಿದೆ ಎಂದರು.
ಇದಕ್ಕೂ ಮೊದಲು ತಾಲೂಕಿನ ಚಿಮ್ಮಿದ್ಲಾಯಿ, ಅಣವಾರ ಮತ್ತು ಪೋಲಕಪಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಸುಭಾಷ ರಾಠೋಡ, ಬ್ಲಾಕ್ ಅಧ್ಯಕ್ಷ ಬಸವರಾಜ ಮಾಲಿ, ಬಾಲಭವನ ರಾಜ್ಯ ಉಪಾಧ್ಯಕ್ಷ ಅನೀಲ ದೇವೀಂದ್ರಪ್ಪ ಜಮಾದಾರ, ಪ್ರವೀಣ ಟಿ.ಟಿ, ನಾಗೇಶ ಗುಣಾಜಿ, ಆನಂದ ಟೈಗರ್, ಶರಣು ಪಾಟೀಲ್, ಅಬ್ದುಲ್ ಬಾಷಿದ್, ಸಂತೋಷ ಗುತ್ತೇದಾರ, ವಿಶ್ವನಾಥ ಝಪಿ ಇದ್ದರು.

