ಸೋಲಾ‌ರ್ ಅಳವಡಿಸಿ ಉಚಿತ ವಿದ್ಯುತ್ ಪಡೆಯಿರಿ

ಸೋಲಾ‌ರ್ ಅಳವಡಿಸಿ ಉಚಿತ ವಿದ್ಯುತ್ ಪಡೆಯಿರಿ

ಸೋಲಾ‌ರ್ ಅಳವಡಿಸಿ ಉಚಿತ ವಿದ್ಯುತ್ ಪಡೆಯಿರಿ

ನಾಗರಾಜ್ ದಂಡಾವತಿ ಶಹಾಬಾದ: ಕೇಂದ್ರ ಸರ್ಕಾರ ಪ್ರಾರಂಭಿಸಿದ ಮುಫ್ ಬಿಜಲಿ ಯೋಜನೆ, ಪಿಎಂ ಸೂರ್ಯಘರ್ ಅಡಿಯಲ್ಲಿ ಶೇ. 50%ರಷ್ಟು ಸಹಾಯಧನ ಪಡೆದು ಅತಿ ಕಡಿಮೆ ವೆಚ್ಚದಲ್ಲಿ ಸೋಲಾರ ಅಳಬೇಡಿಸಿಕೊಂಡು ವಿದ್ಯುತ್ ಬಿಲ್ ಕಡಿಮೆ ಮಾಡುವ ಮೂಲಕ ಉಳಿತಾಯ ಮಾಡಿಕೊಳ್ಳಿವ ಈ ಮಹತ್ವ ಯೋಜನೆ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕು ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ಸೈಯದ್ ಯೂನುಸ್ ರವರು ಹೇಳಿದರು.

ಅವರು ಜೆಸ್ಕಾಂ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ತಿಳಿಸಿದರು.

ಕಲಬುರಗಿ ವಿದ್ಯುತ್ ಶಕ್ತಿ ಸರಬರಾಜು ಕಂಪನಿ ವತಿಯಿಂದ ಬ್ಯಾಂಕುಗಳ ಮೂಲಕ ಸಬ್ಸಿಡಿ ಪಡೆದು ಒಂದು ಬಾರಿ ಹಣ ಹೂಡಿಕೆ ಮಾಡಿ ಸುಮಾರು 25 ವರ್ಷಗಳ ಕಾಲ ವಿದ್ಯುತ ಬಿಲ್ ಕಡಿಮೆ ಮಾಡುವುದರ ಜೊತೆಗೆ ಜೆಸ್ಕಾಂ ಕಂಪನಿಗೆ ವಿದ್ಯುತ ಮಾರಾಟ ಮಾಡುವ ಮೂಲಕ ಲಾಭ ಕೂಡ ಮಾಡಿಕೊಳ್ಳಬಹುದು, ಕಡಿಮೆ ನಿರ್ವಹಣೆ ವೆಚ್ಚ ಹಾಗೂ ಪರಿಸರ ಸ್ನೇಹಿ ವಿದ್ಯುತ ಆಗಿರುವುದರಿಂದ ಗ್ರಾಹಕರು ತಪ್ಪದ ಈ ಯೋಜನೆ ಲಾಭವನ್ನು ಪಡೆಯಬಹುದು. ಇನ್ನು ಹಲವಾರು ಯೋಜನೆಗಳು ಜಾರಿಯಲ್ಲಿ ಇವೆ ಗ್ರಾಹಕರು ಹೆಚ್ಚಿನ ಮಾಹಿತಿಗೆ ಜೆಸ್ಕಾಂ ಎಇಇ ಅಧಿಕಾರಿ ಕಚೇರಿಗೆ ಸಂಪರ್ಕಿಸಲು ಕೋರಿದ್ದಾರೆ.

ಈ ಸಂದರ್ಭದಲ್ಲಿ ರಾಜೇಶ ಯನಗುಂಟಿಕರ, ಜಹೀರ್ ಅಹ್ಮದ್ ಪಟಬೇಗಾರ, ಭಾನು ಪ್ರತಾಪ ಪವಾರ, ಅಜೀಮ್ ಸೇಠ, ಸೋಲಾರ ಸಿಬ್ಬಂದಿ ಅಬ್ಬಾಸ್ ಅಲಿ, ಜೆಸ್ಕಾಂನ ಮಹೇಶಕುಮಾರ ಇದ್ದರು.