28 ರಂದು ಗುರುಪೂರ್ಣಿಮೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ.

28 ರಂದು ಗುರುಪೂರ್ಣಿಮೆ ಹಾಗೂ ಪ್ರಶಸ್ತಿ ಪ್ರದಾನ  ಸಮಾರಂಭ.

28 ರಂದು ಗುರುಪೂರ್ಣಿಮೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ.

ದೇವದುರ್ಗ : ತಾಲೂಕಿನ ಗಬ್ಬೂರದ ಮಹಾಶೈವ ಧರ್ಮಪೀಠದ ವತಿಯಿಂದ ಇದೇ 28 ರಂದು ಬೆಳಗ್ಗೆ 10 ಗಂಟೆಗೆ ಮಹಾತಪಸ್ವಿ ಶ್ರೀ ಕುಮಾರ ಸ್ವಾಮಿಗಳವರ 117 ನೇ ಹುಟ್ಟುಹಬ್ಬದ ಅಂಗವಾಗಿ ಮಹಾಶೈವ ಗುರುಪೂರ್ಣಿಮೆ ಹಾಗೂ ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪೀಠಾಧ್ಯಕ್ಷ ಮುಕ್ಕಣ್ಣ ಕರಿಗಾರ ಪ್ರಕಟಣೆಗೆ ತಿಳಿಸಿದ್ದಾರೆ.

ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮತ್ತು ಖ್ಯಾತ ಸಾಹಿತಿಗಳಾದ ಡಾ.ಸಿದ್ದರಾಮ ಹೊನಕಲ್,ಕೊಪ್ಪಳದ ಜಿಲ್ಲಾ ನಿವೃತ್ತ ಶಿಕ್ಷಣಾಧಿಕಾರಿಗಳಾದ ಎಚ್.ಎಚ್.ಮೇಟಿ, ವಿಜಯಪುರದ ಪ್ರಗತಿಪರ ಚಿಂತಕರಾದ ಮಲ್ಲಿಕಾರ್ಜುನ ಶೆಂಡಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಹಿರಿಯ ಪತ್ರಕರ್ತರಾದ ಬಸವರಾಜ ಭೋಗಾವತಿ,ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಡಾ.ಎನ್. ಹೆಚ್.ಪೂಜಾರಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸುವುರು.

ಈ ಸಂದರ್ಭದಲ್ಲಿ ನಾಡಿನ ಸಾಧಕರು ಹಾಗೂ ಕರ್ನಾಟಕ ಸಂಗೀತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ, ಪ್ರೋ.ಮಲ್ಲೆಪುರಂ ಜಿ.ವೆಂಕಟೇಶ್ ಅವರಿಗೆ ಮಹಾ ತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿ,ಹಿರಿಯ ಪತ್ರಕರ್ತರು ಹಾಗೂ ಪ್ರಜಾ ಪ್ರಸಿದ್ಧಿ ಪತ್ರಿಕೆಯ ಉಪಸಂಪಾಧಕರಾದ

ರಘುನಾಥರೆಡ್ಡಿ ಮನ್ಸಲಾಪುರ ಅವರಿಗೆ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಪತ್ರಿಕಾಭೂಷಣ ಪ್ರಶಸ್ತಿ,ಹೆಸರಾಂತ ಕಲಾವಿದ ಗಮಕ ಕಲೆಯನ್ನು ಉಸಿರಾಗಿಸಿಕೊಂಡಿರುವ,ಖಾಸಿಂಸಾಬ್ ಮಲ್ಲಿಗೆಮಡುವು ಅವರಿಗೆ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸೇವಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಸದಸ್ಯ ಬಸವರಾಜ ಶಿಣ್ಣೂರ ತಿಳಿಸಿದ್ದಾರೆ.