ನಮ್ಮ ಕರ್ನಾಟಕ ಸೇನೆ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ
ನಮ್ಮ ಕರ್ನಾಟಕ ಸೇನೆ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ
ಕಲಬುರಗಿ: ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಬಸವರಾಜ ಎಂ. ಪಡಕೋಟೆ ಅವರ ಅಪ್ಪಣೆಯ ಮೇರೆಗೆ ಕಲಬುರಗಿಯಲ್ಲಿ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಪ್ರಥಮ ಮಾಸಿಕ ಸಭೆಯನ್ನು ಆಯೋಜಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಕಪುರ ವಹಿಸಿದ್ದರು. ಕಲ್ಯಾಣ ಕರ್ನಾಟಕ ಅಧ್ಯಕ್ಷ ಸುಧೀಂದ್ರ ಎಂ. ಈಜೇರಿ, ಕಲಬುರಗಿ ಜಿಲ್ಲಾ ಅಧ್ಯಕ್ಷ ರುಕ್ಮಯ್ಯ ಗುತ್ತೇದಾರ್, ರೈತ ಘಟಕದ ಅಧ್ಯಕ್ಷ ಅಶೋಕ ಗುತ್ತೇದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಮಯೂರ, ನಗರ ಘಟಕದ ಅಧ್ಯಕ್ಷ ಸುರೇಶ್ ಹೊಸಮನಿ, ಮಹಿಳಾ ಜಿಲ್ಲಾಧ್ಯಕ್ಷೆ ನಿರ್ಮಲ ತಳವಾರ, ಮಹಿಳಾ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ರಕ್ಷಿತಾ ಧಾಮಾ, ಸಂತೋಷ್ ಮುನಳಿ, ಗಂಗಾಧರ ವಿಶ್ವಕರ್ಮ, ಯಡ್ರಾಮಿ ತಾಲೂಕು ಗೌರವಾಧ್ಯಕ್ಷ ಅಪ್ಪು ಗೌಡ ನೀರಡ್ಗಿ, ಅಶೋಕ ಭೀಮಳ್ಳಿ, ವೆಂಕಟೇಶ್ ಗುತ್ತೇದಾರ್, ಬಸವರಾಜ್ ತಳವಾರ್, ಶ್ರೀಧರ ಕುಳಗೇರಿ ಹಾಗೂ ಸೇಡಂ ತಾಲೂಕು ಅಧ್ಯಕ್ಷ ವಿಶ್ವನಾಥ್ ಸೇರಿದಂತೆ ಜಿಲ್ಲೆಯ ಹಾಗೂ ವಿವಿಧ ತಾಲೂಕುಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಸಂಘಟನೆಯ ಬಲವರ್ಧನೆ, ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸಂಘಟನಾ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.

