ಕೆಂಪೇಗೌಡ ಜಯಂತಿ ಅರ್ಥಪೂರ್ಣ ಆಚರಿಸಿ ಪೂರ್ವಬಾವಿ ಸಭೆಯಲ್ಲಿ ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ ಸಲಹೆ
ಕೆಂಪೇಗೌಡ ಜಯಂತಿ ಅರ್ಥಪೂರ್ಣ ಆಚರಿಸಿ
ಪೂರ್ವಬಾವಿ ಸಭೆಯಲ್ಲಿ ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ ಸಲಹೆ
ನಾಗರಾಜ್ ದಂಡಾವತಿ ವರದಿ ಶಹಾಬಾದ: ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸಮಾಜದ ಎಲ್ಲ ಮುಖಂಡರು ಹಾಗೂ ಬಂಧುಗಳ ಸಹಕಾರದೊಂದಿಗೆ ಜೂ.27ರಂದು ಆಚರಿಸೋಣ ಎಂದು ಗ್ರೇಡ್-2 ತಹಶೀಲ್ದಾರ ಗುರುರಾಜ ಸಂಗಾವಿ ಯವರು ಹೇಳಿದರು.
ನಗರದ ತಾಲೂಕು ತಹಶೀಲ್ದಾರ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂದು ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಸಂಘಟನೆಗಳು ಹಾಗೂ ಸಮಾಜದ ಬಂದು ಗಳು ತಮ್ಮದೇ ಆದ ಜವಾಬ್ದಾರಿ ಹೊತ್ತುಕೊಂಡಿವೆ, ಈ ಕಾರ್ಯಕ್ರಮ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಲ್ಲ, ಕೆಂಪೇಗೌಡರು ಬೆಂಗಳೂರು ಸೇರಿದಂತೆ ರಾಜ್ಯದ ಆಸ್ತಿ, ಎಲ್ಲಾ ಧರ್ಮ, ಜಾತಿ, ಸಂಘಟನೆಯವರು ಸೇರಿ ಆಚರಿಸಲಾಗುವುದು ಎಂದು ತಿಳಿಸಿದರು. ಜಯಂತಿ
ಕುಡು ಒಕ್ಕಲಿಗ ಸಮಾಜದ ಜಿಲ್ಲಾ ಪ್ರಧಾನ
ಕಾರ್ಯದರ್ಶಿ ನಾಗಣ್ಣಗೌಡ ಪಾಟೀಲ ಮಾತನಾಡಿ, ಜೂ.27ರಂದು ಕೆಂಪೇಗೌಡರ ಭಾವಚಿತ್ರಕ್ಕೆ ಮಾಲಾರ್ಪಣೆ ಜೊತೆ ಮೆರವಣಿಗೆ, ವೇದಿಕೆ ಕಾರ್ಯಕ್ರಮವನ್ನು ಆಚರಿಸಿದರೆ ಅರ್ಥ ಬರುತ್ತದೆ, ಸರಕಾರದಿಂದ ಅನುದಾನ ಬಂದಿದ್ದರೆ ಕೆಂಪೇಗೌಡರ ಜಯಂತಿ ಅದ್ದೂರಿಯಾಗಿ ಆಚರಿಸೋಣ ಎಂದು ಮನವಿ ಮಾಡಿದರು. ಅಮೃತ ಗೌಡ ಗಟ್ಟದ, ಚಂದ್ರಕಾಂತ ಪಾಟೀಲ ಮತ್ತು ಜಗದೀಶ ಹುಲಿ ಹಾಗೂ ಕಂದಾಯ ಇಲಾಖೆಯ ಅಣವೀರಪ್ಪ ಹುಳಗೇರಿ, ವೀರಭದ್ರಪ್ಪ ಹಾಗೂ ಸಾಬಣ್ಣ ಸುಂಗುಲಕರ (ನಗರ ಸಭೆ), ಸುಷ್ಮಾ ಕಛೇರಿ (ಕೃಷಿ), ತ್ರಿಮೂರ್ತಿ (ಸಿಡಿಪಿಓ), ಮಹೇಶ ಜೋಗದನಕರ (ಜೆಸ್ಕಾಂ) ಉಪಸ್ಥಿತರಿದರು.
