ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ 14.25% ರಿಂದ 15.75%ಕ್ಕೆ ಏರಿಕೆ

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ 14.25% ರಿಂದ 15.75%ಕ್ಕೆ ಏರಿಕೆ

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ 14.25% ರಿಂದ 15.75%ಕ್ಕೆ ಏರಿಕೆ 

ಬೆಂಗಳೂರು, ಮೇ 11: ರಾಜ್ಯ ಸರ್ಕಾರವು 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸಿಹಿ ಸುದ್ದಿಯನ್ನು ನೀಡಿದ್ದು, 2026ರ ಜನವರಿ 1ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆ (ಡಿಎ) ದರವನ್ನು ಶೇಕಡ 14.25ರಿಂದ ಶೇಕಡ 15.75ಕ್ಕೆ ಪರಿಷ್ಕರಿಸಿ ಮಂಜೂರು ಮಾಡಿದೆ.

ಸರ್ಕಾರದ ಆದೇಶ ಸಂಖ್ಯೆ: ಆಇ 5 ಎಸ್‌ಆರ್‌ಪಿ 2026 ಅನ್ವಯ ಈ ಪರಿಷ್ಕರಣೆ ಜಾರಿಯಾಗಲಿದ್ದು, ರಾಜ್ಯದ ಸಾವಿರಾರು ಸರ್ಕಾರಿ ನೌಕರರಿಗೆ ವೇತನದಲ್ಲಿ ಹೆಚ್ಚುವರಿ ಆರ್ಥಿಕ ನೆರವು ಲಭಿಸಲಿದೆ.

ತುಟ್ಟಿಭತ್ಯೆ ಲೆಕ್ಕಾಚಾರಕ್ಕಾಗಿ “ಮೂಲ ವೇತನ” ಎಂದರೆ ಸರ್ಕಾರಿ ನೌಕರರು ತಮ್ಮ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ಮೂಲ ವೇತನವೆಂದು ಪರಿಗಣಿಸಲಾಗುತ್ತದೆ.

ಈ ಆದೇಶದಿಂದ ಸರ್ಕಾರಿ ನೌಕರರ ಜೀವನೋಪಾಯ ವೆಚ್ಚದ ಒತ್ತಡವನ್ನು ತಗ್ಗಿಸಲು ನೆರವಾಗಲಿದ್ದು, ನೌಕರ ವಲಯದಲ್ಲಿ ಸಂತಸ ಮೂಡಿಸಿದೆ. ವೇತನ ಪರಿಷ್ಕರಣೆಯ ಭಾಗವಾಗಿ ಜಾರಿಗೆ ಬಂದಿರುವ ಈ ಹೆಚ್ಚುವರಿ ಡಿಎ ರಾಜ್ಯ ಸರ್ಕಾರಿ ನೌಕರರ ಆರ್ಥಿಕ ಸ್ಥಿತಿಗೆ ಮತ್ತಷ್ಟು ಬಲ ತುಂಬಲಿದೆ.

ಸರ್ಕಾರದ ಈ ನಿರ್ಧಾರವನ್ನು ನೌಕರ ಸಂಘಟನೆಗಳು ಸ್ವಾಗತಿಸಿದ್ದು, ನೌಕರರ ಕಲ್ಯಾಣದತ್ತ ಸರ್ಕಾರ ಕೈಗೊಂಡಿರುವ ಮಹತ್ವದ ಹೆಜ್ಜೆ ಎಂದು ಅಭಿಪ್ರಾಯಪಟ್ಟಿವೆ.

ಸರ್ಕಾರದ ಆದೇಶ ಪ್ರತಿಯನ್ನು ಪಿಡಿಎಫ್ ನಲ್ಲಿದೆ ಡೌನ್ಲೋಡ್ ಮಾಡಿಕೊಂಡು ನೋಡಿಕೊಳ್ಳಿ.

Files