ತಾಯಿ ಸೇವೆ ಅಪೂರ್ವ- ಡಾ.ಗವಿಸಿದ್ಧಪ್ಪ ಪಾಟೀಲ

ತಾಯಿ ಸೇವೆ ಅಪೂರ್ವ- ಡಾ.ಗವಿಸಿದ್ಧಪ್ಪ ಪಾಟೀಲ

ತಾಯಿ ಸೇವೆ ಅಪೂರ್ವ- ಡಾ.ಗವಿಸಿದ್ಧಪ್ಪ ಪಾಟೀಲ

ಕಲಬುರಗಿ:ಇವತ್ತಿನ ದಿನ ಮಾನಗಳು ಬದುಕಿನಲ್ಲಿ ತಲ್ಣಣ ಗೊಂಡಿದೆ.ಮಾನವೀಯತೆ, ಸಂಬಂಧಗಳು,ವಾತ್ಸಲ್ಯ, ತಾಯಿತನದ ಪ್ರಜ್ಞೆ ಮಾಸುವ ದಿನಗಳಲ್ಲಿ ತಾಯಿಯನ್ನು ಸ್ಮರಿಸಿ,ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ,ಸನ್ಮಾನ ಮಾಡುವ ಡಾ.ಕೆ.ಎಸ್.ಬಂಧು ಮತ್ತು ಮಹಾದೇವಿ ಬಂಧು ಅವರ ತಾಯಿ ಸೇವೆ ಅಪೂರ್ವ ಎಂದು ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ನುಡಿದರು.

ಚಂದನಕೇರಾದ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಸಿದ್ಧಾರ್ಥ ಶಿಕ್ಷಣ ಕಲ್ಯಾಣ ಟ್ರಸ್ಟ್ ಕಲಬುರಗಿ ಸಂಯುಕ್ತ ಆಶ್ರಯದಲ್ಲಿ ದಿ.ಶ್ರೀಮತಿ ನೀಲಮ್ಮ ಶಂಕರೆಪ್ಪ

ಬಂಧು ಸಿದ್ದೇಶ್ವರ ಅವರ 17 ನೇ ಪುಣ್ಯ ಸ್ಮರಣೆ ನಿಮಿತ್ಯ

ಗರಿಷ್ಠ ಅಂಕ ಪಡೆದ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಂಧು ದಂಪತಿಗಳು ಇಂದು ಐದು ಪಿಯುಸಿ ಮತ್ತು ಐದು ಎಸ್.ಎಸ್.ಎಲ್,ಸಿಯ ಕಾಲೇಜುಗಳಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗರಿಷ್ಠ ಅಂಕ ಪಡೆದವರಿಗೆ ಐದು ಸಾವಿರ ನಗದು,ಉಳಿದವರಿಗೆ ಪ್ರಮಾಣ ಪತ್ರ ನೀಡಿ ಗೌರ ವಿಸುವ ಕಾರ್ಯ ಶ್ಲಾಘನೀಯ. ಬಡತನ,ಅನಕ್ಷರಸ್ಥರ ಮಧ್ಯ ತಂದೆ ಡಪ್ಪಿನಾಟ,ನಾಟಕಮಾಡುವ ಕಲಾವಿದ, ತಾಯಿ ನೆರಳು ಹಿಡಿಯು ಕೆಲಸ ಮಾಡಿ ಓದಿ ನಮಗೆ ಈ ಕೈಯ ಕುಡುಗೋಲು,ಪಿಕಾಸು,ಮುಗಿದು; ಪೆನ್ನು ಹಿಡಿಯುವ ಕೆಲಸ ಮಾಡಿ ಎಂಬ ಮಾತೇ ಅವರ ಬದುಕಿಗೆ ಸ್ಫೂರ್ತಿಯಾಯಿತು.ಸಾಹಿತ್ಯ,ಸಮಾಜ,ಶಿಕ್ಷಣ,ಕೊಡುಗೆಮಾಡುತ್ತಾ ತಾಯಿ ಸೇವೆ ಮಾಡುತ್ತಿರುವುದು ಸ್ತುತ್ಯವೆಂದರು.

