ಪುರಾಣ ವೇದಿಕೆಯಲ್ಲಿ ವಂದೇ ಮಾತರಂ ೧೫೦ನೇ ವರ್ಷಾಚರಣೆ

ಪುರಾಣ ವೇದಿಕೆಯಲ್ಲಿ  ವಂದೇ ಮಾತರಂ ೧೫೦ನೇ ವರ್ಷಾಚರಣೆ

ಪುರಾಣ ವೇದಿಕೆಯಲ್ಲಿ ವಂದೇ ಮಾತರಂ ೧೫೦ನೇ ವರ್ಷಾಚರಣೆ 

 ಬಂಕೀಮಚಂದ್ರ ಚಟರ್ಜಿರವರು ೧೮೭೦ರಲ್ಲಿ ರಚಿಸಿದ ಸ್ವತಂತ್ರ ಭಾರತದ ಹೋರಾಟದಲ್ಲಿ ದೇಶಭಕ್ತರಿಗೆ ಸ್ಪೂರ್ತಿಯಾಗಿದ್ದ ಭಾರತದ ರಾಷ್ಟ್ರೀಯ ಗೀತೆಯಾದ ಈ ವಂದೇ ಮಾತರಂ ಮಾದರಿಯಲ್ಲೆ ನಮ್ಮ ಭಕ್ತರಿಗೂ ನಮ್ಮ ಸನಾತನ ಧರ್ಮ ಉಳಿಸಲು ಬೆಳೆಸಲು ಭಕ್ತರಿಗೆ ಪ್ರೇರಣೆಯಾಗಲಿ ಎಂಬ ಸದುದ್ದೇಶದಿಂದ ಬಂದಂತಹ ಎಲ್ಲಾ ಭಕ್ತರಿಗೆ ಕೊರಳಲ್ಲಿ ರಾಷ್ಟ್ರೀಯ ಧ್ವಜ ಧರಿಸಿ ವಂದೆ ಮಾತರಂ ಗೀತೆಯನ್ನು ಹಾಡಿ ೧೫೦ನೇ ವರ್ಷಾಚರಣೆ ನೂರಾರು ಭಕ್ತರ ಮಧ್ಯೆದಲ್ಲಿ ಸಂಭ್ರಮಿಸಲಾಯಿತು ಎಂದು ವಿದ್ಯಾನಗರ ವೆಲ್‌ಫೇರ್ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

 ದೇಶದ ೮೦ನೇ ಸ್ವಾತಂತ್ರೋತ್ಸವ ದಿನಾಚರಣೆ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ವಂದೇ ಮಾತರಂ ಹಾಡುವ ಮೂಲಕ ದಾಖಲೆಯಾದ ಆಚರಣೆ ನಮ್ಮ ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಪುರಾಣ ಪ್ರವಚನ ವೇದಿಕೆಯಲ್ಲಿಯೂ ಇತಿಹಾಸ ದಾಖಲೆಯಾಯಿತು ಎಂದರು. 

 ದೇಶ ಸೇವೆ ಮಾಡಿದ ಮಾಜಿ ಕ್ಯಾಪ್ಟನ್ ಶಾಂತಯ್ಯ ಸ್ವಾಮಿ ಸಂದಿಮಠ್, ರೇವಣಸಿದ್ದಪ್ಪ ಜೀವಣಗಿ ಅವರ ನೇತೃತ್ವದಲ್ಲಿ ಪುರಾಣ ಪ್ರವಚನಕಾರರಾದ ವೇ.ಮೂ. ವೀರಯ್ಯಶಾಸ್ತ್ರೀಯವರ ಸಾನಿಧ್ಯದಲ್ಲಿ ಕಲಾವಿದರಾದ ಶಿವಶಂಕರ ಹಿರೇಮಠ, ಅಡಿವೇಶಕುಮಾರ ಹಾಗೂ ಸೊಸೈಟಿಯ ಪದಾಧಿಕಾರಿಗಳಾದ ಮಲ್ಲಿನಾಥ ದೇಶಮುಖ, ಸುಭಾಷ ಮಂಠಾಳೆ, ಗುರುಲಿಂಗಯ್ಯ ಮಠಪತಿ, ಉದಯಕುಮಾರ ಪಡಶೆಟ್ಟಿ, ನಾಗರಾಜ ಹೆಬ್ಬಾಳ, ಶಾಂತಯ್ಯ ಬೀದಿಮನಿ, ಬಸವರಾಜ ಸಜ್ಜನ, ಸಂಗಣಗೌಡ ಬಿರಾದಾರ, ವಿರೇಶ ನಾಗಶೆಟ್ಟಿ, ತರುಣಶೇಖರ ಬಿರಾದಾರ, ವಿನೋದ ಗೋರೆ, ಶ್ರೀಮಂತ ರಾಜಾಪೂರ, ಸಂಜು ತಂಬಾಕೆ, ಶಾಂತಯ್ಯ ಬೀದಿಮನಿ, ವಿರುಪಾಕ್ಷಪ್ಪ ಕಿರಣಗಿ, ವಿನೋದಕುಮಾರ ಜನೇವರಿ ಹೀಗೆ ಸುಮಾರು ೮೦ ಜನ ಭಕ್ತರ ಮಧ್ಯೆದಲ್ಲಿ ವಂದೆ ಮಾತರಂ ಹಾಡಿ ಸಂಭ್ರಮಾಚರಣೆ ಮಾಡಲಾಯಿತು. 

ಫೋಟೋ : ಬಬಲಾದ ಶ್ರೀಗಳ ಪುರಾಣ ವೇದಿಕೆಯಲ್ಲಿ ವಂದೇ ಮಾತರಂ ರಾಷ್ಟ್ರಗೀತೆಯ ೧೫೦ನೇ ವರ್ಷಾಚರಣೆ ಸಂಭ್ರಮಿಸಲಾಯಿತು. ಪುರಾಣಿಕರು, ಕಲಾವಿದರು, ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಪದಾಧಿಕಾರಿಗಳು ಭಕ್ತರು ಉಪಸ್ಥಿತರಿದ್ದರು.