ಶ್ರಾವಣಮಾಸ; ಧ್ಯಾನ, ಪೂಜೆಯಿಂದ ಪಾರಮಾರ್ಥಿಕ ಬದುಕಿನ ಸಾಕ್ಷಾತ್ಕಾರ

ಶ್ರಾವಣಮಾಸ; ಧ್ಯಾನ, ಪೂಜೆಯಿಂದ ಪಾರಮಾರ್ಥಿಕ ಬದುಕಿನ ಸಾಕ್ಷಾತ್ಕಾರ

ಶ್ರಾವಣಮಾಸ; ಧ್ಯಾನ, ಪೂಜೆಯಿಂದ ಪಾರಮಾರ್ಥಿಕ ಬದುಕಿನ ಸಾಕ್ಷಾತ್ಕಾರ

ಕಮಲನಗರ : ಸನತನ ಧರ್ಮದಲ್ಲಿ ಶ್ರಾವಣ ಂಆಸಕ್ಕೆ ಅತ್ಯಂತ ಪವಿತ್ರ ಹಾಗೂ ವಿಶೇಷವಾದ ಸ್ಥಾನವಿದೆ. ಶಿವನ ಆರಾಧನೆಗೆ ಮೀಸಲಾದ ಈ ಮಾಸವು ಕೇವಲ ಆಚರಣೆಗಳಿಗೆ ಮಾತ್ರ ಸೀಮಿತ ವಾಗಿರದೆ, ಮನುಷ್ಯನ ಆಧ್ಯಾತ್ಮಿಕ ಹಾಗೂ ಪಾರಮಾರ್ಥಿಕ ಬೆಳವಣಿಗೆಗೆ ಅತ್ಯುತ್ತಮ ಕಾಲವಾಗಿದೆ ಎಂದು ಶಿವಣಿ-ಹಲಬರ್ಗಾ ಮತ್ತು ಹೈದರಾಬಾದ್ ಮಠದ ಪೀಠಾಧಿಕಾರಿ ಹಾವಗಿಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕಮಲನಗರ ತಾಲೂಕು ಸಮೀಪದ ಡಿಗ್ಗಿ ಗ್ರಾಮದ ಮಡಿವಾಳೇಶ್ವರ ಮಂದಿರದಲ್ಲಿ ಬುಧರಾರ ರಾತ್ರಿ ಶ್ರಾವಣ ಮಾಸ ಪ್ರಯುಕ್ತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮವನ್ನು ಪೂಜ್ಯರು ಉದ್ಘಾಟಿಸಿ ಮಾತನಾಡಿದರು.

ಶ್ರಾವಣ ಮಾಸದಲ್ಲಿ ವಾತವರಣವು ತಂಪಾಗಿದ್ದು, ಮನಸ್ಸನ್ನು ಏಕಾಗ್ರತೆಯಲ್ಲಿಡಲು ಸೂಕ್ತವಾಗಿರುತ್ತದೆ. ಈ ಸಮಯದಲ್ಲಿ ಮಾಡುವ ಜಪ, ತಪ ಮತ್ತು ದ್ಯಾನಗಳು ಮನಸ್ಸಿನ ಚಂಚಲತೆಯನ್ನು ದೂರಗೊಳಿಸಿ, ಶಾಂತಿಯನ್ನು ನೀಡುತ್ತವೆ. ಶಿವನಿಗೆ ನೆರವೇರಿಸುವ ಅಭೀಷೇಕ ಮತ್ತು ಪೂಜೆಗಳು ಭಕ್ತನಲ್ಲಿರುವ ಅಹಂಕಾರವನ್ನು ಕಳೆದು, ಭಕ್ತಿಭಾವವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.

ಬಹಿರಂಗ ಪೂಜೆಯೊಮದಿಗೆ ಅಂತರಂಗದ ಧ್ಯಾನವು ಸಮ್ಮೀಳಿತಗೊಂಡಾಗ ಮಾತ್ರ ಪಾರಮಾರ್ಥಿಕ ಬದುಕು ಸಾಧ್ಯ. ಶ್ರಾವಣ ಮಾಸದ ಈ ಪವಿತ್ರ ದಿನಗಳಲ್ಲಿ ಭಕ್ತಿಪೂರ್ವಕ ಆರಾಧನೆ ಮಾಡುವ ಮೂಲಕ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ ಮತ್ತು ದೈವಿಕ ಅನುಗ್ರಹವನ್ನು ಪಡೆಯಬಹುದು ಎಂದರು.

ಪುಜಾರಿ ಚಂದ್ರಕಾಂತ ಸ್ವಾಮೀಜಿ, ಮಾದಯ್ಯ ಮಠಪತಿ, ಮಡಿವಾಳೇಶ್ವರ ದೇವಸ್ಥಾನ ಟ್ರಸ್ಟ್‍ನ ಅಧ್ಯಕ್ಷ ದೇವೇಂದ್ರ ಪಾಟೀಲ, ಕಾರ್ಯದರ್ಶಿ ಮಡಿವಾಳಪ್ಪ ಮುರ್ಕೆ, ಶಿವಕುಮಾರ ರಾಂಪುರೆ, ವಿಜಯಕುಮಾರ ಪಾಟೀಲ, ಸೂರ್ಯಕಾಂತ ಬಿರಾದಾರ, ಸೋಮನಾಥ ರಾಂಪುರೆ, ಮನ್ಮಥ ಹರಪಾಳೆ, ವೈಜನಾಥ ಕುಂಬಾರಗಿರೆ ಸೇರಿದಂತೆ ಟ್ರಸ್ಟನ ಸದಸ್ಯರು ಹಾಗೂ ಗ್ರಾಮದ ಗಣ್ಯರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.