ನರೇಗಲ್:‌ ಪದವಿ ಕೋರ್ಸುಗಳಿಗೆ ಪ್ರವೇಶ ಆರಂಭ ಭರದಿಂದ ಸಾಗಿದ ಬಿ.ಎ, ಬಿ.ಕಾಂ, ಬಿ.ಎಸ್.ಸಿ, ಬಿಸಿಎ ಪ್ರವೇಶಗಳು

ನರೇಗಲ್:‌ ಪದವಿ ಕೋರ್ಸುಗಳಿಗೆ ಪ್ರವೇಶ ಆರಂಭ  ಭರದಿಂದ ಸಾಗಿದ ಬಿ.ಎ, ಬಿ.ಕಾಂ, ಬಿ.ಎಸ್.ಸಿ, ಬಿಸಿಎ ಪ್ರವೇಶಗಳು

ನರೇಗಲ್:‌ ಪದವಿ ಕೋರ್ಸುಗಳಿಗೆ ಪ್ರವೇಶ ಆರಂಭ

ಭರದಿಂದ ಸಾಗಿದ ಬಿ.ಎ, ಬಿ.ಕಾಂ, ಬಿ.ಎಸ್.ಸಿ, ಬಿಸಿಎ ಪ್ರವೇಶಗಳು

ನರೇಗಲ್: ಪಟ್ಟಣದ‌ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪದವಿ ಪ್ರಥಮ ವರ್ಷದ ವಿವಿಧ ಕೋರ್ಸುಗಳಿಗೆ ಪ್ರವೇಶಗಳು ಆರಂಭಗೊಂಡಿವೆ ಎಂದು ಪ್ರಾಂಶುಪಾಲ ಎಸ್.‌ ಎಲ್.‌ ಗುಳೇದಗುಡ್ಡ ತಿಳಿಸಿದರು.

          ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿದರು. ಈ ವರ್ಷ ನಮ್ಮ ಸರ್ಕಾರಿ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಪದವಿ ಓದುತ್ತಿರುವ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್‌ ಸಂದರ್ಶನದ ಮೂಲಕ ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಇಬ್ಬರು ಬಿಸಿಎ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಹುದ್ದೆಗೆ ಆಯ್ಕೆಯಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ ಬಿ.ಎ, ಬಿ.ಕಾಂ, ಬಿ.ಸಿ.ಎ ಹಾಗೂ ಬಿ. ಎಸ್.ಸಿ ಕೋರ್ಸುಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ. ಪ್ರವೇಶಕ್ಕಾಗಿ ಯುಯುಸಿಎಂಎಸ್‌ ವೆಬ್‌ ಸೈಟ್‌ ಮೂಲಕ ಅನ್ಲೈನ್‌ ನಲ್ಲಿ ಸಲ್ಲಿಸಬಹುದು ಅಥವಾ ಅಗತ್ಯ ದಾಖಲೆಗಳೊಂದಿಗೆ ಕಾಲೇಜಿಗೆ ನೇರವಾಗಿ ಭೇಟಿಯಾಗುವ ಮೂಲಕ ಸಲ್ಲಿಸಬಹುದಾಗಿದೆ. ಪ್ರೊಫೇಸನಲ್‌ ಕೋರ್ಸ್‌ ಬಿ.ಸಿ.ಎ ಎಐಸಿಟಿ ದೆಹಲಿಯಿಂದ ಮಾನ್ಯತೆ ಪಡೆದಿದೆ ಆದ್ದರಿಂದ ಗ್ರಾಮೀಣ ಭಾಗದ ಮಕ್ಕಳು ಸರ್ಕಾರಿ ಕಾಲೇಜಿನ ಕೋರ್ಸುಗಳ ಸದುಪಯೋಗ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ 9449188352, 9480027974, 8296176753, 9008407311, 9164307257, 9535239103, ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು. 