ಮುಖ್ಯ ಅತಿಥಿಯಾದ ಲೇಖಕ ಡಾ.ರಾಜಕುಮಾರ ಮಾಳಗೆ ಮಾತನಾಡಿ ಸಮಾಜ ಬದಲಾಗಿದೆ ವೃದ್ಧಾಶ್ರಮ ಹೆಚ್ಚಾಗಿದೆ.ತಾಯಿ ಜನ್ಮ ನೀಡಿದ ತಾಯಿಯನ್ನು ಮರೆಯ ಬಾರದೆಂದರು.ಶಿಕ್ಷಣ ಪ್ರೇಮಿ ರಾಮರಾವ್ ಪಾಟೀಲ ನಮಗೆ ನೂರು ಎಕರೆ ಹೊಲವಿದೆ ಸುಪ್ರೀಂ ಕೋರ್ಟ್ ತನಕ ಹೋರಾಟ ಮಾಡಿದ್ದು ಇಂತಹ ತಾಯಿ- ತಂದೆ ಸೇವೆಯ ನೆನಪು ನಾವು ಇಂತಹ ಬಂಧು ಮಾಡಿದ್ದು ಸೇವೆ ಮೆಚ್ಚಬೇಕೆಂದರು.ಹಿರಿಯ ಮುಖಂಡರಾದ ಕುಪೇಂದ್ರರಾ ವ್ ಫತ್ತೇಪೂರ,ವಕೀಲರಾದ ಪ್ರಕಾಶ ಬೋವಿ,ಮುಖ್ಯ ಗುರುಗಳಾದ ಬಸವಂತರೆಡ್ಡಿ,ಹುಮನಾಬಾದ ಶಿಕ್ಷಣ ತಜ್ಞ ಶಿವಶಂಕರ ತರನಳ್ಳಿ ಮಾತನಾಡಿದರು.

ಮುಖ್ಯ ಗುರುಗಳಾದ ಆದಾಮ ಪಠಾನ್,ಉಪನ್ಯಾಸಕರಾ

ದ ಜಗದೀಶ ಕೊಡದೂರ,ಸುನೀತಾ ಶೆಟ್ಟಿ, ಮೊದಲಾದವರಿ ದ್ದರು.

ಕುಮಾರಿ ಐಶ್ವರ್ಯ ಶಿವಶರಣಪ್ಪ ಅವರಿಗೆ ಐದು ಸಾವಿರ ನಗದು ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಹನ್ನೊಂದು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪುಸ್ತಕ ನೀಡಿ ಗೌರವಿಸಿದರು. ನಿವೃತ್ತ ಉಪನ್ಯಾಸಕ ಸಾಹಿತಿ ಡಾ.ಕೆ.ಎಸ್. ಬಂಧು ಮಾತನಾಡಿ ಕೇವಲ ಪೂಜೆ,ಪುನಸ್ಕಾರ ಮಾಡುವು ದಕ್ಕಿಂತ ವಿದ್ಯಾರ್ಥಿಗಳ ಮಧ್ಯ ಕಾರ್ಯಕ್ರಮ ಮಾಡಿದರೆ ಓದಲು ಪ್ರೊತ್ಸಾಹ ಸಿಗುವುದು ತಾಯಿಯ ಋಣ ತೀರಿಸ ಲಾರದ್ದು ಎಂದರು.

ಅಂಕಿತಾ ಸ್ವಾಗತ ಕೋರಿದರು ಶ್ರೀಮತಿ ಸಂಘಮಿತ್ರೆ ಪಟ್ನಾಯಕ ನಿರೂಪಿಸಿದರು ಪ್ರೀಯಾ ವಂದಿಸಿದರು.