ಡಾ. ಫ. ಗು. ಹಳಕಟ್ಟಿ ಜಯಂತಿ-ಪುಣ್ಯಸ್ಮರಣೆ ಆಚರಣೆ: ಪೂರ್ವಭಾವಿ ಸಭೆ ಜೂ. 21ಕ್ಕೆ
ಡಾ. ಫ. ಗು. ಹಳಕಟ್ಟಿ ಜಯಂತಿ-ಪುಣ್ಯಸ್ಮರಣೆ ಆಚರಣೆ: ಪೂರ್ವಭಾವಿ ಸಭೆ ಜೂ. 21ಕ್ಕೆ
ಕಲಬುರಗಿ, ಜೂ. 20: ಡಾ. ಫ. ಗು. ಹಳಕಟ್ಟಿ ಅವರ ಪುಣ್ಯಸ್ಮರಣೆ ಹಾಗೂ ಜಯಂತಿ ಕಾರ್ಯಕ್ರಮಗಳ ಆಚರಣೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯನ್ನು ಜೂನ್ 21ರಂದು ಸಂಜೆ 5ರಿಂದ 7.30ರವರೆಗೆ ನಗರದ ಮಹಾಂತನಗರದ ಡಾ. ಟಿ.ಎ. ಪಾಟೀಲ ಆಸ್ಪತ್ರೆ ಸಮೀಪದ ಬಸವ ಮಂಟಪದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಕುರಿತು ಶರಣ/ವಚನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ಸಂಚಾಲಕ ಹಾಗೂ ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 19ರಂದು ಸಂಜೆ 6.30ಕ್ಕೆ ಇದೇ ಸ್ಥಳದಲ್ಲಿ ಸಭೆ ನಿಗದಿಯಾಗಿದ್ದರೂ, ವಿವಿಧ ಸಮಾಜಗಳ ಗಣ್ಯರು ಅನಿವಾರ್ಯ ಕಾರಣಗಳಿಂದ ಸಮಯಕ್ಕೆ ಆಗಮಿಸದಿರುವುದು ಹಾಗೂ ಶರಣರ ಸಂಖ್ಯೆ ಕಡಿಮೆಯಿದ್ದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದ್ದು, ಜೂನ್ 21ರಂದು ಮರುನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜೂನ್ 29ರಂದು ಡಾ. ಫ. ಗು. ಹಳಕಟ್ಟಿ ಅವರ ಪುಣ್ಯಸ್ಮರಣೋತ್ಸವ ಹಾಗೂ ನಂತರ ಜುಲೈ 2 ರಂದು ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ. ಅಲ್ಲದೆ, ಕಾರ್ಯಕ್ರಮಗಳ ಯಶಸ್ವಿ ಆಯೋಜನೆಗಾಗಿ ಸರ್ವಾನುಮತದ ಸಮಿತಿ ರಚನೆ ಮಾಡುವ ಉದ್ದೇಶವೂ ಇದೆ ಎಂದು ತಿಳಿಸಲಾಗಿದೆ.
ಶರಣ ಭಕ್ತರು, ವಚನ ಸಾಹಿತ್ಯ ಚಿಂತಕರು, ಶರಣ ಬಂಧುಗಳು, ವಚನಪರ ಅಭಿಮಾನಿಗಳು, ವಿವಿಧ ಸಮಾಜಗಳ ಮುಖಂಡರು ಹಾಗೂ ಶರಣ ತತ್ವದ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡುವ ಮೂಲಕ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸುವಂತೆ ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನ್ಯಾಯವಾದಿ ಜೆ.ಎಸ್. ವಿನೋದಕುಮಾರ (ಮೊ. 93438 79179) ಅವರನ್ನು ಸಂಪರ್ಕಿಸಬಹುದಾಗಿದೆ.