          ಉತ್ತಮ ಕಟ್ಟಡ ಹಾಗೂ ಕ್ರೀಡಾಂಗಣ ವ್ಯವಸ್ಥೆ, ವಿಜ್ಞಾನ ಮತ್ತು ಕಂಪ್ಯೂಟರ್‌ ಪ್ರಯೋಗಾಲಯಗಳು, 10 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ, ಡಿಜಿಟಲ್‌ ಗ್ರಂಥಾಲಯ, ನುರಿತ ಹಾಗೂ ಸಂಪನ್ಮೂಲ ಸಿಬ್ಬಂದಿಗಳನ್ನು ಹೊಂದಿರುವ ಸರ್ಕಾರಿ ಮಹಾವಿದ್ಯಾಲವಾಗಿದೆ ಎಂದು ತಿಳಿಸಿದರು.

         ಸರ್ಕಾರಿ ಯೋಜನೆಗಳ ಸೌಲಭ್ಯಗಳು, ಶಿಷ್ಯವೇತನ, ಕ್ರೀಡಾ ಪ್ರೋತ್ಸಾಹ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗೂ ಪ್ರೋತ್ಸಾಹ ನೀಡಲಾಗುತ್ತದೆ. ಎನ್. ಎಸ್. ಎಸ್‌, ರೋವರ್ಸ್, ರೇಂಜರ್ಸ್, ರೆಡ್ ಕ್ರಾಸ್ ಯೂನಿಟ್ ಮೂಲಕ ವಿವಿಧ ಚಟುವಟಿಕೆಗಳು, ಸಂಪನ್ಮೂಲಗಳ ವ್ಯಕ್ತಿಗಳಿಂದ ತರಬೇತಿಗಳು, ಪರ್ಸನಾಲಟಿ ಡೆವಲಪ್ಮೆಂಟ್, ಇಂಟರ್‌ವಿವ್ ಡೆವಲಪ್ಮೆಂಟ್ ಸೇರಿದಂತೆ ಎಲ್ಲಾ ರೀತಿಯ ತರಬೇತಿ ಹಾಗೂ ಸೌಲಭ್ಯಗಳು ನಮ್ಮ ಸರ್ಕಾರಿ ಮಹಾವಿದ್ಯಾಲಯದಲ್ಲಿ ಲಭ್ಯವಿದೆ ಎಂದು ತಿಳಿಸಿದರು.

           ಗುಣಮಟ್ಟದ ಶಿಕ್ಷಣ ಜೊತೆಗೆ ಸ್ಪರ್ಧಾತ್ಮ ತಯಾರಿಗೂ ಮಹತ್ವ ನೀಡಲಾಗುತ್ತದೆ, ಕೌಶಲ್ಯಾಭಿವೃದ್ದಿ, ಸಾಮಾಜಿಕ ಕಳಕಳಿ, ಮಕ್ಕಳ ಸರ್ವಾಂಗೀಣ ಅಭಿವೃದ್ದಿ ಗುರಿಯನ್ನು ಇಟ್ಟುಕೊಂಡು ಪಾಲಕರ, ಉಪನ್ಯಾಸಕರ ಸಹಕಾರದಲ್ಲಿ ಸಾಗುತ್ತಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಕೋರ್ಸಿಗೆ ಪ್ರವೇಶಗಳು ಪ್ರತಿವರ್ಷದಂತೆ ಈ ಬಾರಿಯೂ ಭರದಿಂದ ಸಾಗಿದೆ. ಆದ್ದರಿಂದ ಪಾಲಕರು ಹಾಗೂ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿನ ಕೋರ್ಸುಗಳ ಸದುಪಯೋಗ ಪಡೆಯಬೇಕು ಎಂದು ಪ್ರಾಂಶುಪಾಲ ಎಸ್.‌ ಎಲ್.‌ ಗುಳೇದಗುಡ್ಡ ತಿಳಿಸಿದರು

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