ಧರ್ಮಸ್ಥಳ ಗ್ರಾಮಾಭಿವೃದ್ಧಿಯ ನೂತನ ಯೋಜನಾಧಿಕಾರಿಗಳಿಗೆ ಅಭಿನಂದನೆ
ಧರ್ಮಸ್ಥಳ ಗ್ರಾಮಾಭಿವೃದ್ಧಿಯ ನೂತನ ಯೋಜನಾಧಿಕಾರಿಗಳಿಗೆ ಅಭಿನಂದನೆ
ಕಲಬುರುಗಿ. : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಮಲಾಪುರದ ನೂತನ ಯೋಜನಾಧಿಕಾರಿ ರಜಬ್ ಅಲಿ ಹಾಗೂ ಕಲಬುರಗಿ ಯೋಜನಾಧಿಕಾರಿ ಸಂಗಪ್ಪ ಸಂಗಳದ ಅವರಿಗೆ ಸ್ವಾಗತ ಕೋರಿ ಅಭಿನಂದನೆ ವ್ಯಕ್ತಪಡಿಸಲಾಯಿತು.
ಕಲಬುರಗಿಯ ಆಮಂತ್ರಣ ಹೋಟೆಲ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೇ 12ರಂದು ನೂತನ ಯೋಜನಾಧಿಕಾರಿಗಳಿಗೆ ಖ್ಯಾತ ಉದ್ಯಮಿಗಳು ಮತ್ತು ಅನಂತ ಹೋಟೆಲ್ ಪಾಲುದಾರರಾದ ಮಹಾದೇವ ಗುತ್ತೇದಾರ್ ,ವೆಂಕಟೇಶ್ ಕಡೇಚೂರ್, ಯಾದಗಿರಿಯ ಪಿಎಸ್ಐ ವಿಠ್ಠಲ್ ನರೋಣ, ಜನ ಜಾಗೃತಿ ವೇದಿಕೆಯ ಕೋಶಾಧಿಕಾರಿ ಡಾ.ಸದಾನಂದ ಪೆರ್ಲ ಮತ್ತಿತರರು ಸೇರಿ ಶಾಲು ಪುಷ್ಪ ನೀಡಿ ಗೌರವಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪ್ರಗತಿಗೆ ಪೂರಕವಾದ ಸಂಸ್ಥೆಯಾಗಿದ್ದು ತಾಲೂಕು ಮಟ್ಟಗಳಲ್ಲಿ ಕೆರೆ ಅಭಿವೃದ್ಧಿಯಂತಹ ಉತ್ತಮ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಮಹಾದೇವ ಗುತ್ತೇ ದಾರ್ ಸಂದರ್ಭದಲ್ಲಿ ಹೇಳಿದರು. ಯೋಜನೆಯ ಕಲಬುರಗಿ ಜಿಲ್ಲಾ ನಿರ್ದೇಶಕರಾದ ಗಣಪತಿ ಮಾಳಂಜಿ ಅಧ್ಯಕ್ಷತೆ ವಹಿಸಿದ್ದರು.ಸ್ವಾಗತ ಸಮಾರಂಭದಲ್ಲಿ ಉದ್ಯಮಿ ರಾಜೇಶ್ ದತ್ತು ಗುತ್ತೇದಾರ್, ಯೋಜನೆಯ ಜಿಲ್ಲಾ ಎಂ ಐ ಎಸ್ ಯೋಜನಾಧಿಕಾರಿ ಮಹಾಂತೇಶ ಕುಟಗಿ ಉಪಸ್ಥಿತರಿದ್ದರು.
