ಸಮಾಜದ ಧ್ವನಿಗಳಾಗಬೇಕು ಪತ್ರಕರ್ತರು: ಗುರು ಬಸವ ಪಟ್ಟದ್ದೇವರು
ಸಮಾಜದ ಧ್ವನಿಗಳಾಗಬೇಕು ಪತ್ರಕರ್ತರು: ಗುರು ಬಸವ ಪಟ್ಟದ್ದೇವರು
ಕಮಲನಗರ: ಸಮಾಜದಲ್ಲಿರುವ ಕೊಂದು ಕೊರತೆಗಳನ್ನು ಜನರ ಸಾಮಾನ್ಯರ ತುಡಿತಗಳನ್ನು ಪರಿವರ್ತಿಸುವ ಸುದ್ದಿಗಳು ಪ್ರಕಟಿಸಬೇಕು ಎಂದು ಭಾಲ್ಕಿ ಹಿರೇಮಠದ ಪೀಠಾಧಿಕಾರಿ ಗುರುಬಸವಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಪಟ್ಟದ್ದೇವರ ಪ್ರೌಢಶಾಲೆ ಸಭಾಂಗಣದಲ್ಲಿ ಶುಕ್ರವಾರ ಕಾರ್ಯ ನಿರತ ಪರ್ತಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಪತ್ರಿಕೆಗಳು ಜೀವನದ ಉದ್ದಗಲಕ್ಕೂ ವರದಿಗಳನ್ನು ಬಂಡವಾಳವನ್ನಾಗಿ ಇರಿಸಿಕೊಳ್ಳದೆ ಸಮಾಜದ ಕಟ್ಟಕಡೆ ವ್ಯಕ್ತಿಗೆ ನ್ಯಾಯ ಒದಗಿಸುವ ಸಮಾಜದ ಧ್ವನಿಗಳಾಗಬೇಕು ಅಂತಹ ಸುದ್ದಿಗಳನ್ನು ಪ್ರಕಟಿಸುವ ಜವಾಬ್ದಾರಿ ಪರ್ತಕರ್ತರದ್ದಾಗಿದೆ ಎಂದರು.
ಪ್ರತೀಕ ಚವ್ಹಾಣ ಮಾತನಾಡಿ, ಕಮಲನಗರ ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಾಣ ಮತ್ತು ಪರ್ತಕರ್ತರ ಆರೋಗ್ಯ ಇನ್ನಿತರ ಸೌಲಭ್ಯ ಒದಗಿಸಲು ಶಾಸಕ ಪ್ರಭು ಚವ್ಹಾಣ ಅವರು ವಿಶೇಷ ಆಸಕ್ತಿ ವಹಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಅವುಗಳು ಈಡೇರಿಸುವ ಭರವಸೆ ನೀಡಿದ್ದಾರೆ ಎಂದರು.ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ
ಮಾತನಾಡಿದರು. ಸಂಘದ ತಾಲೂಕಾಧ್ಯಕ್ಷ ಮನೋಜ ಕುಮಾರ ಹಿರೇಮಠ ಅಧ್ಯಕ್ಷತೆವಹಿಸಿದ್ದರು.
ವೇದಿಕೆಯಲ್ಲಿ ಸೋನಾಳ ಗ್ರಾಮದ ಯುವ ಉದ್ಯಮಿ ವಿಜಯಕುಮಾರ ಬಿರಾದಾರ, ತಹಸೀಲ್ದಾರ ಅಮೀತಕುಮಾರ ಕುಲಕುರ್ಣಿ, ತಾಪಂ ಇಓ ಹಣಮಂತರಾಯ ಕೌಟಗೆ, ಬಿಇಒ ವಾಘಂಬರ ಗಾಯಕವಾಡ, ಸಿಪಿಐ ಶ್ರೀಕಾಂತ ಅಲ್ಲಾಪುರ, ಸಿಎಚ್ಸಿ ಆಡಳಿತಾಧಿಕಾರಿ ಶ್ರೀಮಂತ ಮಡಿವಾಳ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುನೀಲ ಕಸ್ತೂರೆ, ರೈತ ಸಂಘದ ತಾಲೂಕಾಧ್ಯಕ್ಷ ಪ್ರವೀಣ ಕುಲಕರ್ಣಿ, ಸಂಘದ ಗೌರವಾಧ್ಯಕ್ಷ ಡಾ.ಎಸ್.ಎಸ್.ಮೈನಾಳೆ, ಜಿಲ್ಲಾ ಕಾರ್ಯದರ್ಶಿ ಸ್ವಾಮಿದಾಸ ನಾಗೂರೆ, ಸಂತೋಷ ಚಿಟ್ಟೆ ಮತ್ತು ಆಡಳಿತಾಧಿ ಕಾರಿ ಚನ್ನಬಸವ ಘಾಳೆ, ಮಹಾದೇವ ಬಿರಾದಾರ, ಮಹಾದು ಬರ್ಗೆ, ಭಾವುರಾವ ಹೇಡೆ, ಚಂದ್ರಕಾಂತ, ಪರಮೇಶ ರಾಂಪೂರೆ, ಸಂಗಮೇಶ್ವರ ಎಸ್ ಮುರ್ಕೆ, ಸಂಜೀವಕುಮಾರ, ಪ್ರವೀಣ, ಬಾಲಾಜಿ, ನಿತೀನ, ಮೊಯಿನ್, ಲಕ್ಷುಣ, ರವಿ ವಲ್ಲೇಪೂರೆ, ರಾಜಶೇಖರ ಅಜ್ಜ ಇದ್ದರು, ಡಾ.ಚನ್ನಬಸವಪಟ್ಟದ್ದೇವರ ಶಾಲಾ ಮಕ್ಕಳಿಂದ ಸ್ವಾಗತ ಗೀತೆ ನುಡಿಸಿದರು. ಪ್ರಶಾಂತ ಮಠಪತಿ ಸ್ವಾಗತಿಸಿದರು.ಮಹಾ ದೇವ ಮಡಿವಾಳ ನಿರೂಪಿಸಿದರು.
ದಾನಿ ವಿಜಯಕುಮಾರ ಬಿರಾದಾರ ಅವರು ಪರ್ತಕರ್ತರಿಗೆ ಸತ್ಕರಿಸಿದರು.

