ವಿಶ್ವಗುರು ಬಸವಣ್ಣ ಜಯಂತಿ ಅಂಗವಾಗಿ ಮೇ 17ರಂದು ‘ಶರಣರ ಮಹಾಸಂಗಮ’
ವಿಶ್ವಗುರು ಬಸವಣ್ಣ ಜಯಂತಿ ಅಂಗವಾಗಿ ಮೇ 17ರಂದು ‘ಶರಣರ ಮಹಾಸಂಗಮ’
ಕಲಬುರಗಿಯ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಭವ್ಯ ಕಾರ್ಯಕ್ರಮ
ಕಲಬುರಗಿ: ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ 893ನೇ ಜಯಂತ್ಯೋತ್ಸವ ಅಂಗವಾಗಿ ಪರಿವರ್ತನಾ ಪ್ರತಿಷ್ಠಾನ ಹಾಗೂ ವಿಶ್ವ ಸಾಮರಸ್ಯ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿಸೌಹಾರ್ದಯುತ ಮತ್ತು ಸಮಸಮಾಜ ನಿರ್ಮಿಸುವ ಉದ್ದೇಶದಿಂದ “ಶರಣರ ಮಹಾಸಂಗಮ” ಕಾರ್ಯಕ್ರಮವನ್ನು ಮೇ 17, 2026ರಂದು ಬೆಳಿಗ್ಗೆ 10 ಗಂಟೆಗೆ ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಹಾಮನೆ ಟ್ರಸ್ಟ್ ಬಸವಕಲ್ಯಾಣದ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕೃತರಾದ ಪೂಜ್ಯ ಡಾ. ಸಿದ್ಧರಾಮ ಬೆಲ್ದಾಳ ಶರಣರು ವಹಿಸಲಿದ್ದಾರೆ. ಸಾನಿಧ್ಯವನ್ನು ಅಲ್ಲಮ ಪ್ರಭು ಸಂಸ್ಥಾನಮಠದ ಪೂಜ್ಯ ಶ್ರೀ ಮಲ್ಲಣ್ಣಪ್ಪ ಮಹಾಸ್ವಾಮಿಗಳುತೋನಸ್ಸನಳ್ಳಿ , ಗುರುಮಾತಾ ನಂದಾತಾಯಿ , ಶ್ರೀ ಗುರದೇವ ತಪೋವನ ಬಿರುವಳ್ಳಿ, ಪೂಜ್ಯ ಶ್ರೀ ಡಾ. ಗಂಗಾಂಬಿಕಾ ಅಕ್ಕ ಹರಳಯ್ಯನವರ ಗವಿ ಬಸವಕಲ್ಯಾಣ, ಜ್ಞಾನ ದಾಸೋಹಿ ಜ್ಞಾನೇಶ್ವರ ಮಹಾಸ್ವಾಮಿಗಳು ನಾಗರಾಳ, ಪರಮ ಪೂಜ್ಯ ಶ್ರೀ ಬಳಿರಾಮ ಮಹಾರಾಜರು, ಪರಮ ಪೂಜ್ಯ ಶ್ರೀ ಗುರುರಾಜೇಂದ್ರ ಶಿವಯೋಗಿಗಳು, ಶ್ರೀ ಬಸವ ಮಾಚಿದೇವ, ಶ್ರೀ ಹಜರತ್ ಸೈಯದ ಶಾಹಾ ಮುಸ್ತಾಫ್ ಖಾದ್ರಿ, ಶ್ರೀ ಮೊಹ್ಮದ ಮೌಲಾಲಿ ಮುತ್ತಾ ಹಾಗೂ ಪರಮ ಪೂಜ್ಯ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪರಮ ಪೂಜ್ಯ ಈಶ್ವರಾನಂದ ಪೂರಿ ಮಹಾಸ್ವಾಮಿಗಳು ಕಾಗಿನೆಲೆ ಕನಕಗುರೂಪಿಠ ಹೊಸದುರ್ಗ ಬೆಂಗಳೂರು ವಿಭಾಗ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಶ್ರೀ ಅರ್ಜುನ ಹತ್ತಿ ಅಧ್ಯಕ್ಷರು ಪರಿವರ್ತನಾ ಪ್ರತಿಷ್ಟಾನ ಇವರು ವಹಿಸುವರು.
ಮುಖ್ಯ ಅತಿಥಿಗಳಾಗಿ ಡಾ. ಫಾರೂಖ ಮಣೂರ, ಪ್ರೋ. ಇಂದಿರಾ ಚಕ್ರಸಾಲಿ, ಜಿ.ಬಿ. ಉಮೇಶ ಸಿ.ಪಿ.ಐ., ಜಗದೇವಪ್ಪ ಪಾಳಾ, ಹಣಮಂತ ಯಳಸಂಗಿ, ಬಾಲಾಜಿ ಘೋಡಕೆ, ಸೂರ್ಯಕಾಂತ ನಿಂಬಾಳಕರ, ಕುಮಾರಿ ಯಶೋಧ ಕಟಕೆ ಪಿ.ಎಸ್.ಐ., ಸುಭಾಶ ಲೋಕನಾಯಕ, ದೇವಯ್ಯ ಗುತ್ತೇದಾರ, ಡಾ. ಎಂ.ಟಿ. ಕಟ್ಟಿಮನಿ, ಮಲ್ಲಿಕಾರ್ಜುನ ಡಿ. ಭಜಂತ್ರಿ, ಮಲ್ಲಿಕಾರ್ಜುನ ಮಡಿವಾಳ, ದೇವಿದಾಸ ಹಾಗೂ ಗೋಪಾಲ ಎಂ.ಪಿ. ಭಾಗವಹಿಸಲಿದ್ದಾರೆ.
