ಕ್ಷೌರಿಕರ ದರ ಪರಿಷ್ಕರಣೆ ಕುರಿತು 13ರಂದು ಸಭೆ

ಕ್ಷೌರಿಕರ ದರ ಪರಿಷ್ಕರಣೆ ಕುರಿತು 13ರಂದು ಸಭೆ

ಕ್ಷೌರಿಕರ ದರ ಪರಿಷ್ಕರಣೆ ಕುರಿತು 13ರಂದು ಸಭೆ

ಕಲಬುರಗಿ: ಜಿಲ್ಲಾ ಸವಿತಾ ಸಮಾಜದ ವತಿಯಿಂದ ಕ್ಷೌರಿಕರ ದರಪಟ್ಟಿ ಪರಿಷ್ಕರಣೆ ಹಾಗೂ ಸಮಾಜದ ವಿವಿಧ ಚಟುವಟಿಕೆಗಳ ಕುರಿತು ಚರ್ಚಿಸಲು ಅ.13ರಂದು ಬೆಳಿಗ್ಗೆ ರಾಮನಗರದ ಎಸ್.ಬಿ. ಕಾಲೇಜು ಸಮೀಪದ ಸಮಾಜದ ಕಾರ್ಯಾಲಯದಲ್ಲಿ ಜನರಲ್ ಬಾಡಿ ಸಭೆ ಆಯೋಜಿಸಲಾಗಿದೆ.

ಸಭೆಯಲ್ಲಿ ಪ್ರಸ್ತುತ ಕ್ಷೌರ ದರಪಟ್ಟಿಯಲ್ಲಿರುವ ದರಗಳನ್ನು ಪರಿಷ್ಕರಿಸುವ ಕುರಿತು ಚರ್ಚೆ ನಡೆಯಲಿದೆ. ಜತೆಗೆ ಸಮಾಜದ ಸಂಘಟನಾತ್ಮಕ ಚಟುವಟಿಕೆಗಳು ಹಾಗೂ ಸದಸ್ಯರ ವಿವಿಧ ವಿಚಾರಗಳ ಕುರಿತು ಸಮಾಲೋಚನೆ ನಡೆಸಲಾಗುವುದು. ಜಿಲ್ಲೆಯ ಎಲ್ಲ ಸವಿತಾ ಸಮಾಜದ ಬಾಂಧವರು ಸಭೆಗೆ ತಪ್ಪದೆ ಹಾಜರಾಗುವಂತೆ ಸಮಾಜದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಇದೇ ವೇಳೆ, ಮಂಗಳವಾರದಂದು ಕೆಲವು ಕ್ಷೌರದ ಅಂಗಡಿಗಳು ತೆರೆಯುತ್ತಿರುವುದು ಗಮನಕ್ಕೆ ಬಂದಿದ್ದು, ಸಮಾಜದ ಬಾಂಧವರು ಮಂಗಳವಾರ ಕಡ್ಡಾಯವಾಗಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಶಂಕರ ಎಸ್. ಕಾಳನೂರ, ಗೌರವಾಧ್ಯಕ್ಷ ಶರಣಬಸಪ್ಪ ಎಂ. ಸೂರ್ಯವಂಶಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪೆದ್ದರಪೇಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.