ಕಲ್ಯಾಣ ಕರ್ನಾಟಕ ಚಿತ್ರಕಲೆ ಸಾಹಿತ್ಯದ ಮೂಲಬೇರು: ಡಾ. ಸಾರೀಕಾದೇವಿ ಕಾಳಗಿ

ಕಲ್ಯಾಣ ಕರ್ನಾಟಕ ಚಿತ್ರಕಲೆ ಸಾಹಿತ್ಯದ ಮೂಲಬೇರು: ಡಾ. ಸಾರೀಕಾದೇವಿ ಕಾಳಗಿ

ಕಲ್ಯಾಣ ಕರ್ನಾಟಕ ಚಿತ್ರಕಲೆ ಸಾಹಿತ್ಯದ ಮೂಲಬೇರು: ಡಾ. ಸಾರೀಕಾದೇವಿ ಕಾಳಗಿ

ಕಲಬುರಗಿ, ಏ.18: ನಗರದ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ “ಪುಸ್ತಕ ಪರಿಚಯ” ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಡಾ. ಮಲ್ಲಿಕಾರ್ಜುನ ಸಿ. ಭಾಗೋಡಿ ರಚಿತ “ಕಲ್ಯಾಣ ಕರ್ನಾಟಕ ಚಿತ್ರಕಲೆ” ಕೃತಿಯನ್ನು ಪರಿಚಯಿಸಲಾಯಿತು.

 ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಾರೀಕಾದೇವಿ ಕಾಳಗಿ ಮಾತನಾಡಿ, “ಸುರಪುರ ಶೈಲಿ ಚಿತ್ರಕಲೆ ಕುರಿತು ಅಧ್ಯಯನ ಮಾಡುವ ಸಂದರ್ಭದಲ್ಲಿ ಡಾ. ಭಾಗೋಡಿಯವರು ಕ್ಷೇತ್ರಕಾರ್ಯ ನಡೆಸಿ, ಈ ಭಾಗದ ಚಿತ್ರಕಲೆಯ ಪರಂಪರೆ ಮತ್ತು ಇತಿಹಾಸವನ್ನು ಪ್ರಾಮಾಣಿಕವಾಗಿ ಪರಿಚಯಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗವು ಸಾಹಿತ್ಯ ಮತ್ತು ಚಿತ್ರಕಲೆಯ ತವರೂರಾಗಿದ್ದು, ಲಲಿತಕಲೆಗಳು ಮೊದಲಿಗೆ ಇಲ್ಲಿ ಜನಿಸಿ, ನಂತರ ಕರ್ನಾಟಕದ ಇತರೆ ಭಾಗಗಳಿಗೆ ವ್ಯಾಪಿಸಿದವು” ಎಂದು ಅಭಿಪ್ರಾಯಪಟ್ಟರು.

ಲೇಖಕರಾದ ಡಾ. ಮಲ್ಲಿಕಾರ್ಜುನ ಸಿ. ಭಾಗೋಡಿ ಅವರು ಚಿತ್ರಕಲೆಯ ಇತಿಹಾಸ ಹಾಗೂ ಅದರ ಬೆಳವಣಿಗೆ ಕುರಿತು ವಿವರಿಸಿದರು. ಮಾದನಹಿಪ್ಪರಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಾಜಕುಮಾರ ಮಾಳಗೆ ಅವರು ಕೃತಿಯ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷರಾದ ಶ್ರೀ ಅಪ್ಪಾರಾವ ಅಕ್ಕೋಣೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕರಾದ ಡಾ. ವಿಜಯಕುಮಾರ ಪರುತೆಯವರು ನಿರೂಪಣೆ ನಡೆಸಿ ವಂದಿಸಿದರು.

 ಡಾ. ರೋಲೆಕರ್ ನಾರಾಯಣ, ಡಾ. ವಿ.ಬಿ. ಬಿರಾದಾರ, ಡಾ. ಗವಿಸಿದ್ಧಪ್ಪ ಎಚ್. ಪಾಟೀಲ್, ಡಾ. ಸಿದ್ಧಪ್ಪ ಎನ್. ಹೊಸಮನಿ, ಹಣಮಂತರಾಯ ಸಲಗರ್, ಉದಯಕುಮಾರ ಬಗಲಿ, ಡಾ. ಶಿವಶರಣಪ್ಪ ಧಾಬಾ, ಸಿದ್ಧರಾಮ ಸರಸಂಬಿ, ವೀರಭದ್ರಪ್ಪ ಗುರಮಿಠಕಲ್, ವಿಶ್ವನಾಥ ಭಕರೆ, ಬಿ. ಎಚ್. ನಿರಗುಡಿ, ಗಂಗಾಧರ ಪಾಟೀಲ್, ರೇವಣಸಿದ್ಧಪ್ಪ ದುಕಾನ್, ಡಾ. ಸಿದ್ರಾಮಯ್ಯ ಮಠ, ರಾಜೇಂದ್ರ ಝಳಕಿ, ಪ್ರೋ. ಶಂಕರ ರೆಡ್ಡಿ ಪಾಟೀಲ್ ಹಾಗೂ ಶ್ರೀಶೈಲ್ ಮದಾಣೆಯವರು ಉಪಸ್ಥಿತರಿದ್ದು