ಮುಕ್ಕಣ್ಣ ಕರಿಗಾರರ ಮೂರು ಪುಸ್ತಕಗಳ ಲೋಕಾರ್ಪಣೆ
*ಮುಕ್ಕಣ್ಣ ಕರಿಗಾರರ ಮೂರು ಪುಸ್ತಕಗಳ ಲೋಕಾರ್ಪಣೆ.*
ದೇವದುರ್ಗ : ಭಾರತೀಯರ ಹೊಸವರ್ಷ 2026 ರ ಪರಾಭವ ಸಂವತ್ಸರದ ಯುಗಾದಿಯ ಪಾಡ್ಯದಂದು ಗಬ್ಬೂರಿನ ಮಹಾಶೈವ ಧರ್ಮಪೀಠದ ಕ್ಷೇತ್ರನಾಥ ವಿಶ್ವೇಶ್ವರ ಶಿವನ ಸನ್ನಿಧಿಯಲ್ಲಿ ಮುಕ್ಕಣ್ಣ ಕರಿಗಾರರ ಕನಕದಾಸರನ್ನು ಕುರಿತ ಮೂರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಶ್ರೀಕ್ಷೇತ್ರ ಕೈಲಾಸದಲ್ಲಿ 2026 ರ ಮಾರ್ಚ್ 19 ರಂದು ನಡೆದ ಸರಳ ಸಮಾರಂಭದಲ್ಲಿ ಮಾನ್ವಿ ತಾಲೂಕಿನ ಬಾಗಲವಾಡ ಗ್ರಾಮದ ಗಾಯತ್ರಿ ಶಕ್ತಿ ಪೀಠದ ಪೀಠಾಧ್ಯಕ್ಷರಾದ ಬಳ್ಳಾರಿ ಮುತ್ತ್ಯಾ ಎಂದು ಪ್ರಸಿದ್ಧರಾಗಿರುವ ಶಿವಯ್ಯ ಸ್ವಾಮಿಗಳು ಮುಕ್ಕಣ್ಣ ಕರಿಗಾರರ ಸಂತ ಕನಕದಾಸರ ಕುರಿತಾದ ಇತ್ತೀಚಿನ ಪುಸ್ತಕಗಳಾದ ' ಕನಕ ದರ್ಶನ' ಕವನ ಸಂಕಲನ,'ಲೋಕಬಂಧು ಕನಕದಾಸರು' ಮತ್ತು 'ಪುರಂದರದಾಸರ ಹೆಸರಿನಲ್ಲಿರುವ ಕನಕದಾಸರ ಕೀರ್ತನೆಗಳು' ಎನ್ನುವ ಮೂರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು.
ಇತ್ತೀಚೆಗೆ ಕರ್ನಾಟಕ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಹುದ್ದೆಗೆ ಆಯ್ಕೆಯಾದ ಮುಕ್ಕಣ್ಣ ಕರಿಗಾರ ಅವರ ಶಿಷ್ಯ ಷಣ್ಮುಖ ಹೂಗಾರ ಅವರನ್ನು ಈ ಸಂದರ್ಭದಲ್ಲಿ ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಲಾಯಿತು.
ಮಹಾಶೈವಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನ ದೇಸಾಯಿ,ಪ್ರಜಾವಾಣಿಯ ಮಾನ್ವಿ ತಾಲೂಕಿನ ಮತ್ತು ಇಂಡಿಯನ್ ರಾಯಚೂರು ಜಿಲ್ಲಾ ವರದಿಗಾರ ಬಸವರಾಜ ಭೋಗಾವತಿ,
ಶಹಾಪುರದ ಕಲಾನಿಕೇತನ ಟ್ರಸ್ಟಿನ ಅಧ್ಯಕ್ಷರಾದ ಕವಿ ಸಾಹಿತಿ ಬಸವರಾಜ ಸಿನ್ನೂರ, ಪ್ರಗತಿಪರ ಚಿಂತಕ ಶಿಕ್ಷಕ ಮಲ್ಲಿಕಾರ್ಜುನ ಬಾಗಲವಾಡ,ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಮರೇಶ ದೇಸಾಯಿ,
ಪತ್ರಕರ್ತ ಏಳುಬಾವೆಪ್ಪಗೌಡ,ಗೋಪಾಲ ಮಸೀದಪುರ,ಬಾಬುಗೌಡ ಯಾದವ್ ಸುಲ್ತಾನಪುರ, ಮೃತ್ಯುಂಜಯ ಯಾದವ,
ಸಿದ್ರಾಮಯ್ಯಸ್ವಾಮಿ ರಘುನಾಥನಹಳ್ಳಿ,ವಿರುಪಾಕ್ಷಿ ಗೌಡ ಹೊನ್ನಟಗಿ,ಬಸವಲಿಂಗ ಕರಿಗಾರ,
ದೇವರಾಜ ಕರಿಗಾರ,ರಂಗನಾಥ ಮಸೀದಪುರ,ವೆಂಕಟೇಶ ಮಸೀದಪುರ,ರಾಮಕೃಷ್ಣ ಯಾದವ,ತಿಪ್ಪಯ್ಯ ಭೋವಿ, ಶಿವಕುಮಾರ ವಸ್ತಾರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
