ನರೇಗಲ್ಲ ಪಟ್ಟಣದಲ್ಲಿ ಕಾನೂನು ಅರಿವು -ನೆರವು ಕಾರ್ಯಕ್ರಮ ನಡೆಯಿತು
ನರೇಗಲ್ಲ ಪಟ್ಟಣದಲ್ಲಿ ಕಾನೂನು ಅರಿವು -ನೆರವು ಕಾರ್ಯಕ್ರಮ ನಡೆಯಿತು
ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಶಿಕ್ಷಣ ಇಲಾಖೆ ಪೋಲಿಸ್ ಇಲಾಖೆ, ತಾಲೂಕು ಪಂಚಾಯತ್ ರೋಣ ಮತ್ತು ವಕೀಲರ ಸಂಘ, ರೋಣ ಇವರುಗಳ ಸಂಯುಕ್ತ ಆಶ್ರಯದಲ್ಲಿ, ಪೋಕೋ ಮತ್ತು ಬಾಲ್ಯ ವಿವಾಹ ಜಾಗೃತಿ" ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ
30/07/2026 : 09.30 ಘಂಟೆ
ಸ್ಥಳ: ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು, ನರೇಗಲ್ಲ ಪಟ್ಟಣದಲ್ಲಿ ನಡೆಯಿತು.
ಉದ್ಘಾಟಕರಾಗಿ .ಗೌರವಾನ್ವಿತ, ಶ್ರೀ,ಹುಲುಗಪ್ಪ, ಡಿ.
ಪ್ರಧಾನ ದಿವಾಣಿ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ. ರೋಣ ಮತ್ತು ಸದಸ್ಯ ಕಾರ್ಯದರ್ಶಿಗಳು, ತಾಲ್ಲೂಕು ಕಾನೂನು ಸೇವೆಗಳ ಸಮಿತಿಯವರು ವಹಿಸಿದ್ದರು. ಅಧ್ಯಕ್ಷತೆ ಶ್ರೀ, ಸಂಗಪ್ಪ ಗುಳಗನ್ನವರ, ಪ್ರಾಚಾರ್ಯರು ಪದವಿ ಪೂರ್ವ ಕಾಲೇಜು,ನರೇಗಲ್ ಇವರು ವಹಿಸಿದ್ದರು,
ಮುಖ್ಯ ಅತಿಥಿಗಳು: ೧) ಶ್ರೀ, ಎಸ್. ಬಿ. ನಿಡಗುಂದಿ,
ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ನರೇಗಲ್.
೨)ಶ್ರೀ, ಬಸವರಾಜ ಬಡಿಗೇರ,
೩)ಕುಮಾರಿ, ಐಶ್ವರ್ಯ ನಾಗರಾಳ, ಪಿ.ಎಸ್.ಐ. ನರೇಗಲ್
೪)ಎಲ್ಲಾ ವಕೀಲ ಬಾಂಧವರು, ನರೇಗಲ್ ವಹಿಸಿದ್ದರು.
೫)ಗೌರವ ಉಪನ್ಯಾಸಕರುಃ ಶ್ರೀ, ಪಿ. ಕೆ. ಉಡುಪಿ, ವಕೀಲರು, ರೋಣ ವಹಿಸಿದ್ದರು
ಈ ಸಂದರ್ಭದಲ್ಲಿ ರೋಣದ ಪ್ರದಾನ ದಿವಾಣಿ ನ್ಯಾಯಾದೀಶರು ಹಾಗೂ ಜೆ ಎಂಎಫ್ ಸಿ ಕೋರ್ಟಿನ ನ್ಯಾಯಮೂರ್ತಿಗಳಾದ ಹುಲಗಪ್ಪ ಡಿ. ಮಾತನಾಡಿ 18 ವರ್ಷಕ್ಕಿಂತ ಮುಂಚೆ ಮದುವೆ ಮಾಡುವುದು. ಶಿಸ್ತು ಕ್ರಮ ಉಲ್ಲಂಘಿಸಿದರೆ ಅಪರಾಧ ವಾಗುತ್ತದೆ. ಸುತ್ತಮುತ್ತ ಎಲ್ಲೇ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡುಬಂದರೂ ತಕ್ಷಣವೇ ಜಾಗೃತರಾಗಿ ಅದನ್ನು ತಡೆಯಲು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮುಂದೆ ಬರಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ಮದುವೆ ಮಾಡುವುದು ದೊಡ್ಡ ಅಪರಾಧ ಎಂದರು.
ನರೇಗಲ್ಲ ಠಾಣಾ ಪಿಎಸ್‌ಐ ಐಶ್ವರ್ಯ ನಾಗರಾಳ ಮಾತನಾಡಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಹೆಣ್ಣು ಮಕ್ಕಳ ಸುರಕ್ಷತೆ ಸಮಾಜದ ಪ್ರತಿಯೊಬ್ಬರ ಹೊಣೆ.
ಶೋಷಣೆ ಹಾಗೂ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದೇ ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಮೊದಲ ಹೆಜ್ಜೆ. ಹೀಗಾಗಿ ಮಕ್ಕಳ ರಕ್ಷಣೆಗೆ ಸರಕಾರ ಕಠಿಣ ಕಾನೂನು ರಚಿಸಲಾಗಿದ್ದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2012ರಲ್ಲಿ ಪೋಕೋ ಕಾಯ್ದೆಯನ್ನು ಜಾರಿಗೆ ತಂದಿದೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೂ ಈ ಕಾಯ್ದೆಯಡಿ ಸಂಪೂರ್ಣ ರಕ್ಷಣೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ. ಲೈಂಗಿಕ ದೌರ್ಜನ್ಯದ ಘಟನೆಗಳು ನಡೆದಾಗ ಭಯಪಡದೆ. ತಕ್ಷಣ ಕಾನೂನಿನ ನೆರವು ಪಡೆಯಲು ವಿದ್ಯಾರ್ಥಿನಿಯರಿಗೆ ಅವಕಾಶವಿದ್ದು ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ಅವರು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು.
ಈ ಒಂದು ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಆರ್ ಎಸ್ ನರೇಗಲ್ಲ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಆನಂದರಾವ್ ಕುಲಕರ್ಣಿ, ವ ಸರಕಾರಿ ಪ ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಸಂಗಪ್ಪ ಗುಳಗಣ್ಣವರ, ಪ್ರೌಢಶಾಲಾ ಮುಖ್ಯ ಶಿಕ್ಷಕ ಎಸ್ ಬಿ ನಿಡಗುಂದಿ ಸೇರಿದಂತೆ ನರೇಗಲ್ಲನ ಹಲವಾರು ನ್ಯಾಯವಾದಿಗಳು. ಶಾಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

