ಪರಿಸರ ಸಂರಕ್ಷಣೆಗೆ ಎಲ್ಲರೂ ಪಣ ತೋಡಿ : ಗಂಜಗಿರಿ
ಪರಿಸರ ಸಂರಕ್ಷಣೆಗೆ ಎಲ್ಲರೂ ಪಣ ತೋಡಿ : ಗಂಜಗಿರಿ
ಚಿಂಚೋಳಿ: ಪರಿಸರ ರಕ್ಷಣೆಗೆ ಎಲ್ಲರು ಮುಂದಾಗಬೇಕು. ಪರಿಸರದ ಉಳಿವಿನೊಂದಿಗೆ ನಮ್ಮ ಉಳಿವು ಇದೆ. ಇದನ್ನು ಎಲ್ಲರು ಅರಿಯಬೇಕೆಂದು ಸಾಮಾಜಿಕ ಹೋರಾಟಗಾರ ಮಾರುತಿ ಗಂಜಗಿರಿ ಹೇಳಿದರು.
ಅವರು ಚಂದಾಪೂರದ ಹೆಲೆನ್ಸ್ ಪದವಿ ಪೂರ್ವ ಕಾಲೇಜು ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬರ ಜೀವನದ ದಿನಚರಿಯಲ್ಲಿ ಅಚ್ಚಳಿಯದೆ ಉಳಿಯಲು ಉತ್ತಮ ಆರೋಗ್ಯ ವೃದ್ಧಿಗೆ ಮತ್ತು ರಕ್ಷಣೆಗೆ ಪೂರಕವಾಗಿರುವ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸುವ ಹವ್ಯಾಸ ಬೆಳೆಸಿಕೊಳಬೇಕು.ಪರಿಸರ ಉಳಿಸಿದರೆ ಜೀವ ಸಂಕುಲಗಳು ಉಳಿಯಲಿದೆ. ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟು ಇತಿಹಾಸ ಪುಟಗಳಲ್ಲಿ ಅಜರಾಮರವಾಗಿ ಉಳಿದಿರುವ ಸಾಲುಮರದ ತಿಮ್ಮಕ್ಕನ ಇತಿಹಾಸವನ್ನು ಎಲ್ಲರೂ ಅರೆತು ನಡೆಯಬೇಕಾಗಿದೆ ಎಂದರು. ಅರಣ್ಯ ಇಲಾಖೆಯ ಡಿ. ವೈ.ಆರ್ ಎಫ್ ಒ ಮದರ ಸಾಬ್, ರುಕ್ಸನಾ ಮಲ್ಲಿನಾಥ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಫಾಧರ್ ಡಿಸೋಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಕು. ಅರ್ಪಿತಾ, ಸಿಸ್ಟರ್ ಮರಿಯಾ, ಮೋಹನಕುಮಾರ ಅವರು ಉಪಸ್ಥಿತರಿದ್ದರು. ಶಮೀನಾಬೇಗಂ ಕಾರ್ಯಕ್ರಮ ನಿರೂಪಿಸಿದರು. ರೇಣುಕಾ ಸ್ವಾಗತಿಸಿದರೇ, ಶೃತಿ ವಂದಿಸಿದರು.
