ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಿದೆ
ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಿದೆ
ಜಾತ್ಯಾತೀತ ಮನೋಭಾವ ಬೆಳೆಸುವ ಶಕ್ತಿ ಕ್ರೀಡೆಗಿದೆ ,ಕ್ರೀಡೆ ಕೇವಲ ಒಂದು ಆಟವಾಗಿರದೇ ಜಾತ್ಯಾತೀತವಾಗಿ ಸಮುದಾಯಗಳ ನಡುವೆ ಪ್ರೀತಿಯನ್ನು ಹುಟ್ಟು ಹಾಕಿ ಸಮಾಯದ ಹಿತ ಕಾಪಾಡುವ ಶಕ್ತಿಯನ್ನು ಹೊಂದಿದೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ. ಎಸ್. ಪಾಟೀಲ ಹೇಳಿದರು.
ನರೇಗಲ್ ಪಟ್ಟಣದ 3ನೇ ವಾರ್ಡ್ ಆಶ್ರಯ ಕಾಲೋನಿ ಹಾಗೂ ಬುಲ್ಡೋಜರ್ ನಗರದ ಆಸ್ರಯದಲ್ಲಿ ಶಾಸಕ ಜಿ. ಎಸ್. ಪಾಟೀಲರ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ʼಸಾವಿರ ಕೆರೆಗಳ ಸರದಾರ ಟ್ರೋಫಿ-2026ʼ 7ಸೈಡ್ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಬುಧವಾರ ಸಂಜೆ ಚಾಲನೆ ನೀಡಿ ಮಾತನಾಡಿದರು.
ನಾನು ಕ್ರಿಕೆಟ್ ಆಟಗಾರನಾಗಿದ್ದು ಆಗ ಟೆಸ್ಟ್ ಪಂದ್ಯಾವಳಿಗೆ ಮಹತ್ವ ನೀಡಲಾಗುತಿತ್ತ. ನಂತರ 50 ಓವರ್‌ಗಳ ಪಂದ್ಯಾವಳಿ ಬಂದವು. ಈಗ ಟಿ-20 ಎನ್ನುವುದು ಹೆಚ್ಚು ಪ್ರಚಲಿತವಾಗಿದೆ. ಅಂದರೆ ಕಾಲಕ್ಕೆ ತಕ್ಕಂತೆ ಆಟ, ನಿಯಮ, ಆಸಕ್ತಿ ಬದಲಾಗುತ್ತಾ ಹೋಗುತ್ತವೆ. ಅದರಂತೆ ಗ್ರಾಮೀಣ ಭಾಗದಲ್ಲಿ 7ಸೈನ್, 6ಸೈಡ್, 8ಸೈಡ್ ಎನ್ನುವ ಪಂದ್ಯಾವಳಿಗಳ ಆಯೋಜನೆ ನಡೆಯುತ್ತಿವೆ. ಕಡಿಮೆ ಅವಧಿಯಲ್ಲಿ ಹೆಚ್ಚು ಮನರಂಜನೆ ನೀಡುವ ಪಂದ್ಯಾವಳಿ ಈಗೀನ ಟ್ರೆಂಡ್ ಆಗಿದೆ. ಬದಲಾವಣೆಗೆ ತಕ್ಕಂತೆ ಯುವಕರು ಕ್ರೀಡೆಗಳಲ್ಲಿ ಪಾಲ್ಗೊಂಡು ಯಶಸ್ವಿಗಳಿಸಲು ಮುಂದಾಗಬೇಕು ಎಂದರು. ಆಟದಲ್ಲಿ ಸೋತರು ಪರವಾಗಿಲ್ಲ ಕಲಿಯುತ್ತಾ ಹೋಗಬೇಕು ಹಾಗೂ ತಪ್ಪುಗಳನ್ನು ತಿದ್ದಿಕೊಂಡು ಗೆಲುವಿನ ಕಡೆಗೆ ಸಾಗಬೇಕು. ಆಯೋಜಕರು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ದಾನಿಗಳು, ಆಟಗಾರರು ಹಾಗೂ ಜನರು ಖುಷಿ ಪಡುವಂತೆ ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು. ಎ.9,10 ರಂದು ರೋಣದಲ್ಲಿ ಯುವಕರಿಗಾಗಿ ಉದ್ಯೋಗ ಮೇಳ ಹಾಗೂ ಮಹಿಳೆಯರಿಗಾಗಿ ಮಹಿಳಾ ಸಬಲೀಕರಣದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.
ಈ ವೇಳೆ ವಾರ್ಡ್ ಪರವಾಗಿ ಆಯೋಜನಕರು ಶಾಸಕರನ್ನು ಸನ್ಮಾನಿಸಿದರು. ಮುಖಂಡರಾದ ನಿಂಗನಗೌಡ ಲಕ್ಕನಗೌಡ್ರ, ಡಾ. ಕೆ. ಬಿ. ಧನ್ನೂರ, ವೀರನಗೌಡ ಪಾಟೀಲ, ಅರುಣ ಕಾಮತ, ಯೂಸೂಫ್ ಇಟಗಿ, ಬಸವರಾಜ ನವಲಂದ, ಎ. ಸಿ. ಪಾಟೀಲ, ಸಂತೋಷ ಹನಮಸಾಗರ, ಕಳಕನಗೌಡ ಪೊಲೀಸ್‌ಪಾಟೀಲ, ಶೇಖಪ್ಪ ಜುಟ್ಲ, ಆನಂದ ನಡುವಲಕೇರಿ, ಶೇಖಪ್ಪ ಕೆಂಗಾರ, ರೀಯಾಜ್ ಆಲೂರ, ದರ್ಶನ ಡುಮ್ಮನ್ನವರ, ಖಾದರಸಾಬ್ ಬೇಪಾರಿ, ಲಾಲಸಾಬ್ ಬೇಪಾರಿ, ಸದ್ದಾಂ ನಶೇಖಾನ್ , ಶರಣಪ್ಪ ಹಂಚಿನಾಳ, ಬಿ. ಬಿ. ಮಲ್ಲನಗೌಡ್ರ ಇದ್ದರು.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
