ಖ್ಯಾತ ಸಾಹಿತಿ ಡಾ.ಬಸವರಾಜ ಸಬರದರ ಎರಡು ಕೃತಿ ಲೋಕಾರ್ಪಣೆ
ಹಾರಕೂಡ ಶ್ರೀ ಮಠದಲ್ಲಿ ಜೂನ್ ೫ ರಂದು
ಖ್ಯಾತ ಸಾಹಿತಿ ಡಾ.ಬಸವರಾಜ ಸಬರದರ ಎರಡು ಕೃತಿ ಲೋಕಾರ್ಪಣೆ
ಬಸವಕಲ್ಯಾಣ: ಖ್ಯಾತ ಸಾಹಿತಿ, ವಿದ್ವಾಂಸರಾದ ಡಾ.ಬಸವರಾಜ ಸಬರದ ಸವರ ಬೀದರ ಜಿಲ್ಲೆಯ ತತ್ವಪದಕಾರರು ಮತ್ತು ತತ್ವಪದ ಸಾಹಿತ್ಯ ಮೀಮಾಂಸೆ ಎಂಬ ಎರಡು ಮಹತ್ವದ ಕೃತಿಗಳು ಜೂನ್ ೫ ರಂದು ಶುಕ್ರವಾರ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದಲ್ಲಿ
ಬೆಳಿಗ್ಗೆ ೧೧ ಗಂಟೆಗೆ ಶಾಸನ ವಿದ್ವಾಂಸರು ಮತ್ತು ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾದ ಪ್ರೊ. ಡಿ.ವಿ. ಪರಮಶಿವಮೂರ್ತಿಯವರು ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದು ಸಮಾರಂಭವನ್ನು ಉದ್ಘಾಟಿಸಿ ಸನ್ನಿಧಾನ ವನ್ನು ಹಸರಕೂಡ ಸುಕ್ಷೇತ್ರದ ಪೀಠಾಧಿಪತಿ ಡಾ.ಚನ್ನವೀರ ಶಿವಾಚಾರ್ಯರು ವಹಿಸುವರು.ಮಠದಿಂದ ಪ್ರಕಟವಾದ ಬೀದರ ಜಿಲ್ಲೆಯ ತತ್ವಪದಕಾರರು ಕೃತಿಯನ್ನು ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಅಮರೇಶ ಯತಗಲ್ಲ ಪರಿಚಯಿಸುವರು.ನಿವೃತ್ತ ಉಪ ಕಾರ್ಯದರ್ಶಿಗಳಾದ ಬಿ.ಕೆ.ಹಿರೇಮಠರ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ಸಾಹಿತಿ ದಂಪತಿಗಳಾದ ಡಾ.ಬಸವರಾಜ ಸಬರದ, ಡಾ.ವಿಜಯಶ್ರೀ ಸಬರದ, ನಿವೃತ್ತ ಮುಖ್ಯ ಗುರುಗಳಾದ ಪಿ.ಕೆ.ಹಿರೇಮಠ,ಶಿಕ್ಷಕರಾದ
ಮಲ್ಲಿನಾಥ ಹಿರೇಮಠ, ಹಂಪಿ ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಶಾಂತಪ್ಪ ಡಂಬಳ, ಗಣ್ಯರಾದ ಮೇಘರಾಜ ನಾಗರಾಳೆ,ಸಿದ್ರಾಮಪ್ಪ ಗುದಗೆ,
ಭಾಗವಹಿಸುವರು.ಶ್ರೀಮಠದ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಆಡುವರು. ಕಾರ್ತೀಕಯ್ಯ ಸ್ವಾಮಿ ಯಲದಗುಂಡಿ, ವಶರಣಪ್ಪ ಸುಂಟಾಳರಿಂದ ಪ್ರಾರ್ಥನೆ, ಸಾಹಿತಿ ಬಸವರಾಜ ಐನೋಳಿ ನಿರೂಪಿಸುವರು,ಲೇಖಕ ಡಾ.ರಾಜಕುಮಾರ ಮಾಳಗೆ ವಂದಿಸುವರು. ಸಾಹಿತ್ಯಾಸಕ್ತರು,ಸಾಹಿತಿ- ಕವಿ- ಕಲಾವಿದರು- ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮಠದ ಪ್ರಕಟಣೆಯಲ್ಲಿ ತಿಳಿಸಿದೆ.
