ಗ್ರಾಮದ ಸಾಧಕರಿಗೆ ಯುವಕ ಸಂಘಗಳಿಂದ ಸನ್ಮಾನ

ಗ್ರಾಮದ ಸಾಧಕರಿಗೆ ಯುವಕ ಸಂಘಗಳಿಂದ ಸನ್ಮಾನ

ಗ್ರಾಮದ ಸಾಧಕರಿಗೆ ಯುವಕ ಸಂಘಗಳಿಂದ ಸನ್ಮಾನ

ಜಕ್ಕಲಿ (ಗದಗ): ಜಕ್ಕಲಿ ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಶ್ರೀ ಮಹಾಂತೇಶ್ವರ ಯುವಕ ಸಂಘದ ವತಿಯಿಂದ ಗ್ರಾಮದ ಪ್ರತಿಭಾವಂತ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಇತ್ತೀಚೆಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಯಿತು.

ಅಟ್ಯಾ-ಪಟ್ಯಾ ಕ್ರೀಡೆಯಲ್ಲಿ ಭಾರತ ಮಹಿಳಾ ತಂಡಕ್ಕೆ ಆಯ್ಕೆಯಾಗುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದ ಪ್ರೀತಿ ಸುಭಾಷ್ ಬುಳ್ಳಾ ಹಾಗೂ ಅಗ್ನಿವೀರ ಸೇನಾ ಪಡೆಗೆ ಆಯ್ಕೆಯಾದ ಪ್ರಜ್ವಲ್ ಕೋರಿ ಮತ್ತು ಶಂಕ್ರಪ್ಪ ಇಟಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುತ್ತು ಕಡಗದ ಹಾಗೂ ಪ್ರಕಾಶ ವಾಲಿ ಮಾತನಾಡಿ, ಯುವಕರು ಕ್ರೀಡೆ, ಶಿಕ್ಷಣ ಹಾಗೂ ರಾಷ್ಟ್ರಸೇವೆಯ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು.

ಶಿವಕುಮಾರ್ ಸ್ಟಾಂಪಿನ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಚನ್ನಬಸು ಕೊಪ್ಪದ, ಜಗದೀಶ್ ಪಲ್ಲೇದ, ಮಹಾಂತೇಶ್ ಇಟಗಿ, ನಾಗರಾಜ್ ಕಡಗದ, ಅಶೋಕ ವಾಲಿ, ಶರಣಪ್ಪ ಕೋರಿ, ಆದಮ್ ಸಾಬ್ ಬಾಲೆಸಾಬ್ ನವರ, ಮಹಾಂತೇಶ ಆನೆಹೊಸೂರು, ಸುಭಾಷ್ ಬುಳ್ಳಾ, ಗುರುಪಾದ ವಾಲಿ, ಮಂಜು ಪಲ್ಲೇದ, ಪ್ರವೀಣ್ ವಾಲಿ, ಆನಂದ್ ಕೊಪ್ಪದ, ನಾಗರಾಜ ಸೋಮನಕಟ್ಟಿ, ವಿವೇಕಾನಂದ ಗುಬ್ಬೇನಕೊಪ್ಪ, ಕಂಠಯ್ಯ ರೇಣುಕಮಠ, ಅರುಣಪ್ಪ ಬೂದಿಹಾಳ, ಶಿವು ಬಳಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ: ಹುಚ್ಚೀರಪ್ಪ ವೀರಪ್ಪ ಈಟಿ, ಕಲ್ಯಾಣ ಕಹಳೆ, ಗದಗ.