ಲೋಕೋಪಯೋಗಿ ಇಲಾಖೆ ನೌಕರರ ಸಮಸ್ಯೆ ಪರಿಹಾರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ

ಲೋಕೋಪಯೋಗಿ ಇಲಾಖೆ ನೌಕರರ ಸಮಸ್ಯೆ ಪರಿಹಾರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ

ಲೋಕೋಪಯೋಗಿ ಇಲಾಖೆ ನೌಕರರ ಸಮಸ್ಯೆ ಪರಿಹಾರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ

ಕಲಬುರಗಿ: ಲೋಕೋಪಯೋಗಿ ಇಲಾಖೆ ಅಧಿಕಾರಿ–ಸಿಬ್ಬಂದಿ ವರ್ಗದ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಶರಣರಾಜ ಛಪ್ಪರಬಂದಿ ಅವರ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು, ಇಲಾಖೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಹಿರಿಯ ಉಪಾಧ್ಯಕ್ಷ ಭೀಮಣ್ಣ ನಾಯಕ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಂಗೊಳ್ಳಗಿ, ಉಜ್ಜರ್ ಅಹಮದ್ ಖಾನ್, ಕಮಲಾಕರ್ ಆನೆಗುಂದಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕಟ್ಟಿಮನಿ, ಖಜಾಂಚಿ ಉಮಾಕಾಂತ ಹಿರೋಳ್ಳಿ, ಕಾರ್ಯದರ್ಶಿ ಕಿಟೇಂದ್ರ, ಸಹಕಾರ್ಯದರ್ಶಿಗಳಾದ ಶಶಿನಾಥ ಸೊನೆ, ಖಾಸಿಂ ಅಲಿ, ಸಂಘಟನಾ ಕಾರ್ಯದರ್ಶಿಗಳಾದ ಅಕ್ಟರ್ ಪಾಶಾ, ಅಶೋಕ ಸಜ್ಜನ, ಕ್ರೀಡಾ ಕಾರ್ಯದರ್ಶಿ ರಾಮಕೃಷ್ಣ ಸಿಂಗ್, ಸಲಹೆಗಾರರಾದ ಶರಣಗೌಡ ಪಾಟೀಲ್, ಮಂಜುನಾಥ್ ಧೂಳೆ, ಕಾರ್ಯಕಾರಿ ಸದಸ್ಯರಾದ ನಾಗೇಂದ್ರಪ್ಪ, ರಾಜಕುಮಾರ್, ಅಕ್ಷತಾ ಜಮ್‌ಶೆಟ್ಟಿ, ಪಾಂಡುರಂಗ ಕುಲಕರ್ಣಿ, ಕಾರ್ತಿಕ್, ಪ್ರಭು ರಾಥೋಡ್, ಮಹಮ್ಮದ್ ಮಜಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.