ವಿಶೇಷ ಉಪನ್ಯಾಸವನ್ನು ದಾವಣಗೆರೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ವಿಶ್ವನಾಥ ಪಿ. ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಡಾ.ಅಮರಪ್ಪ ಜಂಪಾ, ಯಲಗೊಂಡ ಹಿರೇ ಕುರಬರ್, ಸುಭಾಷ ಎಲ್. ಶಿಕ್ಷಣಕರ್, ಡಾ.ಅಂಬಾದಾಸ ಕಾಂಬಳೆ ಕೆ.ಎ.ಎಸ್., ಸುಖಾನಂದ ಸಿಂಗೆ, ಡಾ. ವೈ.ಎಸ್. ಇಂಗಳೆ, ಪ್ರೋ. ಚಂದ್ರಕಾಂತ ಜಮಾದಾರ, ರವಿಕುಮಾರ ನೀಲೂರೆ ಹಾಗೂ ಅಮರೇಶ ಬಿಲ್ಲವ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.
ಇದಲ್ಲದೆ ಡಾ. ರವಿ ಕಾಂತಿ ಖ್ಯಾತನಾಳ, ಪ್ರೋ. ಪ್ರಹ್ಲಾದ ಚೆಂಗಟ, ಡಾ. ಸರದಾರ ರಾಯಪ್ಪ, ಡಾ. ಭಗವಂತಪ್ಪ ಬುಳ್ಳಾ, ಡಾ. ವಸಂತ ನಾತಿ, ಮಹೇಶ ಹೂಗಾರ, ಶಿವಶರಣಪ್ಪ ಮುಳೆಗಾಂವ, ಡಿ.ಬಿ.ಪಾಟೀಲ್, ರಾಜೇಶ ನೀಲಳ್ಳಿ, ಡಾ. ಅಶೋಕ ದೊಡ್ಡಮನಿ, ಡಾ. ಸೈಯ್ಯದ ಇಕ್ಟಾಲ್, ಪ್ರೋ. ಈಶ್ವರ ತಳವಾರ, ರಾಮಚಂದ್ರ ಘೋಡಕೆ, ಡಾ.ಮಲ್ಲಿಕಾರ್ಜುನ ಮುಕ್ಕಾ, ಮಲ್ಲಣ್ಣ ಮಡಿವಾಳ, ವಿಜಯಕುಮಾರ ಕಾಂಬಳೆ, ಬಾಬುರಾವ ಜಮಾದಾರ, ನಿಲಕಂಠ ಜಮಾದಾರ, ಬಸವರಾಜ ಸಪ್ಪನಗೋಳ, ಧರ್ಮರಾಜ ಜವಳಿ, ಪ್ರಭಾಕರ ಸಲಗರೆ, ವಿಜಯಕುಮಾರ ಗುತ್ತೇದಾರ, ಡಾ. ಭೀಮರಾವ ಅರಕೇರಿ ಸೇರಿದಂತೆ ಅನೇಕ ಗಣ್ಯರು ವಿಶೇಷ ಅಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸ್ವಾಗತವನ್ನು ಚಂದ್ರಕಾಂತ ತಳವಾರ, ಪ್ರಾಸ್ತಾವಿಕವನ್ನು ಅರ್ಜುನ ಹತ್ತಿ, ನಿರೂಪಣೆಯನ್ನು ಡಾ. ವಾಯ್.ಎಸ್. ವಗ್ಗಿ ಹಾಗೂ ಸಂತೋಷಕುಮಾರ ಆರ್. ಕಟಕೆ ನಡೆಸಲಿದ್ದಾರೆ. ಪ್ರಶಸ್ತಿ ವಿತರಣೆಯನ್ನು ರಾಜೇಂದ್ರ ಕೋರಬ ನೆರವೇರಿಸಲಿದ್ದು, ವಂದನಾರ್ಪಣೆಯನ್ನು ಡಾ. ವಾಯ್.ಎಸ್. ಇಂಗಳೆ ಸಲ್ಲಿಸಲಿದ್ದಾರೆ. ಪರಿವರ್ತನಾ ಕಲಾ ತಂಡದಿಂದ ಪರಿವರ್ತನಾ ಗೀತೆ ಹಾಗೂ ರಾಜಶೇಖರ ಕಡಗನ್ ಅವರಿಂದ ವಚನಗಾಯನ ನಡೆಯಲಿದೆ.
“ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯಾ” ಎಂಬ ಸಂದೇಶದೊಂದಿಗೆ ನಡೆಯಲಿರುವ ಈ ಮಹಾಸಂಗಮಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರಲಾಗಿದೆ. ಎಂದು ಪರಿವರ್ತನಾ ಪ್ರತಿಷ್ಠಾನ ಹಾಗೂ ವಿಶ್ವ ಸಾಮರಸ್ಯ ವೇದಿಕೆ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
