ಮಾರ್ಕಂಡೇಶ್ವರ ಮಹೋತ್ಸವ: ಭಕ್ತಿಭಾವದ ಸಂದೇಶ ನೀಡಿದ ಶ್ರೀ ಶಾಂತ ಸೋಮಲಿಂಗ ಶಿವಾಚಾರ್ಯರು
ಮಾರ್ಕಂಡೇಶ್ವರ ಮಹೋತ್ಸವ: ಭಕ್ತಿಭಾವದ ಸಂದೇಶ ನೀಡಿದ ಶ್ರೀ ಶಾಂತ ಸೋಮಲಿಂಗ ಶಿವಾಚಾರ್ಯರು
ಕಲಬುರಗಿ, ಆ.28: "ನಿಷ್ಕಲ್ಮಷ ಭಕ್ತಿ ಮತ್ತು ದೃಢಸಂಕಲ್ಪವಿದ್ದರೆ ಮೃತ್ಯುವನ್ನು ಕೂಡ ಗೆಲ್ಲಬಹುದು ಎಂಬುದಕ್ಕೆ ಶಿವಭಕ್ತ ಮಾರ್ಕಂಡೇಯನ ಚರಿತ್ರೆಯೇ ಸಾಕ್ಷಿ" ಎಂದು ಡಾ ಪೂಜ್ಯ ಶ್ರೀ ಶಾಂತ ಸೋಮಲಿಂಗ ಶಿವಾಚಾರ್ಯರು ನುಡಿದರು.
ನಗರದ ಓಂನಗರದ ಮಾರ್ಕೆಂಡೇಯ ದೇವಸ್ಥಾನದಲ್ಲಿ ಜಿಲ್ಲಾ ಪದ್ಮಸಾಲಿ ಸಮಾಜದ ವತಿಯಿಂದ ಬೆಳಗ್ಗೆ 11ರಿಂದ ಮಧ್ಯಾಹ್ನ 4 ಗಂಟೆಯವರೆಗೆ
ನೂಲು ಹುಣ್ಣಿಮೆ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ಶಿವನು ಮಾರ್ಕಂಡೇಯನನ್ನು ರಕ್ಷಿಸಲು ಪ್ರಕಟವಾದ ರೂಪವೇ 'ಮಾರ್ಕಂಡೇಶ್ವರ' ಅಥವಾ 'ಕಾಲಸಂಹಾರ ಮೂರ್ತಿ'. ಮಾರ್ಕಂಡೇಯನು ಜಪಿಸಿದ 'ಮಹಾ ಮೃತ್ಯುಂಜಯ ಮಂತ್ರ'ವು ಇಂದಿಗೂ ಭಕ್ತರ ರೋಗ ಮತ್ತು ಭಯವನ್ನು ದೂರಾಗಿಸುವ ಶಕ್ತಿ ಹೊಂದಿದೆ" ಎಂದು ಭಕ್ತರಿಗೆ ತಿಳಿಸಿದರು.
ಮಹಾಪೂಜೆಯ ಅಂಗವಾಗಿ ಬೆಳಗ್ಗೆ 7 ಗಂಟೆಗೆ ರುದ್ರಾಭಿಷೇಕ, ಪೂಜೆ ದೇವರಿಗೆ ಅಲಂಕಾರ ಮಾಡಲಾಯಿತು. ಬೆಳಗ್ಗೆ 9ರಿಂದ 11 ಗಂಟೆಯವರೆಗೆ ಭಕ್ತರಿಗೆ ಸನಾತನ ಹಿಂದೂ ಸಂಸ್ಕೃತಿ, ಕುರಿತು ಜಾಗೃತಿ ಮೂಡಿಸಿದರು. ಕೈಮಗ್ಗ ನೇಕಾರರು ತಯಾರಿಸಿದ ಸ್ವದೇಶಿ ನೂಲನ್ನು ಸಂಘ ಪರಿವಾರದ ಕಾರ್ಯಕರ್ತರು ವಿತರಿಸಿದರು .
ಸಪ್ತ ನೇಕಾರ ಸಂಘದ ಕಾರ್ಯದರ್ಶಿ ಚಂದ್ರಶೇಖರ ಮ್ಯಾಳಗಿ ಅವರ ಸಮಾಜ ಸೇವೆ ಮುಂದುವರಿಯಲಿ ಎಂದು ಆಶಿಸಿದರು.
ಪದ್ಮಸಾಲಿ ಸಮಾಜದ ಅಧ್ಯಕ್ಷ ನಾಗರಾಜ ಕುಸಮ ಅವರ ಶ್ರಮಕ್ಕೆ ಗುರುಗಳ ಕರುಣೆ ಸದಾ ಇರಲಿ ಎಂದು ಗುರುಗಳು ಹಾರೈಸಿದ
ಕಾರ್ಯಕ್ರಮದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜ್ಯ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ರಾಜ್ಯ ಒಕ್ಕಲಿಗ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಮೇಶ ಸಂಗಾ ದಂಪತಿಗೆ ದೇವಸ್ಥಾನದ ವತಿಯಿಂದ ಅದ್ಧೂರಿಯಾಗಿ ಸನ್ಮಾನಿಸಲಾಯಿತು.
ಜಿಲ್ಲಾ ನೇಕಾರರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿರುವದು, ಕಲ್ಯಾಣ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವುದು ಮತ್ತು ಸಂವಿಧಾನದ ಅನುಚ್ಛೇದ 171(1) ತಿದ್ದುಪಡಿಗಾಗಿ ಹೋರಾಟ ನಡೆಸುತ್ತಿರುವ ನ್ಯಾಯವಾದಿ ವಿನೋದಕುಮಾರ ಜೇನವೆರಿ
ಅವರನ್ನು ಗೌರವಿಸಿ ಸನ್ಮಾನಿಸಿ ಹೋರಾಟಕ್ಕೆ ಸದಾ ಬೆಂಬಲ ಸೂಚಿಸಿದ
ಕಾರ್ಯಕ್ರಮದಲ್ಲಿ ದೇವಸ್ಥಾನದ ಉಪಾಧ್ಯಕ್ಷ ವಿಜಯಕುಮಾರ ತ್ರಿವೇದಿ, ವಕೀಲ ರಾಜಗೋಪಾಲ ಭಂಡಾರಿ, ತೊಗಟವೀರ ಸಮಾಜದ ಅಧ್ಯಕ್ಷ ಶ್ರೀನಿವಾಸ ಬಲಪುರ,ಡಾ. ಬಸವರಾಜ ಚನ್ನಾ, ಕುರಹಿನಶೆಟ್ಟಿ ಸಮಾಜದ ಉಪಾಧ್ಯಕ್ಷ ಕುಶಾಲ ಯಡವಳ್ಳಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.
ನೂಲು ಹುಣ್ಣಿಮೆ ಪ್ರಯುಕ್ತ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿವಿಧ ಭಕ್ತಿ ಸೇವೆಗಳನ್ನು ಸಲ್ಲಿಸಿ ಮಾರ್ಕೆಂಡೇಯ ದೇವರ ದರ್ಶನ ಪಡೆದು ಪುನೀತರಾದರು.

