ಕಮಲನಗರದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್ ವಿತರಣೆ
ಕಮಲನಗರ: ಭಾಗಿರಥಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್ ವಿತರಿಸಲಾಯಿತು.
ಕಮಲನಗರದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್ ವಿತರಣೆ
ಕಮಲನಗರ: ಸೋನಾಳ ವಿಜಯಕುಮಾರ ಬಿರಾದಾರರ 36ನೇ ಜನ್ಮದಿನೋತ್ಸವ ಅಂಗವಾಗಿ ಅಭಿಮಾನಿ ಬಳಗ ಸಹಯೋಗದಲ್ಲಿ ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಈಚೆಗೆ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್ ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು.
ಮುಖ್ಯಶಿಕ್ಷಕ ಎಂ.ಎಸ್.ಹಿರೇಮಠ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ಉತ್ತಮ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾತೃಸ್ವರೂಪ ಹೃದಯವುಳ್ಳ ಯುವಮುಖಂಡ ವಿಜಯಕುಮಾರ ಬಿರಾದಾರ ಅವರಂತೆ ಸತ್ಯ, ಪ್ರಾಮಾಣಿಕತೆ, ಗುರು-ಹಿರಿಯರಲ್ಲಿ ಗೌರವ ಹಾಗೂ ನೈತಿಕತೆಯನ್ನು ಬೆಳೆಸಿಕೊಂಡಾಗ ಮಾತ್ರ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂಗಮೇಶ ಬಿರಾದಾರ, ಪ್ರಧಾನ ಕಾರ್ಯದರ್ಶಿ ಅಂಬಿಕಾ ಸಂಗಮೇಶ ಬಿರಾದಾರ, ಆಕಾಶ ಸ್ವಾಮೀಜಿ, ಮಹಾದೇವ ಬಿರಾದಾರ, ಗಣಪತಿ ಬಿರಾದಾರ, ಪ್ರವೀಣ ಬಿರಾದಾರ, ಶಿವು, ಸಂಗೀತಾ ಕಾಂಬಳೆ, ರಾಣಿ ಡೋಣಗಾಪುರೆ ಸೇರಿದಂತೆ ಶಾಲೆ ಮಕ್ಕಳು ಇದ್ದರು.

