ಸ್ಪರ್ಧಾತ್ಮಕ ಪರೀಕ್ಷೆಗೆ ನಿರಂತರ ಪ್ರಯತ್ನ ಅಗತ್ಯ: ಅಂಬರಾಯ ಮಡ್ಡೆ
ಸ್ಪರ್ಧಾತ್ಮಕ ಪರೀಕ್ಷೆಗೆ ನಿರಂತರ ಪ್ರಯತ್ನ ಅಗತ್ಯ: ಅಂಬರಾಯ ಮಡ್ಡೆ
ಕಲಬುರಗಿ: ಜೀವನದಲ್ಲಿ ಯಶಸ್ಸು ಸಾಧಿಸಲು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಗಾಗಿ ನಿರಂತರ ಪ್ರಯತ್ನ ಬಹಳ ಮುಖ್ಯ ಎಂದು ಶಿಕ್ಷಕ ಹಾಗೂ ಸಾಹಿತಿ ಅಂಬರಾಯ ಮಡ್ಡೆ ಹೇಳಿದರು.
ನಗರದ ಎಂ.ಎನ್. ದೇಸಾಯಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ “ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತಯಾರಿ” ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಷಯ ಸಂಗ್ರಹ, ತಾಳ್ಮೆ, ಆತ್ಮವಿಶ್ವಾಸ, ನಿರಂತರ ಪರಿಶ್ರಮ ಹಾಗೂ ಧನಾತ್ಮಕ ಮನೋಭಾವ ವಿದ್ಯಾರ್ಥಿಗಳಲ್ಲಿ ರೂಢಿಯಾದಾಗ ಮಾತ್ರ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷ ಸಂದೀಪ್ ದೇಸಾಯಿ, ಕಾರ್ಯದರ್ಶಿ ಜಗನ್ನಾಥ ನಾಗೂರ ಸೇರಿದಂತೆ ಸಿಬ್ಬಂದಿ ವರ್ಗದವರಾದ ಮಂಜುನಾಥ್ ಬನ್ನೂರ್, ನಾಗರಾಜ್ ಪಟ್ಟಣಕರ, ಅಮರ್ ಹಾಗರಗಿ, ಶಿವಶರಣಪ್ಪ ಪೂಜಾರಿ, ಮುರುಗೇಶ್ ದಂಡೋತಿ, ರೇವಣಸಿದ್ದಪ್ಪ ಕುಂಬಾರ, ರಾಹುಲ್ ಕಕ್ಕೇರಿ, ಶ್ರೀದೇವಿ ಹಿರೇಮಠ, ಗುರುವಾಯಿ ವಾಡಿ, ಅಂಬಿಕಾ ಪಟ್ನೆ, ರಾಧಿಕಾ ಗುತ್ತೇದಾರ್, ರೇಷ್ಮಾ ರಾಥೋಡ್, ಡಾ. ನಾಗಮ್ಮ ಹೊಸಮನಿ, ಚೆನ್ನಮ್ಮ ಮೇಡಂ, ಜ್ಯೋತಿ ಹಂಗರಗಿ, ಶಿಲ್ಪಾ ಚೆಟ್ಟಿ, ಗೀತಾ ಇಂಗಿನ ಹಾಗೂ ಸಂತೋಷ್ ಲಸ್ಕರ್ ಉಪಸ್ಥಿತರಿದ್ದರು.
ನೂರಾರು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ಆತ್ಮವಿಶ್ವಾಸ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತವಾಗಿವೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿತು.

