ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ.ಡಾ: ಭೀಮಣ್ಣ ಮೇಟಿ
ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ.ಡಾ: ಭೀಮಣ್ಣ ಮೇಟಿ
ಶಹಪುರ : ಕನ್ನಡದ ದಾಸ ಸಾಹಿತ್ಯ ಪರಂಪರೆಗೆ ಕೊಡುಗೆ ನೀಡಿದ ಅತ್ಯಂತ ಶ್ರೇಷ್ಠ ಕವಿ ಕನಕದಾಸರು ಎಂದು ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠದ ಧರ್ಮದರ್ಶಿಗಳಾದ ಡಾ. ಬೀಮಣ್ಣ ಮೇಟಿ ಹೇಳಿದರು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ನಗರದ ಡಿ.ಡಿ.ಯು ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಕನಕ ದರ್ಶನ-02 ವಿಶೇಷ ಉಪನ್ಯಾಸ ಕಾರ್ಯಕ್ರಮದವನ್ನು ಉದ್ಘಾಟಿಸಿ ಮಾತನಾಡಿದರು. ಕನಕದಾಸರ ಜನಪರ ಚಿಂತನೆಗಳು ಜನರನ್ನು ಆಕರ್ಷಣೆಗೊಳಪಟ್ಟಿದ್ದಲ್ಲದೆ. ಅವರ ಮೌಲ್ಯಯುತ ಬದುಕು ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ ಎಂದು ನುಡಿದರು.
ಸುರಪುರ ಶ್ರೀ ಪ್ರಭು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ: ಸಾಯಬಣ್ಣ ಮೂಡಬೂಳ ಮಾತನಾಡಿ ಕನಕದಾಸರು ಕೀರ್ತನೆಗಳ ಮೂಲಕ ಕೇವಲ ಸಮಾಜವನ್ನು ಸುಧಾರಣೆ ಮಾಡದೇ ಸಂಗೀತಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸ ನೀಡಿದರು.ಅಲ್ಲದೆ ಲೋಕಮಾನ್ಯ ಸಿದ್ದಾಂತ ಅರಿತುಕೊಳ್ಳಬೇಕಾದರೆ ಕನಕದಾಸರ ಚಿಂತನೆಗಳು ಹಾಗೂ ಕೀರ್ತನೆಗಳು ಅಧ್ಯಯನ ಮಾಡಬೇಕಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಕಿರಣ್ ಪತ್ತಾರ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕಾವೇರಿ ಪಾಟೀಲ್ ಯುವ ಮುಖಂಡರಾದ ಶರಣಗೌಡ ಪೊಲೀಸ್ ಬಿರಾದರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು, ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ
ಮಾತುಗಳನ್ನಾಡಿದರು. ಮಡಿವಾಳಪ್ಪ ಪಾಟೀಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
