ನಾಲ್ಕು ಚುನಾವಣೆಗೆ ಮತ ಹಾಕಿದ ಶಂಭುಲಿಂಗ ಬಳಬಟ್ಟಿ

ನಾಲ್ಕು ಚುನಾವಣೆಗೆ ಮತ ಹಾಕಿದ ಶಂಭುಲಿಂಗ ಬಳಬಟ್ಟಿ

ನಾಲ್ಕು ಚುನಾವಣೆಗೆ ಮತ ಹಾಕಿದ ಶಂಭುಲಿಂಗ ಬಳಬಟ್ಟಿ

ಕಲಬುರಗಿ ನೂತನ ವಿದ್ಯಾಲಯ ಕನ್ಯಾ ಪ್ರೌಢಶಾಲೆ ಮತಗಟ್ಟೆಯಲ್ಲಿ ಮತಪ್ರಕ್ರಿಯೆ ವೀಕ್ಷಿಸಿ ಬೆಂಬಲಿಗರೊಂದಿಗೆ ವಿಜಯದ ಸಂಕೇತ ಬೀರಿದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ.

ರಾಜ್ಯದಲ್ಲಿ ನಡೆದ ಪದವೀಧರ, ಶಿಕ್ಷಕರ, ಸ್ಥಳೀಯ ಸಂಸ್ಥೆ ವಿಧಾನ ಪರಿಷತ್ ಮತ್ತು ಸಾಮಾನ್ಯ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ ದಾಖಲೆ ಬರೆದಿದ್ದಾರೆ. 

ಕಲಬುರಗಿ ಮಹಾನಗರ ಪಾಲಿಕೆ ವಾರ್ಡ್ ೩೬ರ ಸದಸ್ಯರಾಗಿರುವ ಡಾ.ಶಂಭುಲಿಂಗ ಪಾಟೀಲ ಬಳಬಟ್ಟಿ, ಪಿಡಿಎ ಕಾಲೇಜಿನಲ್ಲಿ ಹೂಮಾನಿಟಿ ಮತ್ತು ಸೋಷಿಯಲ್ ಸೈನ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ಶನಿವಾರ ಹಕ್ಕು ಚಲಾಯಿಸಿದರು. ಪಿಎಚ್.ಡಿ. ಪಡೆದಿದ್ದು, ವಿಧಾನ ಪರಿಷತ್ ಪದವೀಧರರ ಕ್ಷೇತ್ರದ ಚುನಾವಣೆಯಲ್ಲೂ ಮತ ಚಲಾಯಿಸಿದ್ದಾರೆ. ಮಹಾನಗರ ಪಾಲಿಕೆ ಸದಸ್ಯರಾಗಿದ್ದರಿಂದ ಸ್ಥಳೀಯ ಸಂಸ್ಥೆ ಕ್ಷೇತ್ರದ ಚುನಾವಣೆಯಲ್ಲೂ ಮತ ಚಲಾಯಿಸಿದ್ದರು. ಇನ್ನು ಸಾರ್ವತ್ರಿಕ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲೂ ಮತ ಚಲಾಯಿಸುತ್ತಿರುವುದು ವಿಶೇಷ.